ಧುರಂಧರ್ 2 ಟಿಕೆಟ್ ರೇಟ್‌ಗೆ ಬೆಚ್ಚಿಬಿದ್ದ ಬೆಂಗಳೂರು ; ಪ್ರೀಮಿಯರ್ ಶೋ ಹೆಸರಿನಲ್ಲಿ ಹಗಲು ದರೋಡೆ

ನಿಜಾ... ಚಿತ್ರಮಂದಿರದಲ್ಲಿ ಚಿತ್ರವೊಂದನ್ನು ನೋಡುವ ಮಜವೇ ಬೇರೆ. ಆದರೆ.. ಈಗೀಗ ಈ ಮಜಾ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಮರಿಚೀಕೆಯಾಗಿದೆ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡುವ ಅಭ್ಯಾಸ ಮಾಡಿಕೊಂಡಿದ್ದ ಆಸಕ್ತ ಸಿನಿಮಾ ವಿದ್ಯಾರ್ಥಿಗಳಿಗೆ ಚಿತ್ರಮಂದಿರದ ಸಹವಾಸ ಸಾಕೆನಿಸಿದೆ.

ಇಂದು ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲ. ಬದಲಿಗೆ ವ್ಯಾಪಾರ. ಆದರೆ, ಕಲೆ ಮತ್ತು ಕಾಸು ಬೆರೆತ ಈ ಉದ್ಯಮ ಹಗಲು ದರೋಡೆ ಮಾಡಲು ಮುಂದಾಗಿದ್ದು ಮಾತ್ರ ದುರಂತ. ಇದಕ್ಕೆ ''ಧುರಂಧರ್ 2'' ಸದ್ಯದ ಉದಾಹರಣೆ.

Dhurandhar 2 Ticket Price Explosion Bengaluru Fans Stunned as Paid Preview Rates Cross 1 500 Mark

ಹೌದು, ''ಧುರಂಧರ್ 2''.. ಈ ಮಾರ್ಚ್ 19ರಂದು ತೆರೆಗೆ ಬರುತ್ತಿರುವ ಸಿನಿಮಾ. ಹಲವರು ಈ ಚಿತ್ರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ವಿಚಾರ ನಿರ್ದೇಶಕ ಮತ್ತು ನಿರ್ಮಾಪಕ ಆದಿತ್ಯ ಧರ್ ಗೆ ಚೆನ್ನಾಗಿಯೇ ಗೊತ್ತು. ಪ್ರದರ್ಶಕ ಮತ್ತು ವಿತರಕ ವಲಯಕ್ಕೂ ಗೊತ್ತು.

ಇನ್ನು ಕಬ್ಬಿಣ ಬಿಸಿಯಾಗಿದ್ದಾಗಲೇ ಬಡಿಯಬೇಕು. ಹೀಗಾಗಿ ಪ್ರೇಕ್ಷಕರ ಕುತೂಹಲ, ಭಾವನೆಯನ್ನೇ ಬಂಡವಾಳ ಮಾಡಿಕೊಂಡು ಹಾಕಿದ ಬಂಡವಾಳ ಎತ್ತಿ ಬಿಡುವ ಪ್ಲ್ಯಾನ್ ಮಾಡಿರುವ ಇವರೆಲ್ಲರೂ ''ಧುರಂಧರ್ 2'' ಚಿತ್ರವನ್ನು ಮಾರ್ಚ್ 18ರಂದೇ ನೋಡುವ ಅವಕಾಶ ಕಲ್ಪಿಸಿದ್ದಾರೆ. ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಆದರೆ, ನೀವು ಮಾತ್ರ ಹೋಗುವ ಧೈರ್ಯ ಮಾಡಬೇಡಿ. ಯಾಕೆಂದರೆ ''ಧುರಂಧರ್'' ಹೆಸರಿನಲ್ಲಿ ಕರ್ನಾಟಕದಲ್ಲಿ ಅಕ್ಷರಶಃ ಹಗಲು ದರೋಡೆ ನಡೆಯುತ್ತಿದೆ.

