For Quick Alerts
  ALLOW NOTIFICATIONS  
  For Daily Alerts

  "ನಟಿಯರ ಬಾತ್‌ರೂಮ್ ವಿಡಿಯೋ ನೋಡಿ ಭಯ ಬಿದ್ದಿದ್ದೆ": ದಿಯಾ ಮಿರ್ಜಾ

  |

  ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳ ಖಾಸಗಿ ಫೋಟೊಗಳು, ವಿಡಿಯೋಗಳು ಲೀಕ್ ಆಗೋದು ಕಾಮನ್ ಆಗಿಬಿಟ್ಟಿದೆ. ಇದು ಇಂಟರ್‌ನೆಟ್ ಜಮಾನ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಪ್ರಯೋಜನವಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಲಿವುಡ್ ನಟಿ ದಿಯಾ ಮಿರ್ಜಾ, ನಟಿಯರ ಖಾಸಗಿ ವಿಡಿಯೋ ಲೀಕ್ ಆಗುವುದು ನೋಡಿ ಭಯವಾಗಿತ್ತು. ಆ ನಂತರ ಯಾವುದೇ ಹೋಟೆಲ್‌ಗೆ ಹೋದರೂ ಬಹಳ ಎಚ್ಚರ ವಹಿಸುತ್ತೇನೆ ಎಂದಿದ್ದಾರೆ.

  ಇತ್ತೀಚೆಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹೋಟೆಲ್ ರೂಮ್‌ ವಿಡಿಯೋವೊಂದು ಕೂಡ ಲೀಕ್ ಆಗಿತ್ತು. ಈ ಹಿಂದೆ ಕೂಡ ಸಾಕಷ್ಟು ನಟ ನಟಿಯರ ಖಾಸಗಿ ವಿಡಿಯೋಗಳು ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರು ಸೆಲೆಬ್ರೆಟಿಗಳು ಆಗಿರುವುದರಿಂದ ಗೊತ್ತಾಗುತ್ತದೆ. ಆದರೆ ಸಾಮಾನ್ಯ ಜನರ ಕಥೆ ಊಹಿಸೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ಹೋಟೆಲ್‌ಗಳಲ್ಲಿ ಸೀಕ್ರೆಟ್ ಕ್ಯಾಮರಾಗಳನ್ನು ಇಟ್ಟು ಖಾಸಗಿ ವಿಡಿಯೋಗಳನ್ನು ಶೂಟ್ ಮಾಡಿ ಅದನ್ನು ಅವರಿಗೆ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಡುವ ಘಟನೆಗಳು ನಡೀತಿದೆ. ಇದೇ ವಿಚಾರವಾಗಿ ನಟಿ ದಿಯಾ ಮಿರ್ಜಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

  ಮದುವೆಗೂ ಮುಂಚೆ ಗರ್ಭಿಣಿ: ಪ್ರಶ್ನೆ ಮಾಡಿದವಗೆ ಪ್ರತ್ಯುತ್ತರ ನೀಡಿದ ನಟಿಮದುವೆಗೂ ಮುಂಚೆ ಗರ್ಭಿಣಿ: ಪ್ರಶ್ನೆ ಮಾಡಿದವಗೆ ಪ್ರತ್ಯುತ್ತರ ನೀಡಿದ ನಟಿ

  "ದಶಕದ ಹಿಂದೆ ನಟಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು ನೋಡಿ ಶಾಕ್ ಆಗಿತ್ತು. ಅಂದಿನಿಂದ ಯಾವುದೇ ಹೋಟೆಲ್‌ಗೆ ಹೋದರೂ ಬಹಳ ಎಚ್ಚರಿಕೆ ವಹಿಸುತ್ತೇನೆ" ಎಂದು ಹೇಳಿದ್ದಾರೆ.

  ಹೋಟೆಲ್‌ನಲ್ಲಿ ಸೀಕ್ರೆಟ್ ಕ್ಯಾಮರಾ ಹುಡುಕ್ತೀನಿ

  ಹೋಟೆಲ್‌ನಲ್ಲಿ ಸೀಕ್ರೆಟ್ ಕ್ಯಾಮರಾ ಹುಡುಕ್ತೀನಿ

  "ನಾನು ಬಂದಮೇಲೆ ಹೋಟೆಲ್ ರೂಂ ಓಪನ್ ಮಾಡಬೇಕು. ಹೋಟೆಲ್ ಪ್ರೊಟೊಕಾಲ್ ಪ್ರಕಾರ ಎಲ್ಲವನ್ನು ಪರಿಶೀಲಿಸಿದ ನಂತರ ಸೀಕ್ರೆಟ್ ಕ್ಯಾಮರಾಗಳು ಇದ್ಯಾ? ಇಲ್ವಾ? ಎನ್ನುವುದನ್ನು ಹುಡುಕುತ್ತೇನೆ" ಎಂದಿದ್ದಾರೆ. ದಿಯಾ ಮಿರ್ಜಾ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2001ರಲ್ಲಿ 'ರೆಹನಾ ಹೈ ತೆರೆ ದಿಲ್ ಮೆ' ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಕೆಟ್ಟ ಮೇಲೆ ಬುದ್ಧಿ ಬಂತು!: 'ಆದಿಪುರುಷ್' ಹೊಸ ರಿಲೀಸ್ ಡೇಟ್ ಘೋಷಣೆಕೆಟ್ಟ ಮೇಲೆ ಬುದ್ಧಿ ಬಂತು!: 'ಆದಿಪುರುಷ್' ಹೊಸ ರಿಲೀಸ್ ಡೇಟ್ ಘೋಷಣೆ

