Deva Box Office Day 1 ; ತಮ್ಮದೇ ಚಿತ್ರವನ್ನು ಹಿಂದಿಕ್ಕಿದ ಶಾಹಿದ್ ಕಪೂರ್, 44% ಹೆಚ್ಚು ಹಣ ಗಳಿಸಿದ 'ದೇವ'..!

ಕಳೆದ ವರ್ಷ ಬಾಲಿವುಡ್ ಚಿನ್ನದ ಬೆಳೆ ಬೆಳೆಯಲಿಲ್ಲ. ಭೂಲ್ ಭೂಲಯ್ಯ 3, ಸಿಂಗಂ ಅಗೇನ್, ಹೊರತು ಪಡಿಸಿದರೆ ಬೇರೆ ಯಾವ ಸೂಪರ್ ಸ್ಟಾರ್‌ ಅಭಿನಯಿಸಿದ ಚಿತ್ರ ಗೆಲ್ಲಲಿಲ್ಲ. ಆದರೆ, ಆಶ್ಚರ್ಯಕರವೆಂಬಂತೆ ಕಳೆದ ವರ್ಷ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರಗಳು ಹಿಂದಿ ಉದ್ಯಮದ ಕೈ ಹಿಡಿದಿವೆ. ಮುಂಜ್ಯಾ, ಸ್ತ್ರೀ 2 ಅಂತಹ ಚಿತ್ರಗಳು ಹಾಕಿದ ಬಂಡವಾಳದ ಮೇಲೆ ಭಾರೀ ಭಯಂಕರ ಲಾಭವನ್ನು ಮಾಡಿವೆ. ಈ ವರ್ಷ ಕೂಡ ಈ ಟ್ರೆಂಡ್ ಮುಂದುವರೆಯುವ ನಿರೀಕ್ಷೆ ಹಿಂದಿ ಉದ್ಯಮಕ್ಕಿದೆ.

ಇದರ ನಡುವೆ ಸ್ಟಾರ್‌ಗಳ ಮೇಲೆ ಕೂಡ ಬ್ಲಾಕ್‌ಬಸ್ಟರ್ ರಿಸಲ್ಟ್ ಕೊಡುವ ಒತ್ತಡ ಇದೆ. ಈ ಒತ್ತಡವನ್ನು ನಿಭಾಯಿಸುತ್ತಾ ಅಕ್ಷಯ್ ಕುಮಾರ್ ಹಾಗೂ ಹೀಗೂ ಈ ವರ್ಷ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದಾರೆ. ತಮ್ಮ ಸ್ಕೈ ಫೋರ್ಸ್ ಚಿತ್ರದ ಮೂಲಕ ವರ್ಷಗಳ ನಂತರ ನೂರು ಕೋಟಿಯ ಗಡಿಯನ್ನು ಪಾರು ಮಾಡಲಿದ್ದಾರೆ. ಶಾಹಿದ್ ಕಪೂರ್ ಕೂಡ ಇಂತಹದ್ದೇ ಪವಾಡ ಮಾಡುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

Deva Box Office Day 1 Shahid Kapoor and Pooja Hegde s film opens 44 higher than Jersey

ಹೌದು, ಶಾಹಿದ್ ಕಪೂರ್ ಅಭಿನಯದ ದೇವ ಚಿತ್ರ ನಿನ್ನೆ ತೆರೆಗೆ ಬಂದಿದೆ. ಮೊದಲ ದಿನ ₹ 5.78 ಕೋಟಿಯನ್ನು ಗಳಿಸಿದೆ. ನಿಜಾ, ಶಾಹಿದ್ ಕಪೂರ್ ಅವರ ತಾರಾ ವರ್ಚಸ್ಸಿಗೆ ಈ ಗಳಿಕೆ ಕಡಿಮೆಯೇ. ಆದರೆ. ಚಿತ್ರದ ಗಳಿಕೆ ಶಾಹಿದ್ ಕಪೂರ್ ಅಭಿನಯದ ಹಿಂದಿನ ಜೆರ್ಸಿ ಚಿತ್ರಕ್ಕಿಂತ ಚೆನ್ನಾಗಿದೆ. ಜೆರ್ಸಿ ಮೊದಲ ದಿನ ನಾಲ್ಕು ಕೋಟಿಯನ್ನಷ್ಟೇ ಗಳಿಸಿತ್ತು.

