ತಮ್ಮ ಸೌಂದರ್ಯಕ್ಕೆ ತಿಂಗಳಿಗೆ 01 ಲಕ್ಷ ಖರ್ಚು ಮಾಡುವ,09 ಫ್ಲಾಪ್ ಸಿನಿಮಾ ನೀಡಿರುವ ಈ ನಾಯಕಿಯ ಸಂಭಾವನೆ 11 ಕೋಟಿ..!

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಅಥವಾ ಹೀರೋಯಿನ್ ಅಭಿನಯಿಸಿದ ಚಿತ್ರವೊಂದು ಸೋತರೆ, ಆ ಸೋಲು ಚಿತ್ರರಂಗದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತೆ. ಕೇವಲ ನಿರ್ಮಾಪಕರನ್ನು ನಷ್ಟದ ಕೂಪಕ್ಕೆ ದೂಡುವುದಲ್ಲದೇ ಆ ಚಿತ್ರದ ನಿರ್ದೇಶಕನ ಭವಿಷ್ಯವನ್ನು ಕೂಡ ಸೋಲು ಅತಂತ್ರವನ್ನಾಗಿಸುತ್ತೆ.

ಸ್ಟಾರ್‌ ಗಳ ಮಾರ್ಕೆಟ್ ವ್ಯಾಲ್ಯೂ ಕೂಡ ಈ ಒಂದೇ ಒಂದು ಸೋಲು ಕಡಿಮೆ ಮಾಡುತ್ತೆ. ಇನ್ನೂ ಕೆಲವೊಮ್ಮೆ ಅದೃಷ್ಟ ಕೈ ಕೊಟ್ಟು ಅವಕಾಶಕ್ಕೆ ಪರದಾಡುವಂತಹ ಸ್ಥಿತಿ ಕೂಡ ನಿರ್ಮಾಣವಾಗುತ್ತೆ. ಆದರೆ, ಇಲ್ಲೊಬ್ಬರು ನಾಯಕಿ ಇದ್ದಾರೆ. ಒಂದಲ್ಲ.. ಎರಡಲ್ಲ.. ಒಂಬತ್ತು ಫ್ಲಾಪ್ ಚಿತ್ರಗಳನ್ನು ನೀಡಿರುವ ಹೆಗ್ಗಳಿಕೆ ಇವರದ್ದು. ಆದರೂ.. ಕೂಡ ಇವರ ಬೆಲೆ ಚೂರು ಕಡಿಮೆಯಾಗಿಲ್ಲ. ಅವಕಾಶಗಳಿಂದ ಕೂಡ ಇವರು ವಂಚಿತರಾಗಿಲ್ಲ. ಬದಲಿಗೆ ನಿರ್ಮಾಪಕರು ಹನ್ನೊಂದು ಕೋಟಿಯನ್ನು ಸಂಭಾವನೆಯನ್ನು ಇವರಿಗೆ ನೀಡಿ ರತ್ನಗಂಬಳಿಯನ್ನು ಹಾಕಿ ಸ್ವಾಗತ ಕೋರುತ್ತಾರೆ. ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ನಾಯಕಿ ಬೇರೆ ಯಾರು ಅಲ್ಲ ಬದಲಿಗೆ ತಾಪ್ಸಿ ಪನ್ನು.

Despite 9 flops this actress earns Rs 11 crore per film and spends Rs 1 lakh a month on her diet

ಹೌದು. ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ದ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವ ತಾಪ್ಸಿ ಪನ್ನು, ತಮ್ಮ ಚಿತ್ರ ಜೀವನವನ್ನು ಶುರು ಮಾಡಿದ್ದು ದಕ್ಷಿಣದಿಂದ.

ಆದರೆ, ಇಲ್ಲಿ ಕೇವಲ ಮರ ಸುತ್ತುವ ಪಾತ್ರಗಳಿಗಷ್ಟೇ ತಾಪ್ಸಿ ಸೀಮಿತವಾಗಿದ್ದರು. ಹೀಗಾಗಿಯೇ ಏನೋ ಬೇಸತ್ತು ಬಾಲಿವುಡ್‌ಗೆ ವಲಸೆ ಹೋದ ತಾಪ್ಸಿ ಪನ್ನು, ಸದ್ಯ ಹಿಂದಿ ಚಿತ್ರರಂಗದಲ್ಲಿ ಹನ್ನೊಂದು ವರ್ಷಗಳನ್ನು ಪೂರೈಸಿದ್ದಾರೆ. ಈ ಹನ್ನೊಂದು ವರ್ಷದಲ್ಲಿ ಹತ್ತಾರು ಪಾತ್ರಗಳನ್ನು ನಿರ್ವಹಿಸಿರುವ ತಾಪ್ಸಿ ಪನ್ನು, ಜುಡ್ವಾ 2, ಬೇಬಿ, ಮನ್‌ಮರ್ಜಿಯಾ, ಡಂಕಿ, ಅಂತಹ ಕಮರ್ಷಿಯಲ್ ಚಿತ್ರಗಳನ್ನು ಮಾಡಿದ್ದಾರೆ. ಪಿಂಕ್, ನಾಮ್ ಶಬಾನಾ, ಗೇಮ್ ಓವರ್, ಬದ್ಲಾ ಸೇರಿ ಅನೇಕ ಮಹಿಳಾ ಪ್ರಧಾನ ಚಿತ್ರಗಳನ್ನು ಕೂಡ ತಾಪ್ಸಿ ಮಾಡಿದ್ದಾರೆ.