  ಕೊಹ್ಲಿ ಬೆಡ್‌ ರೂಂ ವಿಡಿಯೋ ಲೀಕ್

  ಕೊಹ್ಲಿ ಬೆಡ್‌ ರೂಂ ವಿಡಿಯೋ ಲೀಕ್

  ವಿರಾಟ್ ಕೊಹ್ಲಿ ತಮ್ಮ ಹೊಟೇಲ್‌ನ ಕೊಠಡಿಯಲ್ಲಿ ಇಲ್ಲದಿದ್ದಾಗ ಅಭಿಮಾನಿಯೊಬ್ಬ ಅವರ ರೂಮ್‌ ಪ್ರವೇಶಿಸಿ ವಿಡಿಯೋ ಮಾಡಿ ಶೇರ್ ಮಾಡಿದ್ದ. ಈ ವಿಡಿಯೋದಲ್ಲಿ ವಿರಾಟ್ ಅವರ ಕಿಟ್ ಬ್ಯಾಗ್, ಬ್ರಾತ್​ರೂಮ್ ಕೆಲ ವೈಯಕ್ತಿಕ ವಸ್ತುಗಳು ಸೆರೆಯಾಗಿತ್ತು. ವಿರಾಟ್ ಕೊಹ್ಲಿ ತಮ್ಮ ಖಾಸಗಿತನಕ್ಕೆ ಆದ ಧಕ್ಕೆಯ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಮೆಂಟ್ ಬಾಕ್ಸ್‌ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪರ್ತ್‌ನ ಹೋಟೆಲ್‌ ಆಡಳಿತ ಮಂಡಳಿ ಕೊಹ್ಲಿಗೆ ಕ್ಷಮೆ ಕೇಳಿತ್ತು.

  ದಿಯಾ ನಟನೆಯ 'ಭೀಡ್' ರಿಲೀಸ್‌ಗೆ ರೆಡಿ

  ದಿಯಾ ನಟನೆಯ 'ಭೀಡ್' ರಿಲೀಸ್‌ಗೆ ರೆಡಿ

  ದಿಯಾ ಮಿರ್ಜಾ ಸದ್ಯ ಅನುಭವ್‌ ಸಿನ್ಹಾ ಅವರ 'ಭೀಡ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಬಾಲಿವುಡ್‌ನಲ್ಲಿ 'ಸಂಜು', 'ತಪ್ಪಡ್', 'ದಸ್' ಮತ್ತು 'ಕ್ಯಾಶ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ತೆಲುಗಿನ ವೈಲ್ಡ್ ಡಾಗ್ ಸಿನಿಮಾದಲ್ಲೂ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದರು.

  ಮದುವೆ, ಸೆಕ್ಸ್ ಬಗ್ಗೆ ಬೋಲ್ಡ್ ಕಾಮೆಂಟ್

  ಮದುವೆ, ಸೆಕ್ಸ್ ಬಗ್ಗೆ ಬೋಲ್ಡ್ ಕಾಮೆಂಟ್

  ಕಳೆದ ವರ್ಷ ಮದುವೆಯಾದ ಎರಡೇ ತಿಂಗಳಿಗೆ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ದಿಯಾ ಮಿರ್ಜಾ ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ "ಪ್ರಸ್ತುತ ನಮ್ಮ ಸಮಾಜ ಹೇಗಿದೆ ಅಂದರೆ ಸೆಕ್ಸ್ ಮಾಡುವುದು ಹಾಗೂ ಗರ್ಭಿಣಿಯಾಗುವುದು ವಿವಾಹವಾದ ಆದ ಮೇಲೆ ಸಿಗುವ ಹಕ್ಕು ಎನ್ನುವ ರೀತಿಯಲ್ಲಿದೆ. ಆದರೆ, ನನ್ನ ಪ್ರಕಾರ, ಇದು ವೈಯಕ್ತಿಕ ಆಯ್ಕೆ. ತಮ್ಮ ನಿರ್ಧಾರಗಳ ಆಗು ಹೋಗುಗಳ ಜವಾಬ್ದಾರಿಯನ್ನು ನಿಭಾಯಿಸಲು ಯಾರು ಸಮರ್ಥರಾಗಿರುತ್ತಾರೋ, ಅವರು ಇದನ್ನು ಸುಲಭವಾಗಿ ಆಚರಿಸಬಹುದು. ಬಹುಶಃ ನನ್ನ ಪತಿ ತನ್ನ ನಿರ್ಧಾರದ ಕುರಿತಾಗಿ ಯಾವುದೇ ಅಂಜಿಕೆ ಹೊಂದಿರಲಿಲ್ಲ" ಎಂದು ತಿರುಗೇಟು ನೀಡಿದ್ದರು.

  English summary
  Dia Mirza about the security measures she takes before checking into a hotel room. Dia said she became cautious after videos of actresses bathing surfaced on the net about a decade ago. Know More.
  Monday, November 7, 2022, 17:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X