100 ಕೋಟಿ: ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದ ಯುವ ಗಾಯಕಿ

ಯುವಕರ ಪ್ರತಿಭಾ ಪ್ರದರ್ಶನಕ್ಕೆ ಹೊಸ ವೇದಿಕೆ ಆಗಿದೆ ಯೂಟ್ಯೂಬ್. ಪ್ರತಿ ದಿನ ಲಕ್ಷಾಂತರ ಹೊಸ ವಿಡಿಯೋಗಳು ಯೂಟ್ಯೂಬ್‌ ನಲ್ಲಿ ಅಪ್‌ಲೋಡ್ ಆಗುತ್ತವೆ. ಆದರೆ ಕೆಲವಷ್ಟೆ ವೀಕ್ಷಕರ ಗಮನ ಸೆಳೆಯುತ್ತವೆ.

ಕೋಟ್ಯಂತರ ಪ್ರತಿಭಾನ್ವಿತ ಯುವಕರು ಯೂಟ್ಯೂಬ್ ಅನ್ನು ವೃತ್ತಿಯನ್ನಾಗಿ ಸ್ವೀಕರಿಸುವ ಈ ಘಟ್ಟದಲ್ಲಿ ಯೂಟ್ಯೂಬ್‌ನಲ್ಲಿ ಹಿಂದೆಂದಿಗಿಂತಲೂ ಸ್ಪರ್ಧಾತ್ಮಕತೆ ಇದೆ. ಜೊತೆಗೆ 'ಕಂಟೆಂಟ್' ಸಹ ಅತಿಯಾಗಿಯೇ ಇದೆ.

ವೀಕ್ಷಕನಿಗೆ ಯಾವುದು ನೋಡುವುದು, ಯಾವುದು ಬಿಡುವುದು ಎಂಬ ಗೊಂದಲ ಹುಟ್ಟುವಷ್ಟು ವಿಡಿಯೋಗಳು ಯೂಟ್ಯೂಬ್‌ನಲ್ಲಿವೆ. ಇಂಥಹಾ ಸಮಯದಲ್ಲಿ ಯೂಟ್ಯೂಬ್ ನಲ್ಲಿ ವಿಡಿಯೋ ಒಂದನ್ನು ವೈರಲ್ ಮಾಡುವುದು ಹಾಗೂ ಅದು ಹೊಸ ದಾಖಲೆಗಳನ್ನು ಬರೆಯುವುದು ಸುಲಭದ ಮಾತಲ್ಲ.

ಧ್ವನಿ ಬಾನುಶಾಲಿ ಗಾಯಕಿಯ ಹಾಡು

ಧ್ವನಿ ಬಾನುಶಾಲಿ ಗಾಯಕಿಯ ಹಾಡು

ಇಂಥಹುದರಲ್ಲಿ ಯುವ ಗಾಯಕಿ ಧ್ವನಿ ಭನುಶಾಲಿ ಎಂಬುವರ ವಿಡಿಯೋ ಸಖತ್ ವೈರಲ್ ಆಗಿದೆ. ಈ ಹಿಂದಿನ ಎಷ್ಟೋ ದಾಖಲೆಗಳನ್ನು ಪುಡಿ ಮಾಡಿ ಹೊಸ ದಾಖಲೆಗಳನ್ನು ಬರೆಯುವತ್ತ ಮುಂದಡಿ ಇಡುತ್ತಿದೆ.

ದಾಖಲೆ ಬರೆದ ವಾಸ್ತೆ ಹಾಡು

ದಾಖಲೆ ಬರೆದ ವಾಸ್ತೆ ಹಾಡು

ಧ್ವನಿ ಅವರ ಹಾಡು 'ವಾಸ್ತೆ' ಹಾಡು ಯೂಟ್ಯೂಬ್‌ ನಲ್ಲಿ ಭಾರಿ ದೊಡ್ಡ ದಾಖಲೆ ಬರೆದಿದೆ. ಯೂಟ್ಯೂಬ್‌ನಲ್ಲಿ ಈ ಹಾಡಿನ ವಿಡಿಯೋವನ್ನು ಟಿ-ಸೀರೀಸ್ ಚಾನೆಲ್ ಒಂದರಲ್ಲೇ 100 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದು ಸಾಮಾನ್ಯವಾದ ದಾಖಲೆಯಲ್ಲ.

ಕೆಲವೇ ತಿಂಗಳಲ್ಲಿ 100 ಕೋಟಿ ವೀವ್ಸ್

ಕೆಲವೇ ತಿಂಗಳಲ್ಲಿ 100 ಕೋಟಿ ವೀವ್ಸ್

ಈ ಹಿಂದೆ ಸಹ ಕೆಲವು ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳ ವಿಡಿಯೋ 100 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಆದರೆ ವಾಸ್ತೆ ಯಷ್ಟು ಕಡಿಮೆ ಅವಧಿಯಲ್ಲಿ ಯಾವ ವಿಡಿಯೋ ಸಹ 100 ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿಲ್ಲ. ಹದಿನೇಳು ತಿಂಗಳಲ್ಲಿ ಈ ವಿಡಿಯೋ 100 ಕೋಟಿ ವೀವ್ಸ್ ಗಳಿಸಿದೆ.

Recommended Video

ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada
ಹಳೆ ಆಲ್ಬಂ ಹಾಡು ನೆನಪಿಸುವಂತಿದೆ

ಹಳೆ ಆಲ್ಬಂ ಹಾಡು ನೆನಪಿಸುವಂತಿದೆ

ಹಾಡು ಹಾಡಿರುವ ಧ್ವನಿ ವಿಡಿಯೋದಲ್ಲಿ ನಟಿಸಿದ್ದಾರೆ ಸಹ. ಕಾಲೇಜು ಕತೆಯುಳ್ಳ ಈ ವಿಡಿಯೋ ಹಾಡು, 90ರ ದಶಕದ ಮೃದು ಹಿಂದಿ ಆಲ್ಬಂ ಹಾಡುಗಳನ್ನು ನೆನಪಿಸುವಂತಿದೆ. ಹಾಗಾಗಿಯೇ ಈ ಹಾಡು ಇಷ್ಟೋಂದು ಹಿಟ್ ಆಗಿದೆ.

More from Filmibeat

English summary
Singer Dhvani Bhanushali's vaaste video created new record in YouTube. It became first video to hit 100 crore views in less time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X