For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಗೆ ಬಂದ ಪತ್ತೇದಾರ ಭಕ್ಷಿ ಸ್ವಾಗತಿಸಿ

  By ಜೇಮ್ಸ್ ಮಾರ್ಟಿನ್
  |

  ಯಶ್ ರಾಜ್ ಫಿಲಂ ನಿರ್ಮಾಣದಲ್ಲಿ ಬರುತ್ತಿರುವ ಡಿಟೇಕ್ಟಿವ್ ಬ್ಯೋಮಕೇಶ್ ಭಕ್ಷಿ ಚಿತ್ರದ ಟೀಸರ್ ಟ್ರೇಲರ್ ಹೊರಬಂದಿದೆ. ಹೌದು ಇದು ದೂರದರ್ಶನದ ಅತ್ಯಂತ ಜನಪ್ರಿಯ ಸರಣಿ ಬ್ಯೋಮಕೇಶ್ ಭಕ್ಷಿಯ ಸಿನಿಮಾ ರೂಪಾಂತರ.

  ಶರದಿಂದು ಬಂಡೋಪಾಧ್ಯಾಯ್ ಅವರ ಕೃತಿಯ ಕಾಲ್ಪನಿಕ ಪಾತ್ರ ಬ್ಯೋಮಕೇಶ್ ಭಕ್ಷಿಯನ್ನು ಭಾರತೀಯ ಸಾಹಿತ್ಯ ಪ್ರೇಮಿಗಳು ಶೆರ್ಲಾಕ್ ಹೋಮ್ ಗೆ ಬದಲಾದ ಪಾತ್ರವಾಗಿ ಕಂಡರು. ಶರದಿಂದು ಅವರು ಕೂಡಾ ಇದು ಆರ್ಥರ್ ಕಾನನ್ ಡಾಯ್ಲ್ ಅವರ ಶೆರ್ಲಾಕ್ ಹೋಮ್ಸ್ ಕೃತಿಯ ಸ್ಪೂರ್ತಿ ಪಡೆದ ಪಾತ್ರ ಎಂದಿದ್ದರು.

  ಸುಮಾರು 33 ಕಥೆಗಳುಳ್ಳ ಈ ಕಥೆಯನ್ನು ದೂರದರ್ಶನದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಸಾರ ಮಾಡಲಾಯಿತು. ವಕೀಲಿಕೆ ಬಿಟ್ಟು ಖಾಸಗಿ ಪತ್ತೇದಾರನ ಪಾತ್ರದಲ್ಲಿ ರಜಿತ್ ಕಪೂರ್ ಅವರು ಅದ್ಭುತ ನಟನೆ ನೀಡಿದ್ದರು.

  ಈಗ ಇದೇ ಬೆಳ್ಳಿ ತೆರೆಯಲ್ಲಿ ಹೊಸ ರಂಗಿನೊಂದಿಗೆ ಬರುತ್ತಿದೆ. ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಡಿಕ್ಟೇಟಿವ್ ಬ್ಯೋಮಕೇಶ್ ಭಕ್ಷಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಟಿಸುತ್ತಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಒಮ್ಮೆ ವೀಕ್ಷಿಸಿ

  1943ರ ಕಾಲದಲ್ಲಿ ಕಲ್ಕತ್ತಾ(ಈಗಿನ ಕೋಲ್ಕತ್ತಾ) ಇದ್ದ ಚಿತ್ರಣ, ನಿಗೂಢವಾದ ಕೇಸ್ ಗಳನ್ನು ಭಕ್ಷಿ ಸುಲಭವಾಗಿ ಪರಿಹರಿಸುವ ಕಥಾನಕವನ್ನು ಸುಂದರವಾಗಿ ಬ್ಯಾನರ್ಜಿ ಹೆಣೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.ಆದರೆ, ತನ್ನ ಚಿತ್ರ ಹಾಲಿವುಡ್ ನಲ್ಲಿ ತೆರೆ ಕಂಡಿರುವ ಶೆರ್ಲಾಕ್ ಹೋಮ್ಸ್ ಚಿತ್ರವನ್ನಾಗಲಿ ಮೂಲ ಕೃತಿಯನ್ನಾಗಲಿ ಆಧಾರವಾಗಿಟ್ಟುಕೊಂಡಿಲ್ಲ. ಶರದಿಂದು ಅವರ ಕೃಗೆ ಬ್ಯೋಮಕೇಶ್ ಭಕ್ಷಿ ಆಧಾರವಾಗಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

  ಈ ಹಿಂದೆ 1967, 1974, 2009, 2010, 2012, 2013ರಲ್ಲಿ ಬೆಂಗಾಳಿ, ಹಿಂದಿಯಲ್ಲಿ ಬ್ಯೋಮಕೇಶ್ ಭಕ್ಷಿ ಚಿತ್ರ ತೆರೆಗೆ ಬಂದಿತ್ತು. ಅದರೆ, ಈಗ ಯಶ್ ರಾಜ್ ಫಿಲಂ ದೊಡ್ಡ ಪ್ರಮಾಣದಲ್ಲಿ ಚಿತ್ರ ನಿರ್ಮಾಣ ಮಾಡಿ ಬಿಡುಗಡೆಗೆ ಸಿದ್ಧಗೊಳಿಸಿದೆ.

  English summary
  Yash Raj Film's Detective Byomkesh Bakshy teaser trailer is out. From the first look of the teaser one will get to know that this film will hit the right chord.Directed by Dibakar Banerjee, Detective Byomkesh Bakshy teaser trailer looks impressive. Sushant Singh Rajput plays the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X