ಡ್ಯಾನ್ಸರ್ ಧನಶ್ರೀ ಮತ್ತು ಚಹಾಲ್ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನ ಪಡೆಯಲು ಮುಂದಾದ ದಂಪತಿ ?

ಬದಲಾದ ಈ ಕಾಲದಲ್ಲಿ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಈಗೀಗ ಪತಿಯಾಗಲಿ, ಪತ್ನಿಯಾಗಲಿ ಯಾವುದೇ ಅಳುಕಿಲ್ಲದೆ ಇದನ್ನು ಒಪ್ಪಿಕೊಳ್ಳುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೆ ಹೆಂಡತಿಯನ್ನು ದೂರ ಮಾಡುವ ಗಂಡಂದಿರ ಸಂಖ್ಯೆ, ಗಂಡನ ಮೇಲೆ ಕೋಪಿಸಿಕೊಂಡು ತವರು ಮನೆ ಸೇರಿಕೊಂಡು ಗಂಡನಿಂದ ದೂರ ಉಳಿಯುವ ಹೆಂಡತಿಯರ ಸಂಖ್ಯೆ ಹೆಚ್ಚುತ್ತಿದೆ.

ಇದಕ್ಕೆ ಗಂಡ ಹೆಂಡತಿಯ ನಡುವೆ ಸಾಮರಸ್ಯದ ಕೊರತೆ ಮತ್ತು ಹೊಂದಿಕೊಂಡು ಹೋಗಬೇಕೆಂಬ ಮನೋಭಾವದ ಕೊರತೆ ಅನೇಕ ಕಾರಣಗಳಲ್ಲಿ ಒಂದಾದರೂ ಕೂಡ ಆರಂಭದಲ್ಲಿಯೇ ದಾಂಪತ್ಯದಲ್ಲಿ ಮೂಡಿದ ಬಿರುಕುನ್ನು ಮುಚ್ಚದೇ ಇದ್ದರೆ ಅದು ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಸಂಭವ ಹೆಚ್ಚಿರುತ್ತೆ. ಇದಕ್ಕೆ ಭಾರತ ತಂಡದ ಕ್ರಿಕೆಟಿಗ ಯಜ್ವೇಂದ್ರ ಚಹಾಲ್ ಮತ್ತು ಡ್ಯಾನ್ಸರ್, ನಟಿ ಧನಶ್ರೀ ವರ್ಮಾ ಅವರ ಸಾಂಸಾರಿಕ ಜೀವನ ಮತ್ತೊಂದು ಉದಾಹರಣೆ.

Dhanashree Verma and Yuzvendra Chahal unfollow each other sparking divorce rumours

ಹೌದು, ಯಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಅನೇಕ ದಿನಗಳಿಂದ ಅನೇಕರನ್ನು ಕಾಡುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ನಡೆದಿದೆ. ಹತ್ತು ಹಲವು ವರದಿಗಳು ಕೂಡ ಪ್ರಸಾರವಾಗಿವೆ.

ಆದರೂ ಕೂಡ ಇಲ್ಲಿಯವರೆಗೆ ಧನಶ್ರೀ ಅಥವಾ ಯಜ್ವೇಂದ್ರ ಚಹಾಲ್ ಈ ವಿಚಾರದ ಬಗ್ಗೆ ಮಾತನಾಡಿಲ್ಲ. ಇವರಿಬ್ಬರ ಈ ಮೌನ ಉರಿಯುವ ತುಪ್ಪಕ್ಕೆ ಬೆಂಕಿ ಸುರಿಯುತ್ತಿದೆ. ಹೀಗಿರುವಾಗ ಈಗ ಧನಶ್ರೀ ವರ್ಮಾ ಮತ್ತು ಯಜ್ವೇಂದ್ರ ಚಹಾಲ್ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ ಫಾಲೋ ಮಾಡಿಕೊಂಡಿದ್ದಾರೆ. ತಮ್ಮ ಪತ್ನಿ ಧನಶ್ರೀ ಜೊತೆ ಇದ್ದ ನಮ್ಮ ನೆನಪುಗಳನ್ನೆಲ್ಲ ಯಜ್ವೇಂದ್ರ ಚಹಾಲ್ ಡಿಲೀಟ್ ಮಾಡಿದ್ದಾರೆ.

