ಬಿಡುಗಡೆಗೂ ಮುನ್ನ 245 ಕೋಟಿ ರೂ. ಬಾಚಿದ 'ಧುರಂಧರ್- 2'; ರಣ್‌ವೀರ್ ಸಿಂಗ್ ಆರ್ಭಟ

ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ: ತೆರೆಗೆ ಬರುವ ಮೊದಲೇ ಬರೋಬ್ಬರಿ 245 ಕೋಟಿ ಬಾಚಿದ ಬಿಗ್ ಬಜೆಟ್ ಸಿನಿಮಾ... ಬಣ್ಣದ ಲೋಕದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಇಲ್ಲಿ ಒಂದು ಸಿನಿಮಾ ಹಿಟ್ ಆದರೆ ಸಾಕು, ಆ ನಟನ ಮಾರ್ಕೆಟ್ ಎಲ್ಲಿಂದ ಎಲ್ಲಿಗೋ ಜಿಗಿಯುತ್ತದೆ. ಸದ್ಯ ಬಾಲಿವುಡ್ ಅಂಗಳದಲ್ಲಿ ಇಂತಹದ್ದೇ ಒಂದು ದೊಡ್ಡ ಸುನಾಮಿ ಎದ್ದಿದೆ. ಸ್ಟಾರ್ ನಟನೊಬ್ಬನ ಸಿನಿಮಾ ಸೆಟ್ಟೇರುವ ಮೊದಲೇ ಇಡೀ ಇಂಡಸ್ಟ್ರಿ ಬೆಚ್ಚಿಬೀಳುವಂತಹ ಕೆಲಸ ಮಾಡಿದೆ. ಅಷ್ಟಕ್ಕೂ ಆ ನಟ ಯಾರು? ಆ ಸಿನಿಮಾ ಯಾವುದು? ಎಂಬ ಕುತೂಹಲ ಮೂಡುವುದು ಸಹಜ.

ಸಾಮಾನ್ಯವಾಗಿ ಸಿನಿಮಾಗಳು ತೆರೆಗೆ ಬಂದ ಮೇಲೆ ಕೋಟಿ ಕೋಟಿ ಹಣ ಗಳಿಸುವುದು ವಾಡಿಕೆ. ಆದರೆ ಇಲ್ಲೊಬ್ಬ ಖ್ಯಾತ ನಿರ್ದೇಶಕ ಮತ್ತು ಎನರ್ಜಿಟಿಕ್ ನಟನ ಜೋಡಿ ಸಿನಿಮಾ ರಿಲೀಸ್ಗೆ ಮೊದಲೇ ಲಾಭದ ಲೆಕ್ಕಾಚಾರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಡೀ ಚಿತ್ರರಂಗದ ಕಣ್ಣು ಈಗ ಈ ಜೋಡಿಯ ಮೇಲೆ ಬಿದ್ದಿದೆ. ಯಾಕಂದ್ರೆ ಅಲ್ಲಿ ಹರಿದುಬಂದಿರುವ ಹಣದ ಮೊತ್ತ ಅಂತಿಂಥದ್ದಲ್ಲ.

Dhurandhar 2 Creates History with Rs 245 Crore Pre-Release Business Ahead of March 19 Release

ಈ ಸುದ್ದಿಯನ್ನು ಕೇಳಿದ ಮೇಲೆ ನೀವು ಖಂಡಿತವಾಗಿಯೂ ಹುಬ್ಬೇರಿಸುತ್ತೀರಾ. ಯಾಕಂದ್ರೆ ಇದು ಕೇವಲ ಒಂದು ಸಿನಿಮಾದ ವ್ಯಾಪಾರವಲ್ಲ, ಬದಲಾಗಿ ಆ ನಟನ ಕೆರಿಯರ್‌ನಲ್ಲೇ ಕಂಡರಿಯದ ದೊಡ್ಡ ಡೀಲ್. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವೇ ಸಖತ್ ಟ್ರೆಂಡ್ ಆಗ್ತಿದೆ. ಆ ಅಸಲಿ ಮ್ಯಾಟರ್ ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಧುರಂಧರ್ 2' ಅಸಲಿ ಬೇಟೆ...

ಹೌದು, ನಾವು ಮಾತನಾಡುತ್ತಿರುವುದು ಬಾಲಿವುಡ್ ಸೂಪರ್ ಸ್ಟಾರ್ ರಣ್‌ವೀರ್ ಸಿಂಗ್ ಮತ್ತು 'ಉರಿ' ಖ್ಯಾತಿಯ ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್ನ ಬಹುನಿರೀಕ್ಷಿತ ಸಿನಿಮಾ 'ಧುರಂಧರ್: ದಿ ರಿವೆಂಜ್' ಬಗ್ಗೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಈಗ ಎರಡನೇ ಭಾಗಕ್ಕೆ ಸಿದ್ಧತೆ ಜೋರಾಗಿ ನಡೆದಿದೆ. ಈಗ ಬಂದಿರುವ ಬ್ರೇಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ, ಈ ಚಿತ್ರದ ನಾನ್-ಥಿಯೇಟ್ರಿಕಲ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿವೆ.

