For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಭಂಟನಾಗಲು ಮರಾಠಿಯಿಂದ ಬಂದ ನಟ

  |

  ಭಾರತೀಯ ಸಿನಿಮಾ ರಂಗದ ಕಣ್ಣು ಪ್ರಭಾಸ್‌ ಮೇಲೆ ಕೇಂದ್ರಿತವಾಗಿದೆ. 'ಬಾಹುಬಲಿ' ಮೂಲಕ ಜಾಗತಿಕ ಸ್ಟಾರ್ ಆಗಿರುವ ಪ್ರಭಾಸ್ ನಟಿಸುವ ಎಲ್ಲ ಸಿನಿಮಾಗಳು ಇನ್ನುಮುಂದೆ ಪ್ಯಾನ್ ಸಿನಿಮಾಗಳೇ. ಬಾಲಿವುಡ್‌ ಟಾಪ್ ನಿರ್ದೇಶಕರು ಸಹ ಪ್ರಭಾಸ್ ಅನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.

  ಇದೀಗ ಪ್ರಭಾಸ್ 'ಆದಿಪುರುಷ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ಟಿ-ಸೀರೀಸ್‌ನ ಭೂಷಣ್ ಕುಮಾರ್ ಬಂಡವಾಳ ಹೂಡಿಸಿದ್ದಾರೆ. ಈ ಸಿನಿಮಾ ಭಾರತದ ಈವರೆಗಿನ ಅತಿ ಹೆಚ್ಚಿನ ಬಜೆಟ್‌ನ ಸಿನಿಮಾ ಆಗಿರಲಿದೆ.

  'ಆದಿಪುರುಷ್' ಸಿನಿಮಾವು ರಾಮಾಯಣದ ಕತೆ ಆಧರಿಸಿದ ಸಿನಿಮಾ ಆಗಿದ್ದು, ಪ್ರಭಾಸ್ ರಾಮನಾಗಿ ನಟಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಸೀತೆಯಾಗಿ ಕೃತಿ ಸೆನನ್ ಆಯ್ಕೆಯಾಗಿದ್ದಾರೆ. ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ ಸನ್ನಿ ಸಿಂಗ್. ಇದೀಗ ರಾಮಾಯಣದ ಮುಖ್ಯ ಪಾತ್ರಗಳಲ್ಲಿ ಒಂದಾದ ಹನುಮಂತನ ಪಾತ್ರ ಯಾರು ಮಾಡಲಿದ್ದಾರೆ ಎಂಬ ಕುತೂಹಲವಿತ್ತು. ಆ ಕುತೂಹಲ ಅಂತ್ಯವಾಗಿದೆ.

  ಮರಾಠಿ ನಟ ದೇವದತ್ತ ನಗೆ 'ಆದಿಪುರುಷ್' ಸಿನಿಮಾದಲ್ಲಿ ಹನುಮಂತನ ಪಾತ್ರದಲ್ಲಿ ನಟಿಸುವುದು ಬಹುತೇಕ ಖಾತ್ರಿಯಾಗಿದೆ. ಈಗಾಗಲೇ ಕೆಲವಾರು ಪೌರಾಣಿಕ ಧಾರಾವಾಹಿಗಳಲ್ಲಿ, ಕೆಲವು ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿರುವ ಭಾರಿ ಅಂಗಸೌಷ್ಟವ ಹೊಂದಿರುವ ದೇವದತ್ತ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ.

  ದೇವದತ್ತ ನಗೆ ಕೆಲವು ಮರಾಠಿ ಧಾರಾವಾಹಿಗಳಲ್ಲಿ ನಟಿಸುವ ಜೊತೆಗೆ, ಹಿಂದಿಯ 'ಸಂಘರ್ಷ್', 'ಸತ್ಯಮೇವ ಜಯತೆ', 'ತಾನಾಜಿ' ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಈಗಾಗಲೇ 'ಆದಿಪುರುಷ್' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮುಂಬೈನಲ್ಲಿ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. 'ಸಲಾರ್' ಹಾಗೂ 'ಆದಿಪುರುಷ್‌' ಸಿನಿಮಾಗಳಲ್ಲಿ ಜೊತೆ-ಜೊತೆಯಾಗಿ ನಟಿಸುತ್ತಿದ್ದಾರೆ ಪ್ರಭಾಸ್. ಕೊರೊನಾ ಕಾರಣ 'ಆದಿಪುರುಷ್' ಚಿತ್ರೀಕರಣ ಬಂದ್ ಆಗಿತ್ತು. ಜುಲೈ ಮೊದಲ ವಾರದಲ್ಲಿ ಸಿನಿಮಾದ ಚಿತ್ರೀಕರಣ ಪುನಃ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

  ಪಾಕ್ ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟ ಇಮ್ರಾನ್ ಖಾನ್ | Filmibeat Kannada

  'ಆದಿಪುರುಷ್' ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಲಿದ್ದಾರೆ. ಇವರು ಈ ಮುಂಚೆ 'ತಾನಾಜಿ', ಮರಾಠಿಯಲ್ಲಿ ಪ್ರಶಸ್ತಿ ವಿಜೇತ 'ಲೋಕಮಾನ್ಯ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 'ಆದಿಪುರುಷ್' ಓಂ ರಾವತ್‌ರ ಮೂರನೇ ಸಿನಿಮಾ.

  English summary
  Marathi actor Devdatta Nage to play Hanuman role in Adipurush movie. Prabhas playing the lead role in that movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X