ಬಾಲಿವುಡ್‌ಗೆ ಶ್ರೀಲೀಲಾ ಲಗ್ಗೆ? ಸ್ಯಾಂಡಲ್‌ವುಡ್ ಮರೆತೇಬಿಟ್ರು

ಬೆಂಗಳೂರು ಬೆಡಗಿ ಶ್ರೀಲೀಲಾ ಕ್ರೇಜ್ ಇದೀಗ ಬಾಲಿವುಡ್‌ನಲ್ಲೂ ಜೋರಾಗಿದೆ. ಶೀಘ್ರದಲ್ಲೇ ಬಿಟೌನ್ ಅಂಗಳಕ್ಕೆ ಕಿಸ್ ಚೆಲುವೆ ಎಂಟ್ರಿ ಕೊಡುವ ಬಗ್ಗೆ ಗುಸುಗುಸು ಶುರುವಾಗಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಆಕೆ ಕಾಣಿಸಿಕೊಂಡಿರುವ ವೀಡಿಯೋಗಳು ವೈರಲ್ ಆಗುತ್ತಿದೆ.

ಕನ್ನಡದ ಬಳಿಕ ತೆಲುಗು ಸಿನಿಮಾಗಳಲ್ಲಿ ಶ್ರೀಲೀಲಾ ಹೆಚ್ಚು ನಟಿಸಿದರು. ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣರಂತಹ ಸ್ಟಾರ್‌ಗಳ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಂಡರು. ಆದರೆ ಯಾವುದೇ ಸಿನಿಮಾ ದೊಡ್ಡ ಬ್ರೇಕ್ ಕೊಡಲಿಲ್ಲ. ಇನ್ನೇನು ಶ್ರೀ ಕ್ರೇಜ್ ಕಮ್ಮಿ ಆಯಿತು ಎನ್ನುವ ವೇಳೆಗೆ 'ಪುಷ್ಪ'-2 ಸ್ಪೆಷಲ್ ಸಾಂಗ್ ಬಂತು.

Dharma Productions In Talk With Sreeleela For Kartik Aaryan s Next

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಸಿನಿಮಾ 2000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುತ್ತದೆ ಎನ್ನುವ ಚರ್ಚೆ ನಡೀತಿದೆ. ಚಿತ್ರದ 'ಕಿಸ್ಸಿಕ್' ಸಾಂಗ್ ಹಿಟ್ ಆಗಿ ಗಮನ ಸೆಳೆದಿದೆ. ಇದೀಗ ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮುಂದಿನ ಚಿತ್ರದಲ್ಲಿ ಶ್ರೀಲೀಲಾ ನಟಿಸ್ತಾರೆ ಎನ್ನಲಾಗ್ತಿದೆ.

ಕನ್ನಡದ ಸಾಕಷ್ಟು ನಟಿಯರು ಈಗಾಗಲೇ ಬಾಲಿವುಡ್‌ಗೆ ಹೋಗಿ ಬಂದಿದ್ದಾರೆ. ಆದರೆ ದೊಡ್ಡದಾಗಿ ಕಮಾಲ್ ಮಾಡಿದವರು ರಶ್ಮಿಕಾ ಮಂದಣ್ಣ ಮಾತ್ರ. ಇದೀಗ ಶ್ರೀಲೀಲಾ ಕೂಡ ಹಿಂದಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಟಾಲಿವುಡ್‌ನಲ್ಲಿ ಗೆದ್ದ ಬಳಿಕ ಕಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವಕಾರ್ತಿಯೇಯನ್ ಹೊಸ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಸಾಕಷ್ಟು ನಟ, ನಟಿಯರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದೆ. ಇಂತಹ ದೊಡ್ಡ ಸಂಸ್ಥೆಯ ಚಿತ್ರದ ಮೂಲಕ ಶ್ರೀ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದು ವಿಶೇಷ. ಈ ವಿಚಾರ ಆಕೆಯ ಅಭಿಮಾನಿಗಳಿಗೂ ಸಂತಸ ತಂದಿದೆ. ಆದರೆ 'ಬೈಟು ಲವ್' ಬಳಿಕ ಆಕೆ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ.

ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚೊಚ್ಚಲ ಚಿತ್ರಕ್ಕೂ ಆಯ್ಕೆ ಆಗಿದ್ದರು. 'ಜ್ಯೂನಿಯರ್' ಎಂದು ಚಿತ್ರಕ್ಕೆ ನಾಮಕರಣ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ. ಕನ್ನಡ, ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಬೇಕಿತ್ತು. ಆ ಬಳಿಕ ಕಿಸ್ ಬೆಡಗಿ ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಳ್ಳಲಿಲ್ಲ.

ಚಿಕ್ಕಂದಿನಲ್ಲೇ ಭರತನಾಟ್ಯ ಕಲಿತಿದ್ದ ಶ್ರೀಲೀಲಾ ಒಳ್ಳೆ ಡ್ಯಾನ್ಸರ್. ತಮ್ಮ ಜಬರ್ದಸ್ತ್ ಡ್ಯಾನ್ಸ್‌ನಿಂದಲೇ ತೆಲುಗು ಸಿನಿಮಾಗಳಲ್ಲಿ ಮಿಂಚು ಹರಿಸಿದ್ದಾರೆ. ಆದರೆ ಆಕೆಯ ಒಳ್ಳೆ ಅವಕಾಶಗಳು ಸಿಕ್ಕಿಲ್ಲ. ಇದ್ದಿದ್ದರಲ್ಲಿ 'ಭಗವಂತ್ ಕೇಸರಿ' ಚಿತ್ರದ ವಿಜಯಲಕ್ಷ್ಮಿ ಪಾತ್ರ ಚೆನ್ನಾಗಿತ್ತು. ಉಳಿದಂತೆ ಗ್ಲಾಮರ್ ಗೊಂಬೆಯಾಗಿ ಸಿನಿಮಾಗಳಲ್ಲಿ ಮಿಂಚಿದ್ದೇ ಹೆಚ್ಚು.

ಕಳೆದ ವರ್ಷ ಮಹೇಶ್ ಬಾಬು ಜೊತೆ ನಟಿಸಿದ 'ಗುಂಟೂರು ಖಾರಂ' ಚಿತ್ರ ಹಿಟ್ ಆಗಿತ್ತು. ಆದರೆ ಅದರಿಂದ ಶ್ರೀಲೀಲಾಗೆ ಹೆಚ್ಚು ಪ್ರಯೋಜನವಾಗಲಿಲ್ಲ. ಪವನ್ ಕಲ್ಯಾಣ್ ಜೋಡಿಯಾಗಿ 'ಉಸ್ತಾದ್ ಭಗತ್‌ಸಿಂಗ್' ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ.

'ಮಾಸ್ ಜಾತರ' ಎಂಬ ತೆಲುಗು ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ನಿತಿನ್ ಜೋಡಿಯಾಗಿ 'ರಾಬಿನ್ ಹುಡ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಕನ್ನಡ ಚಿತ್ರರಂಗ ಮರೆತುಬಿಟ್ಟಿದ್ದಾರೆ. ಬಾಲಿವುಡ್‌ಗೆ ಹೋಗುತ್ತಿರುವ ಶ್ರೀಲೀಲಾ ಕೂಡ ಸ್ಯಾಂಡಲ್‌ವುಡ್ ಮರೆತುಬಿಡ್ತಾರಾ ಕಾದು ನೋಡಬೇಕಿದೆ.

More from Filmibeat

English summary
Kannada Actress Sreeleela to make her Bollywood debut with Kartik Aaryan
Read more about: sreeleela bollywood sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X