ಬಾಲಿವುಡ್‌ನ ದಂತಕಥೆ ಧರ್ಮೇಂದ್ರ ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ

ವಯಸ್ಸು ಕೇವಲ ಸಂಖ್ಯೆ. ಸಾಧನೆಗೆ ಪೂರ್ಣ ವಿರಾಮ ಅಲ್ಲ. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಇರುವವರು ಧರ್ಮೇಂದ್ರ. 1960ರಲ್ಲಿ ''ದಿಲ್ ಬಿ ತೇರಾ,ಹಮ್ ಬಿ ತೇರೆ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಧರ್ಮೇಂದ್ರ ಇಂದಿಗೂ ದಣವರಿಯದ ಮಹಾನಾಯಕ. ಕಳೆದ 65 ವರ್ಷಗಳಿಂದ ಕಲೆಯನ್ನೇ ಉಸಿರಾಗಿಸಿಕೊಂಡು ಹಿಂದಿ ಚಿತ್ರರಂಗಕ್ಕೆ ಆಲದ ಮರದ ನೆರಳಿನಂತೆ ಇರುವ ಧರ್ಮೇಂದ್ರ..

ಇಲ್ಲಿಯವರೆಗೆ 300 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪೈಕಿ 200ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕನಾಗಿ ಬೆಳ್ಳಿತೆರೆಯಲ್ಲಿ ಧರ್ಮೇಂದ್ರ ಅಬ್ಬರಿಸಿದ್ದಾರೆ. ''ಶೋಲೆ''.. ''ಮೇರಾ ಗಾವ್ ಮೇರಾ ದೇಶ್''.. ''ಧರ್ಮ ವೀರ್''.. ''ಪ್ರತಿಗ್ಯಾ''.. ''ಇನ್ಸಾನಿಯತ್ ಕೆ ದುಷ್ಮನ್''.. ''ಅನುಪಮಾ''.. ''ಬಂಧಿನಿ''.. ''ಫೂಲ್ ಔರ್ ಪತ್ಥರ್''.. ''ಲೋಹಾ''.. ''ದಾದಾಗಿರಿ''.. ''ಹುಕುಮತ್''.. ''ಖತ್ರೋನ್ ಕೆ ಖಿಲಾಡಿ''..

Dharmendra Hospitalized at 89 Fan Concern Surges Team Confirms Routine Check-up

ಹೀಗೆ ಹತ್ತು ಹಲವು ವೈವಿಧ್ಯಮಯ ಚಿತ್ರ ಮತ್ತು ಪಾತ್ರಗಳನ್ನು ಮಾಡಿದ ಧರ್ಮೇಂದ್ರ ಕಾಮಿಡಿ ಕಿಲಾಡಿ ಕೂಡ ಹೌದು. ''ಚುಪ್ಕೇ-ಚುಪ್ಕೇ''.. ''ಸೀತಾ ಔರ್ ಗೀತಾ''.. ''ಚಾಚಾ ಬತೀಜಾ''.. ಇದಕ್ಕೆ ಅತ್ಯುತ್ತಮ ಉದಾಹರಣೆ.

2012ರಲ್ಲಿ ಪದ್ಮಭೂಷಣ.. 1997ರಲ್ಲಿ ಜೀವಮಾನದ ಸಾಧನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ.. 2007ರಲ್ಲಿ ಜೀವಮಾನದ ಸಾಧನೆಗಾಗಿ ಐಫಾ ಪ್ರಶಸ್ತಿಯನ್ನು ಪಡೆದಿರುವ ಧರ್ಮೇಂದ್ರ 2004ರಲ್ಲಿ ರಾಜಕೀಯದ ಅಖಾಡದಲ್ಲಿ ಕೂಡ ಕಣಕ್ಕಿಳಿದಿದ್ದರು. ರಾಜಸ್ಥಾನದ ಬಿಕಾನೇರ್ ಕ್ಷೇತ್ರದಿಂದ ಸ್ಫರ್ಧಿಸಿದ್ದರು.

