ಧುರಂಧರ್ 2 ಸಂಭಾವನೆ ವಿವರ ; ರಣವೀರ್‌ಗೆ ಕೈತುಂಬಾ ಕಾಸು, ಅಕ್ಷಯ್ ಖನ್ನಾ ನಿಜವಾದ ಬಾಸು, ಅರ್ಜುನ್ ರಾಂಪಾಲ್‌ಗೆ ಬಿಡಿಗಾಸು

ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ. ಆದರೆ ಕೆಲವರು ತಮ್ಮ ಸಂಭಾವನೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಸಿಗಬೇಕಾದ ಸಂಭಾವನೆ ಸಿಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ.

ಹೀಗಾಗಿಯೇ ಸಂಭಾವನೆ ವಿಚಾರದಲ್ಲಿ ಕೆಲ ನಟ ಮತ್ತು ನಟಿಯರ ಸುತ್ತ ಕುತೂಹಲ ಇರುತ್ತೆ. ಸಂಭಾವನೆ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಜಿಜ್ಞಾಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾನೇ ಹೋಗುತ್ತೆ. ಉದಾಹರಣೆಗೆ ''ಧುರಂಧರ್ 2'' ಚಿತ್ರದ ವಿಚಾರವನ್ನೇ ತೆಗೆದುಕೊಳ್ಳಿ.

Dhurandhar 2 Salary Shocker Ranveer Singh s 50Cr Fee vs Akshaye Khanna s Insane 150 Pay Gap

ಹೌದು, ಇನ್ನೇನು ಕೆಲವೇ ಗಂಟೆ, ಬೆಳ್ಳಿತೆರೆಯಲ್ಲಿ ''ಧುರಂಧರ್ 2'' ಕಥೆ ಅನಾವರಣವಾಗಲಿದೆ. ಜಾತಕ ಪಕ್ಷಿಯಂತೆ ಕಾಯುತ್ತಿರುವ ಹಲವರು ಈಗಾಗಲೇ ಚಿತ್ರದ ಟಿಕೆಟ್‌ ಖರೀದಿ ಮಾಡಿದ್ದಾರೆ. ಸಂಜೆ 5 ಗಂಟೆಯ ಪ್ರೀಮಿಯರ್ ಪ್ರದರ್ಶನಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಕೆಲವರು ''ಧುರಂಧರ್ 2'' ಚಿತ್ರಕ್ಕೆ ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂದು ಚರ್ಚೆ ಕೂಡ ಮಾಡುತ್ತಿದ್ದಾರೆ.

ಯಾಕೆಂದರೆ..ಬಾಕ್ಸ್ ಆಫೀಸ್‌ನಲ್ಲಿ ''ಧುರಂಧರ್ 2'' ಭರ್ಜರಿ ಯಶಸ್ಸು ಗಳಿಸುತ್ತಿದ್ದು, ಚಿತ್ರದ ತಾರಾಗಣದ ಸಂಭಾವನೆ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಸಾಮಾನ್ಯವಾಗಿ ಒಂದು ಚಿತ್ರ ಬ್ಲಾಕ್‌ಬಸ್ಟರ್ ಆದರೆ ಆ ಚಿತ್ರದ ಮುಂದುವರೆದ ಭಾಗಕ್ಕೆ ಹಲವರು ಹೆಚ್ಚಿನ ಸಂಭಾವನೆ ಪಡೆಯುವುದು ವಾಡಿಕೆ.

ಇನ್ನೂ ''ಧುರಂಧರ್'' ಬರೆದ ಇತಿಹಾಸ ಎಲ್ಲರಿಗೆ ಗೊತ್ತಿರುವಂತಹದ್ದೇ. ಭಾರತದಲ್ಲಿಯೇ ₹800 ಕೋಟಿಯನ್ನು ಈ ಚಿತ್ರ ಗಳಿಸಿತ್ತು. ವಿಶ್ವದಾದ್ಯಂತ ಲೆಕ್ಕ ತೆಗೆದುಕೊಂಡರೆ ಗಳಿಕೆ ₹1000 ಕೋಟಿಗೂ ಹೆಚ್ಚಿದೆ.

