For Quick Alerts
  ALLOW NOTIFICATIONS  
  For Daily Alerts

  ಬಿಕಿನಿ ಧರಿಸಿ ಟೀಕೆಗೊಳಗಾದ 'ಪಾರ್ವತಿ' ಪಾತ್ರಧಾರಿ ಸೋನಾರಿಕಾ

  By ಸೋನು ಗೌಡ
  |

  ಹಿಂದಿ ಖಾಸಗಿ ಚಾನೆಲ್ 'ಲೈಫ್ ಓಕೆ'ಯಲ್ಲಿ ಪ್ರಸಾರವಾಗುವ 'ದೇವೋನ್ ಕೆ ದೇವ್ ಮಹಾದೇವ್' ಎಂಬ ಧಾರಾವಾಹಿಯಲ್ಲಿ ಶಿವ ದೇವನ ಪತ್ನಿ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿಂದಿ ಕಿರುತೆರೆ ನಟಿ ಸೋನಾರಿಕಾ ಭದೊರಿಯಾ ಅವರು ಬಿಕಿನಿ ಧರಿಸಿರುವ ಫೋಟೋ ಅಪ್ ಲೋಡ್ ಮಾಡಿ ಇದೀಗ ಟೀಕೆಗೆ ಗುರಿಯಾಗಿದ್ದಾರೆ.

  ಇತ್ತೀಚೆಗೆ ಕಿರುತೆರೆ ನಟಿ ಸೋನಾರಿಕಾ ಅವರು ತಾವು ಹಾಟ್ ಅಂಡ್ ಸೆಕ್ಸಿಯಾಗಿ ಬಿಕಿನಿಯಲ್ಲಿ ತೆಗೆಸಿಕೊಂಡಿದ್ದ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಇದರಿಂದ ಇದೀಗ ನಟಿ ಸೋನಾರಿಕಾ ಅವರಿಗೆ ಅಶ್ಲೀಲ ಕಮೆಂಟ್ ಗಳು ಬರುತ್ತಿವೆ.

  ಧಾರಾವಾಹಿಯಲ್ಲಿ ಪಾರ್ವತಿ ದೇವಿಯಾಗಿ ಸಾಕಷ್ಟು ಸಂಪ್ರದಾಯ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ನಟಿ ಸೋನಾರಿಕಾ ಅವರು ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿದ್ದನ್ನು ಕಂಡವರು ಉಗಿದು ಉಪ್ಪಿನಕಾಯಿ ಹಾಕಿದ್ದರು.

  ಆದರೆ ಇದಕ್ಕೆ ಗರಂ ಆದ ನಟಿ ಸೋನಾರಿಕಾ ಅವರು ಕಮೆಂಟ್ ಮಾಡಿದವರಿಗೆ ಖಡಕ್ಕಾಗಿ ಉತ್ತರ ನೀಡಿದ್ದಾರೆ. 'ಹುಡುಗಿ ಬಿಕಿನಿ ಧರಿಸಿದ್ರೆ ತಪ್ಪಾ? ಅದು ಅಪರಾಧನಾ?, ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ಮಾಡುತ್ತಿದ್ದೇನೆ ಎಂದ ಮಾತ್ರಕ್ಕೆ ನನಗೆ ಬಿಕಿನಿ ಧರಿಸುವ ಸ್ವಾತಂತ್ರ ಇಲ್ಲವೆ?. ನಾನು ಯಾವ ಶತಮಾನದಲ್ಲಿ ಬದುಕುತ್ತಿದ್ದೇನೆ?,ನನಗೆ ಅನುಮಾನ ಮೂಡುತ್ತಿದೆ' ಎಂದು ಟೀಕಿಸಿದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

  23 ವರ್ಷದ ನಟಿ ಸೋನಾರಿಕಾ ಅವರು ತೆಲುಗು ಚಿತ್ರವೊಂದರಲ್ಲಿ ಮಿಂಚುತ್ತಿದ್ದು, ಮೊಟ್ಟ ಮೊದಲ ಬಾರಿಗೆ ಟಾಲಿವುಡ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.

  ಬಿಕಿನಿಯಲ್ಲಿ ಪ್ರತ್ಯಕ್ಷವಾದ ಶಿವದೇವನ ಪತ್ನಿ ಪಾರ್ವತಿ

  English summary
  Actress Sonarika Bhadoria best known for her role of Goddess Parvati in the television series ‘Devon Ke Dev...Mahadev’, recently posted some sizzling pictures of her clad in bikini from her beach vacation on her Instagram page.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X