Dhurandhar 2 Creates History with Rs 245 Crore Pre-Release Business Ahead of March 19 Release

ವರದಿಗಳ ಪ್ರಕಾರ 'ಧುರಂಧರ್ 2' ಚಿತ್ರದ ಡಿಜಿಟಲ್, ಸ್ಯಾಟಲೈಟ್ ಮತ್ತು ಆಡಿಯೋ ಹಕ್ಕುಗಳಿಂದ ಬರೋಬ್ಬರಿ 245 ಕೋಟಿ ರೂಪಾಯಿ ಹಣ ಹರಿದುಬಂದಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಮೊದಲೇ ಇಷ್ಟು ದೊಡ್ಡ ಮೊತ್ತದ ಹಣ ಗಳಿಸಿರುವುದು ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಮೊದಲ ಭಾಗಕ್ಕಿಂತಲೂ ಎರಡನೇ ಭಾಗದ ಕ್ರೇಜ್ ಡಬಲ್ ಆಗಿದೆ ಎನ್ನುವುದಕ್ಕೆ ಈ ವ್ಯವಹಾರವೇ ಸಾಕ್ಷಿ.

ರಣವೀರ್ ಚಿತ್ರಕ್ಕೆ ಹಣದ ಹೊಳೆ...

ಈ ಬಾರಿ ರಣವೀರ್ ಸಿಂಗ್ 'ಧುರಂಧರ್ 2' ಚಿತ್ರಕ್ಕೆ ಓಟಿಟಿ ದೈತ್ಯ ಸಂಸ್ಥೆಗಳು ಮುಗಿಬಿದ್ದಿವೆ. ಸದ್ಯದ ಮಾಹಿತಿ ಪ್ರಕಾರ, ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಿಯೋ ಹಾಟ್ಸ್ಟಾರ್ ಬರೋಬ್ಬರಿ 150 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿದೆ ಎನ್ನಲಾಗುತ್ತಿದೆ. ಇನ್ನುಳಿದಂತೆ ಸ್ಯಾಟಲೈಟ್ ಹಕ್ಕುಗಳು ಮತ್ತು ಮ್ಯೂಸಿಕ್ ರೈಟ್ಸ್ ಕೂಡ ಭರ್ಜರಿ ಮೊತ್ತಕ್ಕೆ ಸೇಲ್ ಆಗಿವೆ.

ಈ ಮೂಲಕ ಸಿನಿಮಾ ತನ್ನ ಅರ್ಧಕ್ಕಿಂತ ಹೆಚ್ಚು ಬಜೆಟ್ ಅನ್ನು ಈಗಲೇ ವಾಪಸ್ ಪಡೆದಂತಾಗಿದೆ. ನಿರ್ದೇಶಕ ಆದಿತ್ಯ ಧರ್ ಅವರ ಸ್ಕ್ರೀನ್‌ಪ್ಲೇ ಮತ್ತು ರಣ್‌ವೀರ್ ಸಿಂಗ್ ಅವರ ರಗಡ್ ಲುಕ್ ನೋಡಿ ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ವಿತರಕರು ಕೂಡ ಫಿದಾ ಆಗಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಗ್ಯಾರಂಟಿ...

ರಣ್‌ವೀರ್ ಸಿಂಗ್ ಈ ಸಿನಿಮಾದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ ಸಂಜಯ್ ದತ್, ಆರ್. ಮಾಧವನ್ ಮತ್ತು ಅಕ್ಷಯ್ ಖನ್ನಾ ಅಂತಹ ಘಟಾನುಘಟಿ ಕಲಾವಿದರು ಇರುವುದು ಚಿತ್ರಕ್ಕೆ ಆನೆ ಬಲ ಬಂದಂತಾಗಿದೆ. 'ಧುರಂಧರ್ 2' ಕೇವಲ ಸಿನಿಮಾ ಅಲ್ಲ, ಅದೊಂದು ಎಮೋಷನ್ ಅಂತಿದ್ದಾರೆ ಚಿತ್ರತಂಡದವರು.

ಮಾರ್ಚ್ 19, 2026 ರಂದು ಈ ಸಿನಿಮಾ ವಿಶ್ವಾದಾದ್ಯಂತ ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ರಣ್‌ವೀರ್ ಸಿಂಗ್ ಆರ್ಭಟಿಸಲಿದ್ದಾರೆ.

More from Filmibeat

Read more about: ranveer singh hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X