ತುದಿಗಾಲಿನಲ್ಲಿ ನಿಂತವರಿಗೆ ಭಾರೀ ನಿರಾಸೆ ಮಾಡಿದ ಧುರಂಧರ್ ; ಮಾರ್ಚ್ 19ರಂದು ಬರಲ್ವಾ ಹಮ್ಜಾ ಅಲಿ ?

ಬಣ್ಣದ ಲೋಕ ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟುಕೊಳ್ತಾವೆ. ಹೀಗೆ ಹುಟ್ಟುಕೊಳ್ಳುವ ಸುದ್ದಿಯ ಸತ್ಯಾಸತ್ಯತೆ ತಿಳಿದುಕೊಳ್ಳುವಷ್ಟರಲ್ಲಿ ಆ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ತಲುಪಿರುತ್ತೆ. ವೈರಲ್ ಆಗಿರುತ್ತೆ. ಹೀಗೆ ವೈರಲ್ ಆದ ಸುದ್ದಿಯನ್ನೇ ಹಲವರು ನಿಜಾ ಎಂದುಕೊಳ್ಳುತ್ತಾರೆ. ಚರ್ಚೆ ಮಾಡುತ್ತಾರೆ. ಆ ನಂತರ ಅಸಲಿ ಸತ್ಯ ಅನಾವರಣವಾದಾಗ ಭ್ರಮನಿರಸನಗೊಳ್ಳುತ್ತಾರೆ. ಹಿಡಿಶಾಪ ಹಾಕುತ್ತಾರೆ. ಉದಾಹರಣೆಗೆ ''ಧುರಂಧರ್ 2'' ವಿಚಾರವನ್ನೇ ತೆಗೆದುಕೊಳ್ಳಿ.

ಹೌದು, ಇನ್ನೇನು ಕೆಲವೇ ದಿನ. ಬೆಳ್ಳಿತೆರೆಯ ಮೇಲೆ ''ಧುರಂಧರ್ 2'' ಇನ್ನೊಮ್ಮೆ ಧಗಧಗಿಸಲಿದೆ. ಮೊದಲ ಭಾಗದ ಗುಂಗಿನಲ್ಲಿರುವಾಗಲೇ ಎರಡನೇ ಭಾಗ ಬರುತ್ತಿರುವ ಹಿನ್ನೆಲೆ ಹಲವರು ''ಧುರಂಧರ್ 2'' ಚಿತ್ರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಾ ಕುಂತಿದ್ದಾರೆ.

Dhurandhar 2 Trailer No Holi Blast Team Urges Fans to Wait for Official Confirmation

ಇನ್ನು ನಿಮಗೆ ನೆನಪಿದ್ದರೆ, ಕೆಲ ದಿನದ ಹಿಂದೆಯಷ್ಟೇ ''ಧುರಂಧರ್ 2'' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಆದರೆ,ಖುಷಿ ಹೆಚ್ಚಿಸುವ ಬದಲು ಆ ಟೀಸರ್ ಹಲವರ ಕಣ್ಣನ್ನೂ ಕೆಂಪಾಗಿಸಿತ್ತು. ಯಾಕೆಂದರೆ ಮೊದಲ ಭಾಗದ ಕೊನೆಯಲ್ಲಿ ತೋರಿಸಿದ್ದ ಟೀಸರ್ ನ್ನೇ ಬಿಡುಗಡೆ ಮಾಡಿತ್ತು ಚಿತ್ರತಂಡ.

ಹೀಗಾಗಿ ನಿರಾಸೆಗೊಂಡಿದ್ದ ಹಲವರು ಹೊಸ ಟ್ರೇಲರ್ ಬಿಡುಗಡೆ ಮಾಡುವಂತೆ ಮನವಿಯನ್ನು ಮಾಡಿಕೊಳ್ಳುತ್ತಿದ್ದರು. ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಿವೆ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರವನ್ನು ಶುರುಮಾಡಿ ಎಂಬ ಸಲಹೆಯನ್ನು ಕೂಡ ಚಿತ್ರತಂಡಕ್ಕೆ ಕೊಡಲು ಶುರು ಮಾಡಿದ್ದರು.

ಇದೇ ಸಮಯದಲ್ಲಿ ಸುದ್ದಿಯೊಂದು ಉತ್ತರದಿಂದ ದಕ್ಷಿಣದವರೆಗೆ ಪಸರ್ ಆಗಿತ್ತು. ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 3ರಂದು ''ಧುರಂಧರ್ 2'' ಟ್ರೇಲರ್ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಅದು.

ಈ ಸುದ್ದಿಯನ್ನು ಕೇಳಿ ಸಹಜವಾಗಿ ಹಲವರು ರಣಕೇಕೆ ಹಾಕಿದ್ದರು. ಆಗಲೇ ಹೇಳಿದಂತೆ ಫ್ಯಾಕ್ಟ್ ಚೆಕ್‌ನ್ನೂ ಮಾಡದೇ ತಮ್ಮಷ್ಟಕ್ಕೆ ತಾವೇ ಚರ್ಚೆ ಮಾಡಲು ಶುರು ಮಾಡಿದರು.

