ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಕಮಾಲ್ ಮಾಡಿದ ಶ್ರೀದೇವಿ ಪುತ್ರಿ

By Bharath Kumar

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ ದಡಕ್ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿದೆ. ಜಾಹ್ನವಿಯ ಮೊದಲ ಸಿನಿಮಾ ಎಂಬ ಕಾರಣಕ್ಕೆ ಈ ಸಿನಿಮಾ ದೊಡ್ಡ ಕುತೂಹಲ ಮೂಡಿಸಿತ್ತು. ಅದರಂತೆ ಸಿನಿಮಾ ಮೊದಲ ಸಿನಿಮಾ ಭರ್ಜರಿ ಒಪನಿಂಗ್ ಮಾಡಿದೆ.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ 'ದಡಕ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಸೌಂಡ್ ಮಾಡಿದೆ. ಬಾಲಿವುಡ್ ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಅವರು ತಿಳಿಸಿರುವ ಪ್ರಕಾರ ಜಾಹ್ನವಿಯ ದಡಕ್ ಸಿನಿಮಾ ಫಸ್ಟ್ ಡೇ ಸುಮಾರು 8.1 ಕೋಟಿ ಗಳಿಸಿದೆಯಂತೆ. ಇದು ಹೊಸಬರ ಚಿತ್ರಕ್ಕೆ ಸಿಕ್ಕಿರುವ ದೊಡ್ಡ ಯಶಸ್ಸು ಎಂದು ಹೇಳಲಾಗುತ್ತಿದೆ.

Dhadak 1st day box office collection

ಸ್ಟಾರ್ ನಟರು ಕಾಣಿಸಿಕೊಂಡಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ಸಿನಿಮಾ ಮೊದಲ ದಿನ 8 ಕೋಟಿ ಗಳಿಕೆ ಕಂಡಿತ್ತು. ಆದ್ರೆ, ಹೊಸಬರೇ ಅಭಿನಯಿಸಿದ್ದ ದಡಕ್ ಚಿತ್ರ 8.1 ಲೂಟಿ ಮಾಡಿರುವುದು ಸಾಹಸವೆನ್ನಲಾಗುತ್ತಿದೆ. ನಿರೀಕ್ಷೆಯ ಪ್ರಕಾರ ಮೊದಲ ಮೂರು ದಿನದಲ್ಲಿ ದಡಕ್ ಸಿನಿಮಾ ಸುಮಾರು 20 ಕೋಟಿ ಆದಾಯ ಮಾಡುತ್ತೆ ಎನ್ನಲಾಗಿದೆ.

ಇನ್ನು ಮುದ್ದಾದ ಪ್ರೇಮಕಥೆ ಹೊಂದಿದ್ದ ಈ ಸಿನಿಮಾ ಮೊದಲ ದಿನ ಇಷ್ಟು ಕೋಟಿ ಗಳಿಕೆ ಕಂಡಿರುವುದು ನಿರ್ಮಾಪಕ ಕರಣ್ ಜೋಹರ್ ಗೆ ಖುಷಿ ಕೊಟ್ಟಿದೆ. ವೀಕೆಂಡ್ ರಜೆಯ ಕಾರಣ ಶನಿವಾರ ಮತ್ತು ಭಾನುವಾರ ಇನ್ನು ಹೆಚ್ಚು ಮೊತ್ತ ಗಳಿಸುತ್ತೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.

Dhadak 1st day box office collection

ಶಶಾಂಕ್ ಖೈತಾನ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್ ಹಾಗೂ ಶಾಹೀದ್ ಕಪೂರ್ ಅವರ ಸಹೋದರ ಇಶಾನ್ ಕತ್ತಾರ್ ನಾಯಕ, ನಾಯಕಿಯಾಗಿ ಅಭಿನಯಿಸಿದ್ದರು. ಇದು ಮರಾಠಿಯ ಸೈರಾಟ್ ಚಿತ್ರದ ರೀಮೇಕ್ ಆಗಿತ್ತು.

More from Filmibeat

English summary
Dhadak box office collection day 1: The film, starring Janhvi Kapoor and Ishaan Khatter, has earned Rs 8.71 crore on its first day and its weekend haul is expected to be around Rs 20 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X