twitter
    For Quick Alerts
    ALLOW NOTIFICATIONS  
    For Daily Alerts

    'ಧೂಮ್ 3' ಮುಂದೆ ಎಲ್ಲಾ ದಾಖಲೆಗಳು ಹರೋಹರ

    By Rajendra
    |

    ಬಾಲಿವುಡ್ ಚಿತ್ರವೊಂದು ರು.100 ಕೋಟಿ ಕಲೆಕ್ಷನ್ ಮಾಡಿದರೆ ಅಬ್ಬಬ್ಬಾ ಎನ್ನುವ ಕಾಲವೊಂದಿತ್ತು. ಈಗ ನೂರು ಕೋಟಿ ಕಲೆಕ್ಷನ್ ಎಂದರೆ ಯಾರೂ ಕ್ಯಾರೆ ಎನ್ನುತ್ತಿಲ್ಲ. ಅಷ್ಟರ ಮಟ್ಟಿಗೆ ನೂರು ಕೋಟಿಯ ಮೈಲಿಗಲ್ಲು ಈಗ ಲೆಕ್ಕಕ್ಕೇ ಇಲ್ಲ ಎಂಬಂತಾಗಿದೆ.

    ಬಿಡುಗಡೆಯಾದ ಚಿತ್ರಗಳೆಲ್ಲಾ ನೂರು ಕೋಟಿ ಕಲೆಕ್ಷನ್ ಮಾಡುತ್ತಿದ್ದರೆ ಇನ್ನೇನಾಗಬೇಡ. ಅಮೀರ್ ಖಾನ್, ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿರುವ 'ಧೂಮ್ 3' ಚಿತ್ರ ಈಗ ಹೊಸ ದಾಖಲೆ ಬರೆದಿದೆ. ನೂರು, ಇನ್ನೂರು ಕೋಟಿ ಗಡಿದಾಟಿ ಈಗ ರು.500 ಕೋಟಿಯ ಹೊಸ ಸವಾಲನ್ನು ಮುಂಬರುವ ಚಿತ್ರಗಳಿಗೆ ಹಾಕಿದೆ. ['ಧೂಮ್ 3' ವಿಮರ್ಶೆ]

    'ಚೆನ್ನೈ ಎಕ್ಸ್ ಪ್ರೆಸ್', 'ಯೇಹ್ ಜವಾನಿ ಹೈ ದೀವಾನಿ' ಹಾಗೂ 'ಕ್ರಿಷ್ 3' ಚಿತ್ರಗಳ ದಾಖಲೆಗಳನ್ನು 'ಧೂಮ್ 3' ಚಿತ್ರ ಹರೋಹರ ಎನ್ನಿಸಿದೆ. ಇದುವರೆಗೂ ಬಾಲಿವುಡ್ ನಲ್ಲಿ ತೆರೆಕಂಡ ಯಾವುದೇ ಚಿತ್ರವೂ ಮಾಡದ ದಾಖಲೆಯನ್ನು 'ಧೂಮ್ 3' ಮಾಡಿದೆ. ಈ ಚಿತ್ರದ ದೇಶೀಯ ಹಾಗೂ ವಿದೇಶಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ರು.500 ಕೋಟಿ ದಾಟಿದೆ.

    ಈಗಲೂ ಚಿತ್ರಕ್ಕೆ ಭರ್ಜರಿ ಕಲೆಕ್ಷನ್

    ಈಗಲೂ ಚಿತ್ರಕ್ಕೆ ಭರ್ಜರಿ ಕಲೆಕ್ಷನ್

    ಈಗಲೂ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿಯೇ ನಡೆಯುತ್ತಿದೆ. ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಚಿತ್ರ ಬಿಡುಗಡೆಗೂ ಮುನ್ನವೇ ಪ್ರೀ ಬುಕ್ಕಿಂಗ್ ಆರಂಭಿಸಿದ್ದವು. 'ಧೂಮ್ 3' ಚಿತ್ರ ಅಷ್ಟರ ಮಟ್ಟಿಗೆ ಹವಾ ಸೃಷ್ಟಿಸಿತ್ತು.

    ಐಮ್ಯಾಕ್ಸ್ ಟಿಕೆಟ್ ದರ ಬಲು ದುಬಾರಿ

    ಐಮ್ಯಾಕ್ಸ್ ಟಿಕೆಟ್ ದರ ಬಲು ದುಬಾರಿ

    ಇನ್ನು ಐಮ್ಯಾಕ್ಸ್ ಚಿತ್ರದ ಟಿಕೆಟ್ ದರವನ್ನು ನೋಡಿಯೇ ಹೌಹಾರಿದ್ದರು ಪ್ರೇಕ್ಷಕರು. ಐಮ್ಯಾಕ್ಸ್ ಥಿಯೇಟರ್ ನಲ್ಲಿ ಟಿಕೆಟ್ ಬೆಲೆ ರು.900 ಆಸುಪಾಸಿನಲ್ಲಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರೇಕ್ಷಕರು ತಮ್ಮ ಅಸಹಾಯಕತೆ, ಕೋಪ ತಾಪಗಳನ್ನು ಪ್ರದರ್ಶಿಸಿದ್ದರು.

