ಹತ್ತು ವರ್ಷಗಳಿಂದ ಮನೆ ಕೆಲಸದವಳಿಗೆ ಲೈಂ*ಗಿಕ ಕಿರುಕುಳ ; ಧುರಂಧರ್ ನಟ ಅರೆಸ್ಟ್

ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂ*ಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಹೆಣ್ಣಿಗೆ ಕಿರುಕುಳ ನೀಡುವವರ ಸಂಖ್ಯೆ ಹೆಚ್ಚಿದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಮೋಸ ಮಾಡುವ ವರ್ಗ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರರಂಗದಲ್ಲಿ ಆಗಾಗ ಈ ಲವ್ ಸೆ*ಕ್ಸ್ ಮತ್ತು ಧೋಖಾದ ಕಥೆಗಳು ಮುನ್ನೆಲೆಗೆ ಬರುತ್ತವೆ. ಚರ್ಚೆಗೆ ನಾಂದಿಯನ್ನು ಹಾಡುತ್ತವೆ. ನದೀಮ್ ಖಾನ್ ಅವರ ಪ್ರಕರಣ ಇದಕ್ಕೆ ಮತ್ತೊಂದು ಉದಾಹರಣೆ. ಹೌದು, ನದೀಮ್ ಖಾನ್.. ಬಾಲಿವುಡ್‌ನ ಪೋಷಕ ಕಲಾವಿದ.

Dhurandhar Actor Nadeem Khan Behind Bars Betrayal After Broken Marriage Promise

ಅಮಿತಾಬ್ ಬಚ್ಚನ್.. ಅಸ್ರಾನಿ.. ಸಂಜಯ್ ಮಿಶ್ರಾ.. ಆದಿಲ್ ಹುಸೇನ್ ಅವರ ಜೊತೆ ಕೆಲಸ ಮಾಡಿರುವ ನದೀಮ್ ಖಾನ್, ''ಮುಖ್‌ಬೀರ್''.. ''ವಧ್''.. ''ಮೀಮಿ''.. ''ಧಡಕ್''.. ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ''Mrs ಸೀರಿಯಲ್ ಕಿಲ್ಲರ್'' ಅಂತಹ ವೆಬ್ ಸರಣಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇಷ್ಟೆಲ್ಲ ಯಾಕೆ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದು ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ''ಧುರಂಧರ್'' ಚಿತ್ರದಲ್ಲಿಯೂ ಕೂಡ ನದೀಮ್ ಖಾನ್ ಅಭಿನಯಿಸಿದ್ದಾರೆ. ಅಕ್ಷಯ್ ಖನ್ನಾ ಅಂದರೆ ರೆಹಮಾನ್ ಡಕಾಯಿತ್ ಮನೆಯ ಬಾಣಸಿಗ ಅಕ್ಲಾಕ್ ಪಾತ್ರವನ್ನು ಕೂಡ ಈ ನದೀಮ್ ನಿರ್ವಹಿಸಿದ್ದಾರೆ.

ಇಂಥಾ ನದೀಮ್ ವಿರುದ್ಧ ಸದ್ಯ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು ಪೊಲೀಸರು ನದೀಮ್ ಅವರನ್ನು ಬಂಧಿಸಿದ್ದಾರೆ. ನದೀಮ್ ಖಾನ್ ವಿರುದ್ಧ ಅವರ 41 ವರ್ಷದ ಮನೆ ಕೆಲಸದವಳು ದೂರನ್ನು ಸಲ್ಲಿಸಿದ್ದು, ಈ ದೂರಿನ ಆಧಾರದ ಮೇರೆಗೆ ನದೀಮ್ ಖಾನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿ ಕಂಬಿ ಹಿಂದೆ ಸದ್ಯ ಕಳುಹಿಸಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ಕಳೆದ 10 ವರ್ಷಗಳಿಂದ ಲೈಂ*ಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪವನ್ನು ಮಾಡಿರುವ ಮಹಿಳೆ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರೀತಿಯ ಹೆಸರಿನಲ್ಲಿ ನನಗೆ ಮೋಸ ಆಗಿದೆ ಎಂದು ದೂರಿದ್ದಾರೆ.