Despite 9 flops this actress earns Rs 11 crore per film and spends Rs 1 lakh a month on her diet

ಇಂಥಾ ತಾಪ್ಸಿ ಈ ಹನ್ನೊಂದು ವರ್ಷದಲ್ಲಿ 09 ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ. ಇನ್ನೂ ಕೇವಲ ತಾಪ್ಸಿ ಹೆಸರು ಇರುವ ಕಾರಣಕ್ಕೆ ಚಿತ್ರ ಗೆದ್ದ ಉದಾಹರಣೆ ಕೂಡ ಇಲ್ಲ. ಆದರೂ ತಾಪ್ಸಿಗೆ ಚಿನ್ನದ ಬೇಡಿಕೆ ಬಾಲಿವುಡ್‌ನಲ್ಲಿದೆ. ಇದು ಅನೇಕ ನಾಯಕಿಯರಿಗೆ ಅಚ್ಚರಿ ಅನಿಸಿದರೆ, ಇನ್ನೂ ಕೆಲ ನಾಯಕಿಯರ ಹೊಟ್ಟೆ ಉರಿಗೆ ಕೂಡ ಕಾರಣವಾಗಿದೆ.

ಅಂದ್ಹಾಗೇ ಚಿತ್ರವೊಂದಕ್ಕೆ ಹನ್ನೊಂದು ಸಂಭಾವನೆ ಪಡೆಯುವ ತಾಪ್ಸಿ ಪನ್ನು, ತಮ್ಮ ಅಂದ ಚೆಂದ ಸೌಂದರ್ಯವನ್ನು ಕಾಪಾಡಿಕೊಳ್ಳಲು ತಿಂಗಳಿಗೆ ಒಂದು ಲಕ್ಷವನ್ನು ಖರ್ಚು ಮಾಡುತ್ತಾರೆ. ಖುದ್ದು ಈ ಹಿಂದೆ ಲಲ್ಲನ್ ಟಾಪ್‌ ಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ಪನ್ನು ಈ ಮಾತು ಹೇಳಿದ್ದರು. ನನ್ನ ಪ್ರತಿ ಚಿತ್ರದೊಂದಿಗೆ ನನ್ನ ಆಹಾರ ಕ್ರಮ ಬದಲಾಗುತ್ತೆ ಎಂದು ಈ ಹಿಂದೆ ಹೇಳಿದ್ದ ತಾಪ್ಸಿ ಪ್ರತಿ ನಾಲ್ಕು ಅಥವಾ ಐದು ವರ್ಷದ ನಂತರ ನಿಮ್ಮ ದೇಹ ಬದಲಾಗುತ್ತೆ. ಚಯಾಪಚಯ ಪ್ರಕ್ರಿಯೆ ಬದಲಾಗುತ್ತೆ. ನಮ್ಮಲ್ಲಿ ಹೆಚ್ಚಿನವರಿಗೆ ವೃತ್ತಿಪರರ ಸಲಹೆಯ ಅಗತ್ಯ ಇರುತ್ತೆ ಎಂದಿರುವ ತಾಪ್ಸಿ ಪನ್ನು, ನಾವು ಯಾವ ನಗರ ಅಥವಾ ದೇಶದಲ್ಲಿದ್ದೇವೆ ಎನ್ನುವ ಆಧಾರದ ಮೇಲೆ ನನ್ನ ಡಯಟ್ ಪ್ಲಾನ್ ಸಿದ್ಧವಾಗುತ್ತೆ ಎಂದು ಹಿಂದೆ ಹೇಳಿದ್ದರು ತಾಪ್ಸಿ ಪನ್ನು.

ಸದ್ಯಕ್ಕೆ ತಾಪ್ಸಿ ಪನ್ನು ಅಕ್ಷಯ್ ಕುಮಾರ್ ಜೊತೆ ಐದನೇ ಚಿತ್ರವನ್ನು ಒಪ್ಪಿಕೊಂಡಿದ್ಧಾರೆ. ನರೇಂದ್ರ ಹಿರಾವತ್ ನಿರ್ದೇಶನದ ಈ ಚಿತ್ರಕ್ಕೆ ತಿರಂಗಾ ಎಂದು ಹೆಸರಿಡಲಾಗಿದೆ. ಈ ಚಿತ್ರ ಹೊರತು ಪಡಿಸಿದರೆ ಕಥೆಗಾರ್ತಿ ಕನ್ನಿಕಾ ದಿಲ್ಲೋನ್ ಜೊತೆ ಮತ್ತೊಮ್ಮೆ ಕೈ ಜೋಡಿಸಿರುವ ತಾಪ್ಸಿ ಸದ್ಯದಲ್ಲಿಯೇ ಗಾಂಧಾರಿಯಾಗಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X