    ಬಾಕ್ಸ್ ಆಫೀಸಲ್ಲಿ ಸುನಾಮಿ ಎಬ್ಬಿಸಲು ಕಾರಣ

    ಬಾಕ್ಸ್ ಆಫೀಸಲ್ಲಿ ಸುನಾಮಿ ಎಬ್ಬಿಸಲು ಕಾರಣ

    ಧೂಮ್ 3 ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರದ ವಿತರಕ ಅಕ್ಷಯೇ ರಾಥಿ ಏನು ಹೇಳುತ್ತಾರೆಂದರೆ, "ಅದ್ಭುತ ತಾರಾಗಣ, ಮೈನವಿರೇಳಿಸುವ ಸಾಹಸ, ಭಾರತೀಯ ಚಿತ್ರಪ್ರೇಮಿಗಳು ಬಯಸುವ ಚಿತ್ರಕಥೆ, ಎಲ್ಲಕ್ಕಿಂತಲೂ ಮುಖ್ಯವಾಗಿ ಅದ್ಭುತ ಹಾಡುಗಳು, ಅಮೀರ್ ಖಾನ್ ಹಾಗೂ ಆದಿತ್ಯ ಚೋಪ್ರಾ ಕಾಂಬಿನೇಷನ್ ಬಾಕ್ಸ್ ಆಫೀಸಲ್ಲಿ ಸುನಾಮಿ ಎಬ್ಬಿಸಲು ಕಾರಣವಾಯಿತು" ಎಂದಿದ್ದಾರೆ.

    ಮೊದಲ ವಾರದಲ್ಲೇ ರು.189 ಕೋಟಿ ಕಲೆಕ್ಷನ್

    ಮೊದಲ ವಾರದಲ್ಲೇ ರು.189 ಕೋಟಿ ಕಲೆಕ್ಷನ್

    ಚಿತ್ರ ತೆರೆಕಂಡ ಮೊದಲ ವಾರಾಂತ್ಯದಲ್ಲೇ ಧೂಮ್ 3 ಹಿಂದಿ ಆವೃತ್ತಿ ರು. 189 ಕೋಟಿ ಕಲೆಕ್ಷನ್ ಮಾಡಿತ್ತು. ಉಳಿದಂತೆ ತಮಿಳು ಹಾಗೂ ತೆಲುಗು ಆವೃತ್ತಿಗಳು ಒಟ್ಟಾರೆ ರು.19 ಕೋಟಿ ಕಲೆಕ್ಷನ್ ಮಾಡಿವೆ.

    ಚೆನ್ನೈ ಎಕ್ಸ್ ಪ್ರೆಸ್ ದಾಖಲೆ ಮುರಿದ ಚಿತ್ರ

    ಚೆನ್ನೈ ಎಕ್ಸ್ ಪ್ರೆಸ್ ದಾಖಲೆ ಮುರಿದ ಚಿತ್ರ

    'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ ಹಿಂದಿ ಆವೃತ್ತಿಗೆ ಹೋಲಿಸಿದರೆ ಧೂಮ್ 3 ಬಹಳ ಮುಂದಿದೆ. ಚೆನ್ನೈ ಎಕ್ಸ್ ಪ್ರೆಸ್ ಹಿಂದಿ ಆವೃತ್ತಿ ರು. 139 ಕೋಟಿ ಬಾಚಿತ್ತು. ಧೂಮ್ 3 ಚಿತ್ರ ರು.170 ಕೋಟಿ ಕಲೆಕ್ಷನ್ ಮಾಡಿದೆ.

    ಎರಡನೇ ವಾರದಲ್ಲೂ ಮುಂದುವರಿದ ಹವಾ

    ಎರಡನೇ ವಾರದಲ್ಲೂ ಮುಂದುವರಿದ ಹವಾ

    ಎರಡನೇ ವಾರದಲ್ಲಿ ಧೂಮ್ 3 ಚಿತ್ರ ರು.38 ಕೋಟಿ ಕಲೆಕ್ಷನ್ ಮಾಡಿದೆ. ದೇಶಿಯ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಎರಡನೇ ವಾರದ ಒಟ್ಟಾರೆ ಚಿತ್ರದ ಗಳಿಕೆ ರು.227 ಕೋಟಿ. ಅದೇ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ರು.226.70 ಕೋಟಿ ಹಾಗೂ ಕ್ರಿಷ್ 3 ಚಿತ್ರ ರು. 244 ಕೋಟಿ ಕಲೆಕ್ಷನ್ ಮಾಡಿದೆ.

    ವ್ಯಾವಹಾರಿಕವಾಗಿ ಗೆದ್ದ ಚಿತ್ರ

    ವ್ಯಾವಹಾರಿಕವಾಗಿ ಗೆದ್ದ ಚಿತ್ರ

    ದೇಶೀಯ ಹಾಗೂ ವಿದೇಶಿ ಚಿತ್ರಮಂದಿರಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಧೂಮ್ 3 ಚಿತ್ರ ಬಿಡುಗಡೆಯಾಗಿರುವುದು ಇನ್ನೊಂದು ಮೈಲಿಗಲ್ಲು. ಮನರಂಜನೆ ಹಾಗೂ ವ್ಯಾವಹಾರಿಕವಾಗಿ 'ಧೂಮ್ 3' ಚಿತ್ರ ಗೆದ್ದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    English summary
    Aamir Khan, Katrina Kaif starrer action thriller movie 'Dhoom 3' considered to be the biggest franchise, with an estimated brand value of Rs 500 crore, according to a survey conducted after the announcement of 'Dhoom 3'.
    Tuesday, January 7, 2014, 13:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X