ಸ್ಟಾರ್ ಹೀರೋ ಜೊತೆ ಬಾಲಿವುಡ್ ಫ್ಲೈಟ್ ಹತ್ತಿದ ಧನುಶ್
ತಮಿಳು ನಟ ಧನುಶ್ ಸದ್ಯ ತಮಿಳು ಚಿತ್ರರಂಗದ ಬಾಕ್ಸ್ ಆಫೀಸ್ ರೂಲ್ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಧನುಶ್ ಸತತವಾಗಿ ಹಿಟ್ ಕೊಡ್ತಿದ್ದಾರೆ.
'ಅಸುರನ್' ಸಕ್ಸಸ್ ಬಳಿಕ 'ಪಟಾಸ್' ಚಿತ್ರ ಮಾಡಿದರೂ, ಆ ಚಿತ್ರವೂ ಸೂಪರ್ ಹಿಟ್ ಆಗಿದೆ. ಈಗ 'ಸುರಳಿ' ಮತ್ತು 'ಕರ್ಣನ್' ಎಂಬ ಮತ್ತೆರಡು ಚಿತ್ರಗಳನ್ನು ಕೈಗೆತ್ತಿಕೊಂಡಿರುವ ಧನುಶ್ ಈ ಮಧ್ಯೆ ಸರ್ಪ್ರೈಸ್ ನೀಡಿದ್ದಾರೆ. ಹೌದು, ಸ್ಟಾರ್ ಹೀರೋ ಜೊತೆ ಮತ್ತೊಮ್ಮೆ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಯಾರು ಆ ಹೀರೋ? ಯಾವುದು ಈ ಚಿತ್ರ? ಮುಂದೆ ಓದಿ....

ಅಕ್ಷಯ್ ಕುಮಾರ್ ಜೊತೆ ಧನುಶ್
2013ರಲ್ಲಿ ತೆರೆಕಂಡಿದ್ದ 'ರಾಂಜನ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಧನುಶ್ 2015 ರಲ್ಲಿ 'ಶಮಿತಾಭ್' ಸಿನಿಮಾ ಮಾಡಿದ್ದರು. ಬಳಿಕ ಯಾವ ಹಿಂದಿ ಚಿತ್ರವೂ ಮಾಡಿರಲಿಲ್ಲ. ಇದೀಗ ಐದು ವರ್ಷದ ಬಳಿಕ ಮತ್ತೆ ಬಾಲಿವುಡ್ ಗೆ ರೀ ಎಂಟ್ರಿ ಕೊಡ್ತಿದ್ದು ಈ ಸಲ ಅಕ್ಷಯ್ ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಸಾರಾ ಅಲಿ ಖಾನ್ ನಾಯಕಿ
ಆನಂದ್ ಎಲ್ ರೈ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಸಾರಾ ಅಲಿ ಖಾನ್ ನಾಯಕಿಯಾಗಿದ್ದಾರೆ. ಅಂದ್ಹಾಗೆ, ಇದು ಧನುಶ್ ಅವರ 40ನೇ ಚಿತ್ರ ಆಗಿದೆ. 2021ರ ಪ್ರೇಮಿಗಳ ದಿನದ ಪ್ರಯುಕ್ತ ಈ ಚಿತ್ರ ಬಿಡುಗಡೆಯಾಗಲಿದೆ.

ಫೋಟೋಶೂಟ್ ಆಕರ್ಷಣೆ
ಅಕ್ಷಯ್ ಕುಮಾರ್, ಧನುಶ್ ಮತ್ತು ಸಾರಾ ಅಲಿಖಾನ್ ಮೊದಲ ತೆರೆ ಹಂಚಿಕೊಳ್ಳುತ್ತಿದ್ದು, 'ಅಟ್ರಂಗಿ ರೆ' ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಸಾರಾ ಅಲಿ ಖಾನ್ ಕೆನ್ನೆಗೆ ಅಕ್ಷಯ್ ಮತ್ತು ಧನುಶ್ ಇಬ್ಬರು ಕಿಸ್ ಮಾಡುತ್ತಿದ್ದಾರೆ.

ಧನುಶ್ ಮುಂದಿನ ಚಿತ್ರಗಳು
'ಪೇಟಾ' ಚಿತ್ರದ ನಿರ್ದೇಶನ ಮಾಡಿದ್ದ ಕಾರ್ತಿಕ್ ಸುಬ್ಬುರಾಜ್ ಧನುಶ್ ಜೊತೆ 'ಸುರಳಿ' ಎಂದು ಸಿನಿಮಾ ಮಾಡ್ತಿದ್ದಾರೆ. ಅದಾದ ಬಳಿಕ ಮಾರಿ ಸೆಲ್ವರಾಜ್ ಜೊತೆ ಕರ್ಣನ್ ಎಂಬ ಚಿತ್ರವೂ ಆಗ್ತಿದ್ದು, ಶೂಟಿಂಗ್ ನಡೆಯುತ್ತಿದೆ. ಈ ಎರಡು ಚಿತ್ರಗಳ ಬಳಿಕ ಹಿಂದಿ ಸಿನಿಮಾ ಶುರುವಾಗಲಿದೆ.


Click it and Unblock the Notifications











