Sanjay Gadhvi: ಸೂಪರ್ ಹಿಟ್ 'ಧೂಮ್' ಸಿನಿಮಾಗಳ ನಿರ್ದೇಶಕ ಸಂಜಯ್ ಗಧ್ವಿ (56) ನಿಧನ

ಬಾಲಿವುಡ್‌ನ ಸೂಪರ್ ಹಿಟ್ 'ಧೂಮ್' ಮತ್ತು 'ಧೂಮ್ 2' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಂಜಯ್ ಗಧ್ವಿ ಭಾನುವಾರ (ನವೆಂಬರ್ 19) ರಂದು ಮುಂಬೈನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಹೃದಯಾಘಾತವಾಗಿದೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನದ ಸುದ್ದಿಯನ್ನು ಅವರ ಪುತ್ರಿ ಸಜಿನಾ ಗಧ್ವಿ ಪಿಟಿಐ ಜೊತೆ ಹಂಚಿಕೊಂಡಿದ್ದಾರೆ.

ನಿರ್ದೇಶಕ ಸಂಜಯ್ ಗಧ್ವಿ ಅವರಿಗೆ 56 ವರ್ಷ ವಯಸ್ಸಾಗಿತ್ತು. ಕೇವಲ ಮೂರು ದಿನಗಳ ನಂತರ ನವೆಂಬರ್ 22 ರಂದು ಅವರು 57 ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಸಂಜಯ್ ಗಧ್ವಿ ತಮ್ಮ ಪತ್ನಿ ಗಿನಾ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Dhoom and Dhoom 2 director Sanjay Gadhvi (56) dies due to heart attack

ತಂದೆಯ ನಿಧನದ ಸುದ್ದಿಯನ್ನು ತಿಳಿಸಿರುವ ಹಿರಿಯ ಪುತ್ರಿ ಸಜಿನಾ, "ಅವರು ಇಂದು (ಭಾನುವಾರ) ಬೆಳಗ್ಗೆ 9.30 ಕ್ಕೆ ಅವರ ಮನೆಯಲ್ಲಿಯೇ ನಿಧನರಾದರು. ಕಾರಣ ಏನೆಂದು ನಮಗೆ ಖಚಿತವಾಗಿಲ್ಲ, ಆದರೆ ಇದು ಹೃದಯಾಘಾತ ಎಂಬುದು ತಿಳಿಯುತ್ತಿದೆ. ಏಕೆಂದರೆ ಅವರು ಅಸ್ವಸ್ಥರಾಗಿರಲಿಲ್ಲ, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದರು" ಎಂದು ಪಿಟಿಐಗೆ ತಿಳಿಸಿದ್ದಾರೆ.

ತೇರೆ ಲಿಯೆ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ

ಸಂಜಯ್ ಧನ್ವಿ ಅವರು 2000 ರಲ್ಲಿ ತೆರೆಕಂಡ ಚಿತ್ರ 'ತೇರೆ ಲಿಯೆ' ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. ಅರ್ಜುನ್ ರಾಂಪಾಲ್ ಮತ್ತು ರವೀನಾ ಟಂಡನ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರಕ್ಕೆ ಮೊದಲು 'ತು ಹಿ ಬಟಾ' ಎಂದು ಹೆಸರಿಸಲಾಗಿತ್ತು. ಆದರೆ, ಕಡಿಮೆ ಬಜೆಟ್‌ನಿಂದ ಚಿತ್ರ ಸ್ಥಗಿತಗೊಂಡಿತ್ತು. ಇದಾದ ನಂತರ ಅವರು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಧೂಮ್, ಧೂಮ್ 2 ಮತ್ತು 2002 ರ ಮೇರೆ ಯಾರ್ ಕಿ ಶಾದಿ ಹೈ.

ಸಂಜಯ್ ಗಧ್ವಿ ಅವರಿಗೆ ಹೆಸರು ತಂದುಕೊಟ್ಟ ಧೂಮ್, ಧೂಮ್ 2'

ನಿರ್ದೇಶಕ ಸಂಜಯ್ ಗಧ್ವಿ ಅವರಿಗೆ ಧೂಮ್ ಮತ್ತು ಧೂಮ್ 2 ಸಕತ್ ಹೆಸರು ತಂದುಕೊಟ್ಟವು. ಇವೆರಡೂ ಸಿನಿಮಾಗಳು ಬಾಲಿವುಡ್‌ನಲ್ಲಿ ದೊಡ್ಡ ಯಶಸ್ಸು ಕಂಡವು. 2004 ರಲ್ಲಿ ಬಂದ ಧೂಮ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಜೋಡಿ ಸಕತ್ ಕಮಾಲ್ ಮಾಡಿತ್ತು. ಇದರ ಯಶಸ್ಸಿನಲ್ಲೇ 2006ರಲ್ಲಿ ಅದರ ಸೀಕ್ವೆಲ್ ಧೂಮ್ 2 ಬಂದಿತ್ತು. ಇದರಲ್ಲಿ ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಸೇರಿ ಅನೇಕರು ಕೆಲಸ ಮಾಡಿದ್ದರು. ಎರಡು ಸಿನಿಮಾಗಳು ಹಿಟ್ ಆದವು.

ಧೂಮ್ ಸಿನಿಮಾಗಳ ಯಶಸ್ಸಿನ ಬಳಿಕ ಅವರು 2008 ರಲ್ಲಿ ಸಂಜಯ್ ದತ್, ಇಮ್ರಾನ್ ಖಾನ್ ಮತ್ತು ಮಿನಿಶಾ ಲಾಂಬಾ ಅಭಿನಯದ ಕಿಡ್ನಾಪ್, 2012 ರಲ್ಲಿ ಅರ್ಜುನ್ ರಾಂಪಾಲ್ ಅಭಿನಯದ ಅಜಬ್ ಗಜಬ್ ಲವ್ ಮತ್ತು 2020 ರಲ್ಲಿ ಅಮಿತ್ ಸಾಧ್ ಮತ್ತು ರಾಹುಲ್ ದೇವ್ ನಟಿಸಿದ ಆಪರೇಷನ್ ಪರಿಂದೇ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು.

ಯಶ್ ರಾಜ್ ಫಿಲ್ಮ್ಸ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸಂಜಯ್ ಗಧ್ವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಫೋಟೋವನ್ನು ಹಂಚಿಕೊಂಡಿದೆ. "ಅವರು ಪರದೆಯ ಮೇಲೆ ರಚಿಸಿದ ಮ್ಯಾಜಿಕ್ ಅನ್ನು ಶಾಶ್ವತವಾಗಿ ನೆನಪಿಡಲಾಗುವುದು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಂಜಯ್ ಗಧ್ವಿ" ಎಂದು ಬರೆದಿದೆ. ಸಂಜಯ್ ಗಧ್ವಿಯ ಅಂತ್ಯ ಸಂಸ್ಕಾರದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

More from Filmibeat

English summary
Bollywood director Sanjay Gadhvi (56) dies due to heart attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X