ಇನ್ನು ಚಿತ್ರಕ್ಕೆ ಮಾಸ್ ಬೆಲ್ಟ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲಾರ್ಧ ತುಸು ಬೋರ್ ಆಗುತ್ತೆ ಎಂದು ವಿಮರ್ಷಕರು ಹೇಳಿದರು ಕೂಡ ಚಿತ್ರದ ಕ್ಲೈಮ್ಯಾಕ್ಸ್‌ಗೆ ಚಿತ್ರಮಂದಿರದಲ್ಲಿ ಕರತಾಡನದ ಸದ್ದು ಕೇಳುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಂದು ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿ ಚಿತ್ರ ಸಂಜೆ ಆರು ಗಂಟೆಯ ಸಮಯಕ್ಕೆ ₹ 3.78 ಕೋಟಿಯನ್ನು ಗಳಿಸಿದೆ.

ಅಂದ್ಹಾಗೇ ದೇವ ಚಿತ್ರ ದಶಕದ ಹಿಂದೆ ಬಂದ ಮಲಯಾಳಂನ ಮುಂಬೈ ಪೊಲೀಸ್ ಚಿತ್ರದ ರಿಮೇಕ್. ಈ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಆಂಡ್ರೂಸ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಚಿತ್ರಕ್ಕೆ ನಿರಸ ಪ್ರತಿಕ್ರಿಯೆ ಸಿಗಲು ಇದೇ ಪ್ರಮುಖ ಕಾರಣ. ಹೀಗಾಗಿ ಪ್ಯಾನ್ ಇಂಡಿಯಾ ಕಾಲದಲ್ಲಿ ದಶಕದ ಹಿಂದಿನ ಚಿತ್ರವನ್ನು ರಿಮೇಕ್ ಮಾಡಿ ಶಾಹಿದ್ ಕಪೂರ್ ಎಡವಿದರು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಚಿತ್ರದ ಫಲಿತಾಂಶ ಈಗಲೇ ನಿರ್ಧಾರ ಮಾಡುವುದು ತಪ್ಪಾದರೂ ಈ ಫ್ಯಾಕ್ಟರ್‌ದಿಂದ ಮುಂದೆ ಚಿತ್ರದ ಗಳಿಕೆ ಕುಸಿಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತೆ ಇಲ್ಲ. ಇನ್ನು ಶಾಹೀದ್ ಕಪೂರ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಕೂಡ ದೇವ ಚಿತ್ರದ ಮೊದಲ ದಿನಗ ಗಳಿಕೆ ಕಡಿಮೆ ಇದೆ. ಶಾಹಿದ್ ಅಭಿನಯದ ಹಿಂದಿನ ಚಿತ್ರಗಳ ಗಳಿಕೆಯ ಅಂಕಿ ಅಂಶ ಇಲ್ಲಿದೆ.

ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದ ಶಾಹಿದ್ ಕಪೂರ್ ಚಿತ್ರಗಳು

ಕಬೀರ್ ಸಿಂಗ್ - ₹ 20.21 ಕೋಟಿ
ಪದ್ಮಾವತ್ - ₹ 19 ಕೋಟಿ
ಶಾನ್ದಾರ್ - ₹ 13.10 ಕೋಟಿ
ಆರ್.ರಾಜ್ ಕುಮಾರ್ - ₹ 10.10 ಕೋಟಿ
ಉಡ್ತಾ ಪಂಜಾಬ್ - ₹ 10.5 ಕೋಟಿ
ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ - ₹ 7.2 ಕೋಟಿ
ಮೌಸಮ್ - ₹6.75 ಕೋಟಿ
ಬತ್ತಿ ಗುಲ್ ಮೀಟರ್ ಚಾಲು -₹ 6.76 ಕೋಟಿ
ಹೈದರ್ - ₹ 6.14 ಕೋಟಿ
ರಂಗೂನ್ - ₹6.07 ಕೋಟಿ

ಒಟ್ನಲ್ಲಿ ಸದ್ಯ ಶಾಹಿದ್ ಕಪೂರ್ ಅಭಿನಯದ ದೇವಾ ಚಿತ್ರದ ಭವಿಷ್ಯ ಮೌತ್ ಪಬ್ಲಿಸಿಟಿ ಮೇಲೆ ನಿಂತಿದೆ. ಈ ಸೋಮವಾರದ ಮುಂಜಾನೆಯಂದು ದೇವ ಗೆದ್ದನಾ? ಬಿದ್ದನಾ ಎನ್ನುವ ಪ್ರಶ್ನೆಗೆ ಕೂಡ ಸ್ಪಷ್ಟವಾಗಿ ಸಿಗಲಿದೆ.

Disclaimer: ದೇವ ಚಿತ್ರದ ಮೊದಲ ದಿನದ ಗಳಿಕೆಯ ಈ ಅಂಕಿ ಅಂಶಗಳನ್ನು ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X