ಇಂಥಾ ''ಹೀ ಮ್ಯಾನ್''.. ''ಆಕ್ಷನ್ ಕಿಂಗ್''ಗೆ ಈಗ 89ರ ಹರೆಯ. ಈ ಇಳಿ ವಯಸ್ಸಿನಲ್ಲಿಯೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಧರ್ಮೇಂದ್ರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಮಾನ್ಯ ನಿಯಮಿತ ಆರೋಗ್ಯ ತಪಾಸಣೆ ಎಂದು ವೈದ್ಯರು ಹೇಳಿದ್ದಾರಾದರೂ ಕೆಲ ಮಾಧ್ಯಮಗಳಲ್ಲಿ ಧರ್ಮೇಂದ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ, ಅವರಿಗೆ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾದ ಹಿನ್ನೆಲೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಇನ್ನೂ ಧಮೇಂದ್ರ ಅವರ ಆರೋಗ್ಯದ ಕುರಿತು ಪ್ರಖ್ಯಾತ ಪತ್ರಕರ್ತ ವಿಕ್ಕಿ ಲಾಲ್ವಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಧರ್ಮೇಂದ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರವನ್ನು ಆಸ್ಪತ್ರೆಯ ಸಿಬ್ಬಂದಿ ಖಚಿತ ಪಡಿಸಿದ್ದಾರೆ ಎಂದು ಹೇಳಿದ್ದಾರೆ. ಆತಂಕ ಪಡುವಂತಹ ಅಗತ್ಯವೇನು ಇಲ್ವಲ್ಲಾ..? ಎಂಬ ನನ್ನ ಪ್ರಶ್ನೆಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ವಿಕ್ಕಿ ಲಾಲ್ವಾನಿ ಹೇಳಿದ್ದಾರೆ.

Dharmendra Hospitalized at 89 Fan Concern Surges Team Confirms Routine Check-up

ಮುಂದುವರೆದು ಧರ್ಮೇಂದ್ರ ಅವರ ಹೃದಯ ನಡಿತ ಮತ್ತು ರಕ್ತದೊತ್ತಡ ಉತ್ತಮವಾಗಿದೆ ಎಂಬ ಮಾಹಿತಿಯನ್ನು ಕೂಡ ವಿಕ್ಕಿ ಲಾಲ್ವಾನಿ ಹಂಚಿಕೊಂಡಿದ್ದು, ಮೂತ್ರ ವಿಸರ್ಜನೆಯಲ್ಲಿ ಖೂಡ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ. ಧಮೇಂದ್ರ ಅವರು ಬೇಗ ಗುಣಮುಖರಾಗಿ ಮರಳಿ ಬರಲಿ ಎಂದು ಕೂಡ ಬರೆದುಕೊಂಡಿದ್ದಾರೆ.

ಧಮೇಂದ್ರ ಅವರ ಜೊತೆ ಅವರ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಆಸ್ಪತ್ರೆಯಲ್ಲಿದ್ದು, ಧರ್ಮೇಂದ್ರ ಅವರ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಧರ್ಮೇಂದ್ರ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಅಂದ್ಹಾಗೇ 89 ವರ್ಷದ ಧರ್ಮೇಂದ್ರ ಕಳೆದ ವರ್ಷ ಶಾಹಿದ್ ಕಪೂರ್ ಮತ್ತು ಕೃತಿ ಸನೂನ್ ಅಭಿನಯದ ''ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ'' ಚಿತ್ರದಲ್ಲಿ ಅಭಿನಯಿಸಿದ್ದರು. ಇದಕ್ಕೂ ಮುನ್ನ ರಣ್‌ವೀರ್ ಸಿಂಗ್ ಅಭಿನಯದ ''ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'' ಚಿತ್ರದಲ್ಲಿ ಅಭಿನಯಿಸಿದ್ದ ಧಮೇಂದ್ರ ಸದ್ಯ ''ಇಕ್ಕಿಸ್'' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಹೀಗೆ ಇಳಿ ವಯಸ್ಸಿನಲ್ಲಿಯೂ ಕೂಡ ಕಲಾ ಸೇವೆ ಮಾಡುತ್ತಿರುವ, ಸದ್ಯ ಆಸ್ಪತ್ರೆಯಲ್ಲಿರುವ ಧಮೇಂದ್ರ ಶೀಘ್ರ ಗುಣಮುಖರಾಗಿ ಮರಳಿ ಬರಲಿ, ಅಭಿಮಾನಿಗಳ ಜೊತೆ ಈ ಡಿಸೆಂಬರ್‌ನಲ್ಲಿ ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿ ಎಂಬ ಪ್ರಾರ್ಥನೆಯನ್ನು ಹಿಂದಿ ಚಿತ್ರರಂಗ ಮಾಡುತ್ತಿದೆ.

More from Filmibeat

English summary
Fans are praying after 89-year-old Dharmendra was rushed to the hospital and admitted to the ICU. Find out the 'serious problem' that led to his urgent visit.
Read more about: dharmendra health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X