ಹೀಗಾಗಿ ಇಂತಹ ದಾಖಲೆಯನ್ನು ಬರೆದ ಈ ಚಿತ್ರದ ಎರಡನೇ ಭಾಗಕ್ಕೆ ಚಿತ್ರದಲ್ಲಿನ ಕಲಾವಿದರು ಕೈತುಂಬಾ ಕಾಸು ಪಡೆದಿರುತ್ತಾರೆ ಎಂದು ಹಲವರು ಅಂದುಕೊಂಡಿದ್ದಾರೆ. ಮೊದಲ ಭಾಗಕ್ಕಿಂತ ಹೆಚ್ಚಿನ ಸಂಭಾವನೆ ಸಿಕ್ಕಿರುತ್ತೆ ಎಂದು ಚರ್ಚೆ ಮಾಡುತ್ತಿದ್ದಾರೆ. ಆದರೆ.. ವಾಸ್ತವದಲ್ಲಿ ಹೆಚ್ಚೇನು ಬದಲಾವಣೆಗಳಾಗಿಲ್ಲ.

Dhurandhar 2 Salary Shocker Ranveer Singh s 50Cr Fee vs Akshaye Khanna s Insane 150 Pay Gap

ಹೌದು, koimoi ವರದಿ ಮಾಡಿರುವಂತೆ ಮತ್ತು ಸದ್ಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾದಂತೆ ''ಧುರಂಧರ್''ನ ಹಮ್ಜಾ ಅಲಿ ಅಲಿಯಾಸ್ ಜಸ್ಕಿರತ್ ಅಲಿಯಾಸ್ ರಣವೀರ್ ಸಿಂಗ್ ₹50 ಕೋಟಿ ಸಂಭಾವನೆಯನ್ನು ''ಧುರಂಧರ್'' ಚಿತ್ರಕ್ಕೆ ಪಡೆದಿದ್ದಾರೆ.

ಇನ್ನೂ ಚಿತ್ರದಲ್ಲಿ ಎಸ್‌ಪಿ ಚೌಧರಿ ಅಸ್ಲಂ ಪಾತ್ರದಲ್ಲಿ ಮಿಂಚಿರುವ ಸಂಜಯ್ ದತ್ ಅವರಿಗೆ ಎರಡನೇ ಭಾಗಕ್ಕೆ ₹10 ಕೋಟಿ ಸಂಭಾವನೆ ನೀಡಲಾಗಿದ್ದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರನ ಪಾತ್ರದಲ್ಲಿರುವ ಆರ್. ಮಾಧವನ್ ₹9 ಕೋಟಿ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ಬಾಲಿವುಡ್‌ನಲ್ಲಿ ಅಂಬೆಗಾಲಿಡುತ್ತಿರುವ ನಾಯಕಿ ಸಾರಾ ಅರ್ಜುನ್ ₹1 ಕೋಟಿ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ.

ಅಕ್ಷಯ್ ಖನ್ನಾ ಎಂಬ ಅಚ್ಚರಿ, ಅರ್ಜುನ್ ರಾಂಪಾಲ್‌ ಸಂಭಾವನೆ ಎಷ್ಟು ?

ಮೊದಲ ಭಾಗದಲ್ಲಿ ರಣವೀರ್ ಸಿಂಗ್ ಅವರಿಗಿಂತ ಹೆಚ್ಚಿನ ಸದ್ದು ಮಾಡಿದವರು ಅಕ್ಷಯ್ ಖನ್ನಾ. ರೆಹಮಾನ್ ಡಕಾಯತ್ ಪಾತ್ರದಲ್ಲಿ ಅತ್ಯಮೋಘವಾಗಿ ಅಭಿನಯಿಸಿದ್ದ ಅಕ್ಷಯ್ ಖನ್ನಾ ಅವರಿಗೆ ಮೊದಲ ಭಾಗಕ್ಕೆ ₹2.5 ಕೋಟಿಯನ್ನು ನೀಡಲಾಗಿತ್ತು.ಪಾತ್ರ ಮೊದಲ ಭಾಗದಲ್ಲಿ ಅಂತ್ಯವೂ ಆಗಿತ್ತು.

