ಯುವತಿಗೆ ಕಿರುಕುಳ ; 'ಧುರಂಧರ್' ಚಿತ್ರತಂಡದ ಸದಸ್ಯನ ವಿರುದ್ಧ ಎಫ್‌ಐಆರ್- ಅಂದು ನಡೆದಿದ್ದೇನು ?

ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ. ಬದಲಾದ ಈ ಕಾಲದಲ್ಲಿ ಮಹಿಳಾ ಸಬಲೀಕರಣದ ಕುರಿತು ಭಾಷಣಗಳನ್ನು ಮಾಡಲಾಗುತ್ತೆ ಆದರೂ, ವಾಸ್ತವದಲ್ಲಿ ಮಹಿಳೆಯ ಸಾಧನೆ.. ಶ್ರಮ ಮತ್ತು ಪ್ರತಿಭೆಗಿಂತ ಭೋಗದ ವಸ್ತು ಎಂದುಕೊಂಡ ವಿಕೃತ ಮನಸ್ಥಿತಿಗಳು ಇಂದಿಗೂ ಕೂಡ ಇವೆ.

ಕೇವಲ ಚಿತ್ರರಂಗ ಮಾತ್ರ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾನಸಿಕ ನೆಮ್ಮದಿ ಹಾಳು ಮಾಡಲು ಈ ಕಾ*ಮಾಂಧರು ಇದ್ದೇ ಇರುತ್ತಾರೆ. ಆದರೆ ಚಿತ್ರರಂಗದಲ್ಲಿ ಈ ಸಂಖ್ಯೆ ತುಸು ಹೆಚ್ಚೇ ಇದೆ. ಇದಕ್ಕೆ ಮತ್ತೊಂದು ಪುರಾವೆ ಎಂಬಂತೆ ಧುರಂಧರ್ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್ ಜೋಹ್ರಾಯ್, ವಿರುದ್ಧ ಚಿತ್ರತಂಡದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಲೈಂಗಿಕ ಕಿರುಕುಳದ ಆರೋಪದಡಿ ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

dhurandhar-production-designer-saini-s-johray-booked-over-harassment-charges-later-granted-bail

ಇಂಡಿಯಾ ಟುಡೇ ವರದಿಯ ಪ್ರಕಾರ ಸೆಕ್ಟರ್-17 ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಪ್ರಾಥಮಿಕ ತನಿಖೆ ನಡೆಸಿದ ನಂತರ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ನ ಕಲಂ 74, 79, 123, ಮತ್ತು 126(2) ಅಡಿಯಲ್ಲಿ ಜೋಹ್ರಾಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರುದಾರ ಯುವತಿಯ ಪ್ರಕಾರ, ಜೋಹ್ರಾಯ್ ಚಂಡೀಗಢದ ತಾಜ್ ಹೋಟೆಲ್ ಕೋಣೆಗೆ ಅವರನ್ನು ಕರೆಸಿಕೊಂಡಿದ್ದರು. ಅಲ್ಲಿ ಲೈಂ*ಗಿಕ ಕಿರುಕುಳ ನೀಡಿದ್ದಲ್ಲದೇ ದೈಹಿಕವಾಗಿ ಕೂಡ ಹಲ್ಲೆ ಮಾಡಿದ್ದಾರೆ. ಎಣ್ಣೆಯನ್ನು ಬಲವಂತವಾಗಿ ಕುಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ

24 ವರ್ಷದ ಸಂತ್ರಸ್ತ ಯುವತಿ ನೀಡಿದ ದೂರಿನ ಪ್ರಕಾರ, ಸರ್ಕಾರಿ ಕಾಲೇಜ್‌ನಲ್ಲಿ ಇವರು ಓದುತ್ತಿದ್ದರು. ಈ ಸಮಯದಲ್ಲಿ ಕಾಲೇಜ್‌ನ ಅಧ್ಯಾಪಕರು ಯುವತಿಯ ಬಯೋಡೇಟಾವನ್ನು ''ಧುರಂಧರ್'' ತಂಡಕ್ಕೆ ಕಳಿಸಿದ್ದರು. 2025ರ ಸೆಪ್ಟೆಂಬರ್ 2ರಂದು ಯುವತಿಯನ್ನು ಸಹಾಯಕ ಕಲಾ ನಿರ್ದೇಶಕಿಯಾಗಿ ನೇಮಕ ಮಾಡಲಾಯಿತು. ಸೆಟ್‌ನಲ್ಲಿ ಜೋಹ್ರಾಯ್ ತಮ್ಮನ್ನು ಆಕೆಯ ಮಾರ್ಗದರ್ಶಕ ಎಂದು ಪರಿಚಯಿಸಿಕೊಂಡು ವಿಶ್ವಾಸವನ್ನು ಸಂಪಾದಿಸಿದ್ದರು.

