Dhurandhar 2 vs Toxic: 'ಧುರಂಧರ್- 2' ರಿಲೀಸ್ ಡೇಟ್ ಬದಲಾಗಲ್ಲ; 'ಟಾಕ್ಸಿಕ್' ಎದುರು ಫೈಟ್ ತಪ್ಪಲ್ಲ

ಚಿತ್ರರಂಗ ಅಂದಮೇಲೆ ಅಲ್ಲಿ ಪೈಪೋಟಿ ಇರುವುದು ಸಹಜ. ಅದರಲ್ಲೂ ದೊಡ್ಡ ಸಿನಿಮಾಗಳು ಮುಖಾಮುಖಿಯಾದಾಗ ಆ ಕ್ರೇಜ್ ಬೇರೆಯದ್ದೇ ಮಟ್ಟದಲ್ಲಿ ಇರುತ್ತದೆ. ಸದ್ಯ ಗಾಂಧಿನಗರದಿಂದ ಹಿಡಿದು ಬಾಲಿವುಡ್‌ವರೆಗೆ ಒಂದೇ ಚರ್ಚೆ ನಡೆಯುತ್ತಿದೆ. 'ಧುರಂಧರ್-2' ಅಥವಾ 'ಟಾಕ್ಸಿಕ್' ಯಾವ ಸಿನಿಮಾ ಗೆಲ್ಲಬಹುದು? ಯಾರ ಅಬ್ಬರ ಜೋರಾಗಿರಲಿದೆ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಫೈಟ್ ಕೇವಲ ಎರಡು ಸಿನಿಮಾಗಳ ನಡುವೆ ಮಾತ್ರವಲ್ಲ, ಇಬ್ಬರು ಸ್ಟಾರ್ ನಟರ ವರ್ಚಸ್ಸಿನ ನಡುವೆ ನಡೆಯಲಿದೆ. ಚಿತ್ರಮಂದಿರಗಳ ಹಂಚಿಕೆಯಿಂದ ಹಿಡಿದು ಕಲೆಕ್ಷನ್ ವಿಚಾರದವರೆಗೆ ಎಲ್ಲವೂ ಈಗ ಕುತೂಹಲದ ಕೇಂದ್ರಬಿಂದುವಾಗಿದೆ.

Dhurandhar 2 vs Toxic Ranveer Singh and Yash Set for the Biggest Box Office Clash

ಸಾಮಾನ್ಯವಾಗಿ ದೊಡ್ಡ ಚಿತ್ರಗಳು ಬಿಡುಗಡೆಯಾಗುವಾಗ ಬೇರೆ ಸಿನಿಮಾಗಳು ಹಿಂದೆ ಸರಿಯುತ್ತವೆ. ಆದರೆ ಇಲ್ಲೊಬ್ಬರು ಮಾತ್ರ ಸವಾಲು ಸ್ವೀಕರಿಸಲು ರೆಡಿಯಾಗಿದ್ದಾರೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಈಗ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ಬೆಳವಣಿಗೆಯಿಂದಾಗಿ ಸಿನಿಮಾ ಪ್ರೇಮಿಗಳಿಗೆ ಹಬ್ಬದೂಟ ಸಿಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಧುರಂಧರ್- 2 ತಡವಾಗಲ್ಲ

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಧುರಂಧರ್ 2' ಈಗ ಸುದ್ದಿಯಲ್ಲಿದೆ. ಈ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಕಳೆದ ಕೆಲವು ದಿನಗಳಿಂದ ಹತ್ತಾರು ವದಂತಿಗಳು ಹಬ್ಬಿದ್ದವು. ಸಿನಿಮಾ ತಂಡ ತನ್ನ ನಿರ್ಧಾರವನ್ನು ಬದಲಿಸಬಹುದು ಎಂದು ಹಲವರು ಊಹಿಸಿದ್ದರು. ಆದರೆ ಈಗ ಚಿತ್ರತಂಡ ಎಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದೆ.

