ಭಾರತದೆಲ್ಲೆಡೆ ನಾಳೆ ಧುರಂಧರ್ ಮೆರವಣಿಗೆ ; 4 ಗಂಟೆ ಸಿನಿಮಾ, 4 ನಿಮಿಷದ ಟ್ರೇಲರ್ - ರೆಡಿಯಾಗಿ ಎಂದ ರಣ್ವೀರ್ ಸಿಂಗ್

ಭಾರತೀಯ ಚಿತ್ರರಂಗದಲ್ಲಿ ಸದ್ಯ ಒಂದು ಹೆಸರಿನ ಸದ್ದು ಕೇಳಿ ಬರುತ್ತಿದೆ. ಅದುವೇ ''ಧುರಂಧರ್''. ಇನ್‌ಸ್ಟಾಗ್ರಾಮ್ ಇರಲಿ.. ಎಕ್ಸ್ ಇರಲಿ ..ಅಥವಾ ಬೇರೆ ಯಾವುದೇ ಸಾಮಾಜಿಕ ಜಾಲತಾಣ ಇರಲಿ ಎಲ್ಲೆಲ್ಲೂ ''ಧುರಂಧರ್'' ಭಜನೆ ನಡೆಯುತ್ತಿದೆ. ಚಿತ್ರದ ಕುರಿತು ಚಿಕ್ಕ ಚಿಕ್ಕ ಮಾಹಿತಿಗಾಗಿ ಹಲವು ಚಿತ್ರರಸಿಕರು ಜಾತಕ ಪಕ್ಷಿಯಂತೆ ಕಾಯುತ್ತಾ ಕುಂತಿದ್ದಾರೆ. ಇನ್ನು ದಿನಾ ಬೆಳಗಾದರೆ ಟ್ರೇಲರ್ ಬಿಡುಗಡೆ ಮಾಡಿ ಎಂಬ ಅಹವಾಲು ಸಲ್ಲಿಸುತ್ತಿರುವವರ ಸಂಖ್ಯೆ ಕಡಿಮೆ ಏನಿಲ್ಲ.

ಇದೆಲ್ಲದರಿಂದ ಸಾಮಾಜಿಕ ಜಾಲತಾಣ ''ಧುರಂಧರ್-2''ನ ಪ್ರಚಾರದ ತಾಣವಾಗಿ ಬದಲಾಗಿದೆ. ಸದ್ಯ ''ಧುರಂಧರ್-2''ಗೆ ಪ್ರಚಾರದ ಅವಶ್ಯಕತೆ ಇಲ್ಲ. ಯಾಕೆಂದರೆ ಕೆಲ ಒಮ್ಮೆ ಅತಿಯಾದ ಪ್ರಚಾರ ಕೂಡ ಮುಳುವಾಗುತ್ತೆ. ಆದರೂ ಅಭಿಮಾನಿಗಳಿಗೆ ಭಾವನೆಗೆ ಬೆಲೆ ನೀಡಿ ಬೇಸಿಕ್ ಪ್ರಚಾರವನ್ನಾದರೂ ಮಾಡಬೇಕು. ಅದು ಮಾಡದಿದ್ದಲ್ಲಿ ಅಭಿಮಾನಿಗಳು ಅದನ್ನು ಚಿತ್ರತಂಡ ತಮಗೆ ಮಾಡಿದ ಅವಮಾನ ಎಂದುಕೊಳ್ಳುವ ಸಾಧ್ಯತೆ ಇರುತ್ತೆ.

Dhurandhar 2 Trailer Hits March 7 Ranveer Singh Returns for Bollywood s 4-Hour Epic

ಹೀಗಾಗಿ ಬಿಡುಗಡೆಗೆ ಇನ್ನೇನು 11-12 ದಿನ ಇರುವ ಸಮಯದಲ್ಲಿ ಪ್ರಚಾರದ ಅಖಾಡಕ್ಕೆ ಬಂದ ''ಧುರಂಧರ್ ''ತಂಡ ಸದ್ಯ ಹಲವರ ಒತ್ತಾಸೆಯಂತೆ ಟ್ರೇಲರ್ ಬಿಡುಗಡೆ ಮಾಡುತ್ತಿದೆ. ಎಲ್ಲರೂ ಸರ್ವಸನ್ನದ್ದರಾಗಿ ನಾಳೆ ಅಂದರೆ ಮಾರ್ಚ್ 7ರಂದು ಬೆಳಿಗ್ಗೆ 11:01 ಕ್ಕೆ ಟ್ರೇಲರ್ ಬಿಡುಗಡೆಯಾಗುತ್ತಿದೆ ಎಂದು ಪ್ರಕಟಣೆಯನ್ನು ಹೊರಡಿಸಿದೆ.