ಮಾರ್ಚ್ 18ರಂದು ಸಂಜೆ 5 ಗಂಟೆಯಿಂದ ಆರಂಭವಾಗಲಿರುವ ಪ್ರೀಮಿಯರ್ ಪ್ರದರ್ಶನಕ್ಕೆ ಮನಸೋ ಇಚ್ಛೆ ದರ ನಿಗದಿ ಮಾಡಲಾಗಿದೆ. ಬೆಂಗಳೂರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಓರಾಯನ್ ಮಾಲ್‌ನಲ್ಲಿ ಟಿಕೆಟ್ ಬೆಲೆ ₹1500 ಇದೆ. ರಾತ್ರಿ 9-50ರ ಪ್ರದರ್ಶನಕ್ಕೆ ₹1300 ಇದೆ. ವಿಪರ್ಯಾಸ ಅಂದರೆ ಕನ್ನಡ ಚಿತ್ರಕ್ಕೆ ₹200 ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಬೆಂಗಳೂರಿಗರು ಮುಗಿ ಬಿದ್ದು ''ಧುರಂಧರ್ 2'' ಚಿತ್ರದ ಈ ಪ್ರೀಮಿಯರ್ ಪ್ರದರ್ಶನದ ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಓರಾಯನ್ ಮಾಲ್‌ನಲ್ಲಿ ಆಗಲೇ ಹೌಸ್‌ಫುಲ್ ಬೋರ್ಡ್ ಬಿದ್ದಿದೆ.

ಇನ್ನೂ ಕೋರಮಂಗಲದ ನೆಕ್ಸಸ್‌ನಲ್ಲಿರುವ ಪಿವಿಆರ್ ನಲ್ಲಿ ಯಾರಾದರೂ ಸಿನಿಮಾ ನೋಡಬೇಕು ಎಂದುಕೊಂಡಿದ್ದರೆ ಹುಷಾರು. ಯಾಕೆಂದರೆ ಇಲ್ಲಿ ಒಂದು ಟಿಕೆಟ್‌ನ ದರ ₹2300. ರಾತ್ರಿ 9-50ರ ಪ್ರದರ್ಶನಕ್ಕೆ ನೂರು ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಓರಾಯನ್ ಮಾಲ್‌ನಂತೆ ಇಲ್ಲಿಯೂ ಕೂಡ ''ಧುರಂಧರ್ 2'' ಆಗಲೇ ಹೌಸ್‌ಫುಲ್ ಆಗಿದೆ.

Dhurandhar 2 Ticket Price Explosion Bengaluru Fans Stunned as Paid Preview Rates Cross 1 500 Mark

ಬೆಂಗಳೂರಿನ ಬ್ರೀಗೇಡ್ ರಸ್ತೆಯಲ್ಲಿರುವ ಡೈರೆಕ್ಟರ್ಸ್ ಕಟ್ ಫೋರಂ ರೆಕ್ಸ್‌ನಲ್ಲಿ ಕೂಡ ಟಿಕೆಟ್ ದರ ₹2000 ಮೇಲಿದೆ. ಇಲ್ಲಿ ಮಾರ್ಚ್ 18ರಂದು ''ಧುರಂಧರ್-2'' ನಾಲ್ಕು ಬಾರಿ ಪ್ರದರ್ಶನ ಕಾಣಲಿದ್ದು ಎಲ್ಲ ಪ್ರದರ್ಶನಗಳು ಈಗಾಗಲೇ ಹೌಸ್‌ಫುಲ್ ಆಗಿವೆ.

ಕೇವಲ ಈ ಮೂರು ಕಡೆ ಮಾತ್ರವಲ್ಲ ಮಾರ್ಚ್ 18ರಂದು ''ಧುರಂಧರ್ 2''ಗೆ ರತ್ನಗಂಬಳಿಯನ್ನು ಹಾಕಿರುವ ಬೆಂಗಳೂರಿನ 40 ಮಲ್ಟಿಫ್ಲೆಕ್ಸ್‌ಗಳಲ್ಲಿಯೂ ಟಿಕೆಟ್ ದರ ಗಗನಕ್ಕೇರಿದೆ. ಹಾಗೂ ನೀವು ನೋಡಲೇಬೇಕು ಅಂದರೆ ನಿಮ್ಮ ಜೇಬಲ್ಲಿ ಕೊನೆ ಪಕ್ಷ ₹500 ರೂಪಾಯಿಯಾದರೂ ಇರಲೇಬೇಕು. ₹500 ರೂಪಾಯಿಗಿಂತ ಒಂದು ರೂಪಾಯಿ ಕಡಿಮೆ ನೀಡಿದರೂ ಕೂಡ ಟಿಕೆಟ್ ಸಿಗುವುದಿಲ್ಲ.