Dhurandhar 2 vs Toxic Ranveer Singh and Yash Set for the Biggest Box Office Clash

ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಅಂದುಕೊಂಡ ಸಮಯಕ್ಕೆ ಸಿನಿಮಾ ತೆರೆಗೆ ತರಲು ಪಟ್ಟು ಹಿಡಿದಿದ್ದಾರೆ. ಈ ಧೈರ್ಯದ ಹಿಂದೆ ಸಿನಿಮಾದ ಕಥೆ ಮತ್ತು ಮೇಕಿಂಗ್ ಮೇಲಿರುವ ನಂಬಿಕೆ ಎದ್ದು ಕಾಣುತ್ತಿದೆ. 'ಧುರಂಧರ್ 2' ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು, ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಸಿದ್ಧವಾಗಿದೆ.

ಟಾಕ್ಸಿಕ್ VS ರಣ್‌ವೀರ್ ಸಿಂಗ್

ರಣ್‌ವೀರ್ ಸಿಂಗ್ ನಟನೆಯ'ಧುರಂಧರ್ 2' ಸಿನಿಮಾ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಎದುರು ಅಬ್ಬರಿಸಲಿದೆ. ಎರಡು ಸಿನಿಮಾಗಳು ನಡುವೆ ದಶಕದ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ.

ಯಶ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರೇಜ್ ಇದೆ. ಅವರ ಸಿನಿಮಾ ಬರುತ್ತದೆ ಎಂದರೆ ಅಲ್ಲಿ ಸುನಾಮಿ ಫಿಕ್ಸ್. ಇತ್ತ ರಣವೀರ್ ಸಿಂಗ್ ಕೂಡ ಬಾಲಿವುಡ್‌ನ ಸ್ಟಾರ್ ಎನಿಸಿಕೊಂಡಿದ್ದಾರೆ. ಇಬ್ಬರು ಘಟಾನುಘಟಿಗಳ ಚಿತ್ರಗಳು ಒಂದೇ ದಿನ ಮುಖಾಮುಖಿಯಾಗುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ. ಇದರಿಂದಾಗಿ ಚಿತ್ರಮಂದಿರಗಳ ಹಂಚಿಕೆಯಲ್ಲಿ ಸ್ಪರ್ಧೆ ಏರ್ಪಡುವುದು ಪಕ್ಕಾ ಆಗಿದೆ.

ಯಾರು ಗೆಲ್ತಾರೆ?

ದೊಡ್ಡ ಸಿನಿಮಾಗಳು ತೆರೆಗೆ ಅಪ್ಪಳಿಸಿದಾಗ ಪ್ರೇಕ್ಷಕರಿಗೆ ಆಯ್ಕೆಗಳು ಹೆಚ್ಚಿರುತ್ತವೆ. ಆದರೆ ಇದು ನಿರ್ಮಾಪಕರಿಗೆ ಸವಾಲಿನ ಕೆಲಸ. ರಣ್‌ವೀರ್ ಸಿಂಗ್ ಸಿನಿಮಾ ತಂಡವು ಬಿಡುಗಡೆ ದಿನಾಂಕವನ್ನು ಬದಲಾಯಿಸದೆ ಇರಲು ನಿರ್ಧರಿಸಿರುವುದು ಒಂದು ರಿಸ್ಕ್ ಎನ್ನಬಹುದು. ಏಕೆಂದರೆ ಎದುರಾಳಿಯಾಗಿ ನಿಂತಿರುವುದು ಕನ್ನಡದ 'ಟಾಕ್ಸಿಕ್'.

ಒಟ್ಟಿನಲ್ಲಿ ಬಾಕ್ಸಾಫೀಸ್‌ನಲ್ಲಿ ಭಾರೀ ಫೈಟ್ ನಡೆಯುವುದು ಗ್ಯಾರಂಟಿ ಎನ್ನುವಂತಾಗಿದೆ. ಈ ಕದನದಲ್ಲಿ ಗೆಲುವು ಯಾರ ಪಾಲಾಗುತ್ತದೆ? ಯಾರು ಬಾಕ್ಸ್ ಆಫೀಸ್ ಸುಲ್ತಾನನಾಗಿ ಹೊರಹೊಮ್ಮುತ್ತಾರೆ ಎಂಬುದು ಎಲ್ಲರ ಪ್ರಶ್ನೆ.

More from Filmibeat

English summary
No Retreat; Dhurandhar 2 makers confirm release date despite mega clash with Yash's Toxic…
Read more about: toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X