ಆದರೆ, ಆ ಪಾತ್ರಕ್ಕೆ ಸಿಕ್ಕ ಪ್ರೀತಿ ಮತ್ತು ಪ್ರಶಂಸೆಯಿಂದ ಮೂಕವಿಸ್ಮಿತರಾದ ಆದಿತ್ಯ ಧರ್ ರೆಹಮಾನ್ ಡಕಾಯತ್ ಪಾತ್ರಕ್ಕೆ ಮರು ಜೀವ ನೀಡಿದ್ದಾರೆ. ''ಧುರಂಧರ್ 2''ದಲ್ಲಿಯೂ ಅಕ್ಷಯ್ ಖನ್ನಾ ಅವರನ್ನು ಬಳಸಿಕೊಂಡಿದ್ದಾರೆ. ಇಲ್ಲಿ ಅಲ್ಲಲ್ಲಿ ರೆಹಮಾನ್ ಡಕಾಯತ್ ಬದುಕಿನ ಫ್ಲ್ಯಾಶ್ ಬ್ಯಾಕ್‌ಗಳು ಬಂದು ಹೋಗಲಿವೆ. ಒಂದರ್ಥದಲ್ಲಿ ಅಕ್ಷಯ್ ಖನ್ನಾ ಅವರದ್ದು ಇಲ್ಲಿ ಅತಿಥಿ ಪಾತ್ರ. ಆದರೆ ಈ ಚಿತ್ರ ಪಾತ್ರಕ್ಕೆ ಕೂಡ ಅಕ್ಷಯ್ ಖನ್ನಾ ಅವರಿಗೆ ₹2.5 ಕೋಟಿ ಸಂಭಾವನೆ ನೀಡಲಾಗಿದೆ ಎಂದು ಸದ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಚ್ಚರಿ ಅಂದರೆ ''ಧುರಂಧರ್ 2'' ಚಿತ್ರದ ಪ್ರಮುಖ ಖಳನಾಯಕ ಮೇಜರ್ ಇಕ್ಬಾಲ್ ಪಾತ್ರವನ್ನು ನಿರ್ವಹಿಸುರುವ ಅರ್ಜುನ್ ರಾಂಪಾಲ್ ಅವರಿಗೆ ಕೇವಲ ₹1 ಕೋಟಿ ಸಂಭಾವನೆ ನೀಡಲಾಗಿದೆ. ಮತ್ತೊಂದು ಕಡೆ ಅತಿಥಿ ಪಾತ್ರದಲ್ಲಿರುವ ಅಕ್ಷಯ್‌ ಖನ್ನಾಗೆ ಅರ್ಜುನ್ ರಾಂಪಾಲ್ ಅವರಿಗಿಂತ ಹೆಚ್ಚಿನ ಸಂಭಾವನೆ ಸಿಕ್ಕಿದೆ. ಈ ವಿಚಾರ ಸದ್ಯ ಚರ್ಚೆಗೀಡಾಗಿದೆ. ಮೊದಲ ಭಾಗದಲ್ಲಿ ಅರ್ಜುನ್ ರಾಂಪಾಲ್ ಚೆನ್ನಾಗಿ ಅಭಿನಯಿಸಿದ್ದರೂ ಎರಡನೇ ಭಾಗಕ್ಕೆ ಅವರಿಗೆ ಕೇವಲ 1 ಕೋಟಿಯಷ್ಟೇ ಕೋಟಿದ್ದರಿಂದ ಅವರಿಗೆ ಮೋಸ ಆಗಿದೆ ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಅಂದ್ಹಾಗೇ ಮಾಧ್ಯಮಗಳ ವರದಿಯ ಪ್ರಕಾರ 2024ರಲ್ಲೇ ಆದಿತ್ಯ ಧರ್ ಎರಡು ಭಾಗದ ''ಧುರಂಧರ್''ಗೆ ಅಕ್ಷಯ್ ಖನ್ನಾ ಹೊರತು ಪಡಿಸಿ ಬೇರೆಯವರ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅದ್ರಂತೆ ಸಂಭಾವನೆ ನಿಗದಿ ಮಾಡಿದ್ದರು. ಆಗ ಮೊದಲ ಭಾಗಕ್ಕೆ ಇಷ್ಟೊಂದು ಪ್ರೀತಿ ಸಿಗುತ್ತೆ, ಇಷ್ಟೊಂದು ಹಣ ಚಿತ್ರ ಗಳಿಸುತ್ತೆ ಎನ್ನುವ ಚಿಕ್ಕ ಅಂದಾಜು ಕೂಡ ಯಾರಲ್ಲಿಯೂ ಇರಲಿಲ್ಲ. ಸಂಭಾವನೆಯಲ್ಲಿ ಬದಲಾವಣೆಯಾಗದಿರಲು ಇದು ಕೂಡ ಪ್ರಮುಖ ಕಾರಣ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಅಕ್ಷಯ್ ಖನ್ನಾಗೆ ಮಾತ್ರ ಲಾಭ ಆಯ್ತು ಎನ್ನುವ ಚರ್ಚೆ ನಡೆಯುತ್ತಿದೆ.

More from Filmibeat

English summary
Dhurandhar 2 Cast Fees Revealed: From Ranveer Singh’s ₹50Cr paycheck to Akshaye Khanna’s massive cameo premium. Check the official salaries of the 2026 sequel.
Read more about: remuneration ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X