Dhurandhar Actor Nadeem Khan Behind Bars Betrayal After Broken Marriage Promise

2015ರಲ್ಲಿ ನದೀಮ್ ಖಾನ್ ಅವರ ಪರಿಚಯವಾಯ್ತು, ಅದಕ್ಕೂ ಮುನ್ನ ಹಲವಾರು ನಟರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಿ ತಮ್ಮ ದೂರಿನಲ್ಲಿ ಹೇಳಿರುವ ಮಹಿಳೆ ಮದುವೆಯ ಆಮಿಷವೊಡ್ಡಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನನ್ನ ಮೇಲೆ ಅ*ತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ. ನಾನು ಅವನನ್ನು ಪೂರ್ಣವಾಗಿ ನಂಬಿದ್ದೆ. ಮದುವೆಯಾಗುತ್ತಾನೆಂಬ ಭರವಸೆಯಲ್ಲೇ ಈ ಸಂಬಂಧವನ್ನು ಮುಂದುವರೆಸಿದ್ದೆ ಎಂದಿರುವ ಮಹಿಳೆ ಪ್ರತಿ ಬಾರಿಯೂ ಮದುವೆಯ ವಿಷಯ ಪ್ರಸ್ತಾಪವಾದಾಗ, ಕುಂಟು ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದರು. ಇತ್ತೀಚೆಗೆ ನೇರವಾಗಿಯೇ ಮದುವೆಯಾಗಲು ನಿರಾಕರಿಸಿದರು ಎಂದು ದೂರಿದ್ದಾರೆ.

ವರ್ಸೋವಾದಲ್ಲಿರುವ ತಮ್ಮ ನಿವಾಸದಲ್ಲಿ ಅಲ್ಲದೇ ಮಹಿಳೆಯ ನಿವಾಸದಲ್ಲಿ ಕೂಡ ನದೀಮ್ ಖಾನ್ ಲೈಂ*ಗಿಕ ಕಿರುಕುಳ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಸದ್ಯ ಮಹಿಳೆಯ ವಿವರವಾದ ಹೇಳಿಕೆಯನ್ನು ದಾಖಲಿಸಿಕೊಂಡು ಮುಂಬೈನ ಮಾಲ್ವಾನಿ ಪೊಲೀಸರು ನದೀಮ್ ಖಾನ್ ಅವರನ್ನು ಬಂಧಿಸಿದ್ದಾರೆ. ತನಿಖೆ ಸದ್ಯ ಮುಂದುವರೆದಿದ್ದು, ಅಧಿಕಾರಿಗಳು ಹೆಚ್ಚುವರಿ ಹೇಳಿಕೆಗಳನ್ನು ದಾಖಲಿಸುವ ಮತ್ತು ಆರೋಪಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.

ಇನ್ನುಳಿದಂತೆ ''ಧುರಂಧರ್'' ಚಿತ್ರದಲ್ಲಿ ಚಿಕ್ಕ ಪಾತ್ರವಾದರೂ ಕೂಡ ನದೀಮ್ ಖಾನ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮುಂಬರುವ ದಿನಗಳಲ್ಲಿ ಹೆಚ್ಚೆಚ್ಚು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಹೀಗಿರುವಾಗ ಮಹಿಳೆ ದೂರು ದಾಖಲಿಸಿದ್ದು ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ, ನದೀಮ್ ಖಾನ್ ಅವರ ಭವಿಷ್ಯ ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
A shocking betrayal? Actor Nadeem Khan is in custody after allegedly exploiting a woman under the guise of a marriage promise. Get the latest updates on this developing story.
Read more about: harassment arrest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X