ನಿಜಾ, ಯಜ್ವೇಂದ್ರ ಚಹಾಲ್ ಎಲ್ಲ ಫೋಟೊಗಳನ್ನು ಡಿಲೀಟ್ ಮಾಡಿದ್ದರು ಕೂಡ ಧನಶ್ರೀ ವರ್ಮಾ ಇನ್ನು ತಮ್ಮ ಪತಿಯ ಜೊತೆಗಿನ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಉಳಿಸಿಕೊಂಡಿದ್ದಾರೆ. ಆದರೆ, ಅನ್‌ಫಾಲೋ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನು, ಈಗೀಗ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡುವ ಮೂಲಕ ಹಂಡ -ಹೆಂಡತಿ ದೂರವಾಗುವ ಸುಳಿವನ್ನು ನೀಡಲು ಶುರು ಮಾಡಿದ್ದಾರೆ. ಈ ಕಾರಣಕ್ಕೆ ಧನಶ್ರೀ ವರ್ಮಾ ಮತ್ತು ಯಜ್ವೇಂದ್ರ ಚಹಾಲ್ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಕಾಡ್ಗಿಚ್ಚಿನಂತೆ ಹಬ್ಬಿದೆ.

ಅಂದ್ಹಾಗೇ ಧನಶ್ರೀ ವರ್ಮಾ ಮತ್ತು ಯಜ್ವೇಂದ್ರ ಚಹಾಲ್ ಡಿಸೆಂಬರ್ 11-2020ರಂದು ಸಪ್ತಪದಿಯನ್ನು ತುಳಿದಿದ್ದರು. ಆದರೆ ಮದ್ವೆಯಾದ ಒಂದೆರಡು ವರ್ಷಗಳಲ್ಲಿ ಇವರಿಬ್ಬರ ದಾಂಪತ್ಯದ ಕುರಿತು ಮಾತುಗಳು ಕೇಳ ಬರತೊಡಗಿದವು. ಭಾರತ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಶ್ರೇಯಸ್ ಐಯ್ಯರ್ ಗಂಡ ಮತ್ತು ಹೆಂಡತಿಯ ನಡುವೆ ಬಂದಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಲು ಶುರುಮಾಡಿದವು. ಇದಕ್ಕೆ ಪೂರಕವಾಗಿ ಧನಶ್ರೀ ವರ್ಮಾ ಮತ್ತು ಶ್ರೇಯಸ್ ಐಯ್ಯರ್ ಅನೇಕ ಸಭೆ-ಸಮಾರಂಭ ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಶ್ರೇಯಸ್ ಐಯ್ಯರ್ ಜೊತೆ ಧನಶ್ರೀ ವರ್ಮಾ ಸಖತ್ತಾಗಿ ಡ್ಯಾನ್ಸ್ ಕೂಡ ಮಾಡಿದ್ದರು. ಶ್ರೇಯಸ್ ಐಯ್ಯರ್ ಹುಟ್ಟುಹಬ್ಬಕ್ಕೆ ಧನಶ್ರೀ ವರ್ಮಾ ವಿಶೇಷವಾಗಿ ಶುಭಾಶಯವನ್ನು ಕೋರಿದ್ದರು. ಇದೆಲ್ಲದರ ನಡುವೆ ಚಹಾಲ್ ಹೆಸರನ್ನು 2023ರಲ್ಲಿ ಧನಶ್ರೀ ಸೋಶಿಯಲ್ ಮೀಡಿಯಾದಲ್ಲಿ ಕೈ ಬಿಟ್ಟಿದ್ದರು.

ಇವೆಲ್ಲವನ್ನು ಗಮನಿಸುತ್ತಾ ಬಂದಿರುವ ಅನೇಕರು ಇಂದಲ್ಲ, ನಾಳೆ ಯಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆಯುವುದು ಖಚಿತವೆನ್ನುವ ಭವಿಷ್ಯವನ್ನು ಹೇಳುತ್ತಿದ್ದರು. ಆ ಭವಿಷ್ಯ ಈಗ ನಿಜವಾಗುವ ಎಲ್ಲ ಲಕ್ಷಣ ಸದ್ಯಕ್ಕೆ ಕಂಡು ಬರುತ್ತಿವೆ. ಯಜ್ವೇಂದ್ರ ಚಹಾಲ್ ಅವರ ನಡೆ ಅನುಮಾನವನ್ನು ಇನ್ನೂ ಹೆಚ್ಚಿಸಿದೆ.

More from Filmibeat

Read more about: divorce bollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X