Dhurandhar 2 Trailer No Holi Blast Team Urges Fans to Wait for Official Confirmation

ಆದರೆ ವಾಸ್ತವದಲ್ಲಿ ಹಮ್ಜಾ ಅಲಿ ಮಜಾರಿ ಅಲಿಯಾಸ್ ರಣ್ವೀರ್ ಸಿಂಗ್ ಆಗಲಿ, ಆದಿತ್ಯ ಧರ್ ಆಗಲಿ ಹೋಳಿ ಹಬ್ಬದಂದು ಟ್ರೇಲರ್ ಬಿಡುಗಡೆಯಾಗುತ್ತಿದೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಪ್ರಕಟಣೆಯನ್ನು ಕೂಡ ಹೊರಡಿಸಿರಲಿಲ್ಲ.

ಬದಲಿಗೆ ತಮ್ಮನ್ನು ತಾವು ಟ್ರೇಡ್ ವಿಶ್ಲೇಷಕರು ಎಂದು ಹೇಳಿಕೊಳ್ಳುವ. ಮುಂಬೈನ ಕೆಲ ಬಾಲಿವುಡ್ ಪಂಡಿತರು ದಾರಿ ತಪ್ಪಿಸುವ ಈ ಕೆಲಸವನ್ನು ಮಾಡಿದ್ದರು. ಈಗ ತಮ್ಮ ಬಣ ಮಾಡಿದ ಈ ತಪ್ಪನ್ನು ಬಾಲಿವುಡ್‌ನ ಹಿರಿಯ ವಿಶ್ಲೇಷಕ ತರಣ್ ಆದರ್ಶ್ ಸರಿ ಮಾಡುವ ಪ್ರಯತ್ನ ಮಾಡಿದ್ದಾರೆ. ''ಧುರಂಧರ್ 2'' ಟ್ರೇಲರ್ ಹೋಳಿ ಹಬ್ಬದ ಪ್ರಯುಕ್ತ ನಾಳೆ (ಮಾರ್ಚ್ 3) ಬಿಡುಗಡೆಯಾಗುತ್ತಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ತರಣ್ ಆದರ್ಶ್ ''ಧುರಂಧರ್ 2'' ಚಿತ್ರದ ಟ್ರೇಲರ್ ಮಾರ್ಚ್ 3ರಂದು ಬಿಡುಗಡೆಯಾಗುತ್ತೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ಧಾರೆ. ನಾನು ಈಗಷ್ಟೇ ಜೀಯೋ ಸ್ಟುಡಿಯೋ ಜೊತೆ ಮಾತನಾಡಿದ್ದು ಅವರು ಕೂಡ ಈ ಸುದ್ದಿ ತಳ್ಳಿ ಹಾಕಿದ್ಧಾರೆ, ಅಧಿಕೃತವಾದ ಮಾಹಿತಿಯನ್ನು ಅವರೇ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

ತರಣ್ ಆದರ್ಶ್ ಅವರ ಈ ಟ್ವೀಟ್ ನೋಡಿ ಸಂಭ್ರಮದ ಅಲೆಯಲ್ಲಿದ್ದ ಹಲವರಿಗೆ ನಿರಾಸೆಯಾಗಿದೆ. ಹೀಗಾಗಿಯೇ ತಮ್ಮ ಅಸಮಾಧಾನ ಮತ್ತು ಆಕ್ರೋಶವನ್ನು ಹೊರ ಹಾಕುತ್ತಿರುವ ಹಲವರು ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗುತ್ತಾ..? ಇಲ್ವಾ..? ಎನ್ನುವುದನ್ನು ನಿಖರವಾಗಿ ಹೇಳಿ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಎದುರುಗಡೆ ''ಟಾಕ್ಸಿಕ್'' ಸಿನಿಮಾ ಬರುತ್ತಿದೆ ಆದರೂ ಕೂಡ ಪ್ರಚಾರಕ್ಕೆ ಇನ್ನೂ ಚಿತ್ರತಂಡ ಚಾಲನೆ ಕೊಡುತ್ತಿಲ್ಲ, ಹೀಗಾದರೆ ಕಷ್ಟ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ''ಧುರಂಧರ್ 2'' ಟ್ರೇಲರ್ ನಿಜಕ್ಕೂ ಬಿಡುಗಡೆಯಾಗುವುದು ಯಾವಾಗ ..? ಉತ್ತರ ಜೀಯೋ ಸ್ಟುಡಿಯೋದವರಿಗೆ ಗೊತ್ತು.

More from Filmibeat

English summary
The wait for Dhurandhar 2 just got longer! Makers shut down Holi release rumors and issue a fresh statement to fans. Don't fall for fake dates—check out the official stance from the team and stay tuned for the real countdown
Read more about: ranveer singh trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X