ಕೆಲಸದ ವಿಚಾರವನ್ನು ಚರ್ಚೆ ಮಾಡಲು ಸೆಕ್ಟರ್ 17ರ ತಾಜ್ ಹೋಟೆಲ್‌ನ ಕೋಣೆಗೆ ಜೋಹ್ರಾಯ್ ಕರೆದಿದ್ದರು. ಈ ಭೇಟಿಯ ಬಗ್ಗೆ ಯಾರಿಗೂ ಹೇಳದಿರುವಂತೆ, ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂದು ಯುವತಿಗೆ ಜೋಹ್ರಾಯ್ ಹೇಳಿದ್ದರು.

dhurandhar-production-designer-saini-s-johray-booked-over-harassment-charges-later-granted-bail

ಸೆಪ್ಟೆಂಬರ್ 10, 2025 ರಂದು ರಾತ್ರಿ 8:30ರ ಸುಮಾರಿಗೆ, ಜೋಹ್ರಾಯ್ ತಮ್ಮ ಮೇಲೆ ಮದ್ಯಪಾನ ಮಾಡುವಂತೆ ಒತ್ತಡ ಹೇರಿದರು ಎಂದು ಯುವತಿ ತಮ್ಮ ಹೇಳಿಕೆಯಲ್ಲಿ ಹೇಳಿದ್ದು, ವೈನ್ ಮತ್ತು ರಮ್ ಮಿಶ್ರಿತ ಪಾನೀಯವನ್ನು ಸಿದ್ಧಪಡಿಸಿ, ಅದನ್ನು ಕುಡಿಯಲು ಬಲವಂತಪಡಿಸಿದರು, ಹಾಗೂ ಬಲವಂತವಾಗಿ ತಮ್ಮೆಡೆಗೆ ಎಳೆದುಕೊಂಡು ಅನಗತ್ಯವಾಗಿ ವರ್ತಿಸಿದರು ಎಂದು ತಿಳಿಸಿದ್ದಾರೆ.

ತೀವ್ರ ತಲೆ ಸುತ್ತು ಬಂದು, ಕೋಣೆಯಿಂದ ಹೊರ ಹೋಗಲು ಕೇಳಿಕೊಂಡರೂ, ಹೊರಬಿಡಲಿಲ್ಲ ಎಂದು ಹೇಳಿರುವ ಯುವತಿ ಬಾತ್‌ ರೂಮ್‌ನಲ್ಲಿ ವಾಂತಿ ಮಾಡುತ್ತಿದ್ದಾಗ ಅಲ್ಲಿಗೆ ಬಂದು ಅಸಭ್ಯವಾಗಿ ಜೋಹ್ರಾಯ್ ಸ್ಪರ್ಶಿಸಿದ್ದಾರೆ ಎಂದು ಹೇಳಿದ್ದಾರೆ. ಬಲವಂತವಾಗಿ ಹಾಸಿಗೆಯ ಮೇಲೆ ತಳ್ಳಿ, ರಾತ್ರಿ ಇಡೀ ಹೋಟೆಲ್ ಕೊಠಡಿಯಲ್ಲಿ ಉಳಿಯುವಂತೆ ಒತ್ತಾಯಿಸಿದರು ಎಂದು ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಜೋಹ್ರಾಯ್ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಒಬೆರಾಯ್ ಸ್ಪ್ರಿಂಗ್ಸ್‌ನ ನಿವಾಸಿ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಆ ನಂತರ ಜಾಮೀನು ಪಡೆದು ಜೋಹ್ರಾಯ್ ಬಿಡುಗಡೆ ಆಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ತಮ್ಮ ಮೇಲೀನ ಈ ಆರೋಪಕ್ಕೆ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್ ಜೋಹ್ರಾಯ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
An FIR has been registered against Dhurandhar crew member Saini S Johray following serious misconduct and harassment complaints. The accused was later granted bail.
Read more about: harrasment Dhurandhar 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X