ಇನ್ನು ಬೆಂಗಳೂರಿನ ಆಚೆ ಕೂಡ ಕಥೆ ಭಿನ್ನವೇನು ಇಲ್ಲ. ಮೈಸೂರಿನಲ್ಲಿ ₹400 ರೂಪಾಯಿಯಿಂದ ಹಿಡಿದು ₹700ರವರೆಗೆ ಟಿಕೆಟ್ ಲಭ್ಯ ಇವೆ, ಹುಬ್ಬಳ್ಳಿ ಧಾರವಾಡದಲ್ಲಿ ₹340ರಿಂದ ಹಿಡಿದು ₹600 ರೂಪಾಯಿಗೆ ''ಧುರಂಧರ್ 2'' ಟಿಕೆಟ್ ಸಿಕ್ತಿದೆ. ಮಂಗಳೂರಿನಲ್ಲಿ ₹350 ರಿಂದ ₹700 ರೂಪಾಯಿ, ದಾವಣಗೆರೆಯಲ್ಲಿ ₹500, ತುಮಕೂರಿನಲ್ಲಿ ₹350ರಿಂದ ಹಿಡಿದು ₹700 ರೂಪಾಯಿಯವರೆಗೆ ಟಿಕೆಟ್ ದರಗಳನ್ನು ಫಿಕ್ಸ್ ಮಾಡಲಾಗಿದೆ.

ಒಟ್ನಲ್ಲಿ ಕನ್ನಡಿಗರು ವಿಶಾಲ ಹೃದಯದವರು. ಕಾಲ ಕಾಲಕ್ಕೆ ಈ ಮಾತನ್ನ ಸಾಬೀತು ಮಾಡಿದ ಹೆಗ್ಗಳಿಕೆ ಕೂಡ ಕನ್ನಡಿಗರದ್ದೇ. ಕನ್ನಡ ಚಿತ್ರಗಳನ್ನ ಕಡೆಗಣಿಸಿ ಹಿಂದಿ, ತೆಲುಗು, ತಮಿಳು, ಚಿತ್ರಗಳನ್ನ ಮೊದಲ ದಿನದಂದೆ ಕಣ್ತುಂಬಿಕೊಳ್ಳುವ 'ಹವ್ಯಾಸ'ವನ್ನ ಬೆಳೆಸಿಕೊಂಡಿರುವ ನಮ್ಮಲ್ಲಿನ ಅನೇಕರು, ಟಿಕೆಟ್ ರೇಟ್ ಗಗನಕ್ಕೇರಿದ್ದರೂ ಕೂಡ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ₹200 ರೂ ಏಕರೂಪ ಟಿಕೆಟ್ ದರ ಕರ್ನಾಟಕದಲ್ಲಿ ಅದ್ಯಾವ ಕಾಲಕ್ಕೆ ಜಾರಿಯಾಗುತ್ತೋ ಗೊತ್ತಿಲ್ಲ. ಅಂದ್ಹಾಗೇ ಇದು ಕೇವಲ ಟಿಕೆಟ್ ಬೆಲೆಯಷ್ಟೇ, ಪಾಪ್‌ಕಾರ್ನ್ ಮತ್ತು ಪಾರ್ಕಿಂಗ್ ಸೇರಿಸಿದರೆ ಕಥೆ ಮುಗಿದೇ ಹೋಯಿತು.

More from Filmibeat

English summary
Exploring the Dhurandhar 2 ticket price surge in Bengaluru. From premium IMAX seats to single screens, see how the 3-hour 55-minute runtime and solo release window are driving costs to an all-time high for the Ranveer Singh starrer.
Read more about: ranveer singh ticket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X