ಸದ್ಯ ಈ ಸುದ್ದಿಯನ್ನು ಕೇಳಿ ಹಮ್ಜಾ ಅಲಿ ಮಜಾರಿಯ ಸೇಡಿನ ಕಥೆ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಬಹುದೊಡ್ಡ ವರ್ಗ ಹುಚ್ಚೆದ್ದಿದೆ. ತಮ್ಮ ತಮ್ಮ ಎಕ್ಸೈಟ್ಮೆಂಟ್‌ನ್ನೂ ಈ ಬಣ ಹಂಚಿಕೊಳ್ಳುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ #DhurandharTheRevenge ಮತ್ತು #AdityaDhar ಹ್ಯಾಶ್ ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕೆಲ ದಿನಗಳ ಹಿಂದೆಯಷ್ಟೇ ''ಧುರಂಧರ್-2'' ಚಿತ್ರದ ಟೀಸರ್ ನ ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ, ಅದರಲ್ಲಿ ಹೊಸತನ ಇರಲಿಲ್ಲ. ಬದಲಿಗೆ ಬಿಡುಗಡೆಯಾದ ಆ ಟೀಸರ್ ನ ಜನ ಚಿತ್ರಮಂದಿರದಲ್ಲಿಯೇ ಮೊದಲ ಭಾಗದ ಕೊನೆಯಲ್ಲಿ ನೋಡಿದ್ದರು. ''ಧುರಂಧರ್ 2'' ಟೀಸರ್ ಬಿಡುಗಡೆ ಅಂದಾಗ ಹೊಸದೇನಾದರೂ ಇರಬಹುದು ಎಂದು ನೋಡಿದ್ದ ಟೀಸರ್ ನ್ನೇ ನೋಡಿ ನಿರಾಸೆಗೊಂಡಿದ್ದರು. ಈ ಹಿನ್ನೆಲೆ ಈ ಬಾರಿ ಕೂಡ ಮತ್ತದೇ ನಿರಾಸೆ ದಕ್ಕುವುದು ಬೇಡ ಎಂದು ಹಲವರು ಹಳೆಯ ಟೀಸರ್ ನೋಡಿ ಸಾಕಾಗಿದೆ, ಆ ದೃಶ್ಯಗಳನ್ನೇ ಮತ್ತೆ ತೋರಿಸಬೇಡಿ ಎಂದು ಆದಿತ್ಯ ಧರ್ ಅವರಲ್ಲಿ ಮನವಿ ಮಾಡಲು ಶುರು ಮಾಡಿದ್ದಾರೆ.

ಇನ್ನೂ ಕಳೆದ ವರ್ಷಾಂತ್ಯಕ್ಕೆ ಬಂದ ''ಧುರಂಧರ್'' ಚಿತ್ರದ ಟ್ರೇಲರ್ 4 ನಿಮಿಷ 8 ಸೆಕೆಂಡ್ ಇತ್ತು. ನಾಳೆ (ಮಾರ್ಚ್ 7 ) ಬಿಡುಗಡೆಯಾಗಲಿರುವ ಟ್ರೇಲರ್ ಕೂಡ 4 ನಿಮಿಷ ಇದೆ ಎನ್ನುವ ಮಾತು ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ಟ್ರೇಡ್ ವಿಶ್ಲೇಷಕರು ತಾವು ಈಗಾಗಲೇ ಟ್ರೇಲರ್ ನೋಡಿದ್ದು 4 ನಿಮಿಷದ ಟ್ರೇಲರ್ ಮಾತ್ರ ಬೆಂಕಿ ಎಂದು ಬಣ್ಣಿಸಿದ್ದಾರೆ.

Dhurandhar 2 Trailer Hits March 7 Ranveer Singh Returns for Bollywood s 4-Hour Epic

ಅಂದ್ಹಾಗೇ ಈ ಹಿಂದೆ ''ಧುರಂಧರ್-2'' ಚಿತ್ರದ ರನ್ ಟೈಮ್ 3 ಗಂಟೆ 40 ನಿಮಿಷ ಎಂದು ಹೇಳಲಾಗಿತ್ತು. ಅದಕ್ಕೂ ಮೊದಲು ''ಧುರಂಧರ್'' ಚಿತ್ರಕ್ಕಿಂತ ''ಧುರಂಧರ್ 2'' ಚಿತ್ರದ ಅವಧಿ ಕಡಿಮೆ ಇರಲಿದೆ ಎಂಬ ಮಾತು ಕೇಳಿ ಬಂದಿತ್ತು.

ಆದರೆ. ''ಬಾಲಿವುಡ್ ಹಂಗಾಮ'' ವರದಿ ಪ್ರಕಾರ ''ಧುರಂಧರ್ : ದಿ ರಿವೆಂಜ್'' ಚಿತ್ರದ ಅವಧಿ ಸುಮಾರು 235 ನಿಮಿಷ ಇದೆ. ಅಂದರೆ ಹಮ್ಜಾ ಅಲಿ ಮಜಾರಿಯ ಕಥೆ ಕಣ್ತುಂಬಿಕೊಳ್ಳಬೇಕು ಅಂದರೆ ನೀವು ಚಿತ್ರಮಂದಿರದಲ್ಲಿ 3 ಗಂಟೆ 55 ನಿಮಿಷ ಕೂರಬೇಕು.

ಇನ್ನುಳಿದಂತೆ ''ಧುರಂಧರ್'' ಮೊದಲ ಭಾಗ ಕೇವಲ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ, ''ಧುರಂಧರ್ 2'' ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಜೊತೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಮಾರ್ಚ್ 19ಕ್ಕೆ ಪ್ಯಾನ್ ಇಂಡಿಯಾ ಧಗಧಗಿಸಲಿದೆ. ನಾಳೆ (ಮಾರ್ಚ್ 7) ಸೋಶಿಯಲ್ ಮೀಡಿಯಾ ಮೂಲಕ ಭಾರತದೆಲ್ಲೆಡೆ ''ಧುರಂಧರ್ 2''ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಮೆಚ್ಚುಗೆಯ ಹೂಮಳೆ ಬೀಳುತ್ತಾ ಅಥವಾ ಆಕ್ರೋಶದ ಅಲೆಗೆ ಈ ಮೆರವಣಿಗೆ ಕಾರಣವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Dhurandhar 2 Trailer Release Date Confirmed! Ranveer Singh is back for an action-packed 4-hour sequel. Catch the official trailer launch on March 7 and join the fan excitement. Don't miss out!
Read more about: ranveer singh trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X