For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಿ 3 ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿದ ನಟಿ ದಿಯಾ ಮಿರ್ಜಾ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ದಿಯಾ ಮಿರ್ಜಾ ಮತ್ತು ಪತ್ನಿ ವೈಭವ್ ರೇಖಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ನಟಿ ದಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಹೊಸ ಸದಸ್ಯ ಆಗಮಿಸಿದ ಸಂತೋಷದ ಸುದ್ದಿಯನ್ನು ದಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಮುದ್ದು ಮಗುವಿನ ಕೈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮನೆಗೆ ಮಗ ಬಂದಿರುವ ಸುದ್ದಿಯನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ. ಅಂದಹಾಗೆ ದಿಯಾ ಮೇ 14ರಂದೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅವಧಿಗೂ ಮೊದಲೇ ಮಗು ಜನಿಸಿದ್ದು, ತನ್ನ ಮಗ ಬೇಗನೇ ಆಗಮಿಸಿದ್ದಾನೆ ಎಂದು ದಿಯಾ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಮುಂದೆ ಓದಿ...

  ಅವಧಿಗೂ ತೀರ ಮುಂಚೆ ಜನಿಸಿದ ಮಗ

  ಅವಧಿಗೂ ತೀರ ಮುಂಚೆ ಜನಿಸಿದ ಮಗ

  ಗರ್ಭಿಣಿಯಾಗಿದ್ದಾಗ ಸಿಕ್ಕಾಪಟ್ಟೆ ತೊಂದರೆ ಅನುಭವಿಸಿದ್ದ ದಿಯಾ ಬಹುಬೇಗನೆ ಮಗನಿಗೆ ಜನ್ಮ ನೀಡಿದ್ದಾರೆ. ಅಂದಹಾಗೆ ದಿಯಾ ಮತ್ತು ವೈಭವ್ ಇಬ್ಬರು ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಗರ್ಭಿಣಿ ಎಂದು ಬಹಿರಂಗ ಪಡಿಸಿದ್ದ ದಿಯಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಬಳಿಕ ಮೇ ತಿಂಗಳಲ್ಲಿ ಮಗನಿಗೆ ಜನ್ಮ ನೀಡಿದರು. ಜುಲೈ ತಿಂಗಳಲ್ಲಿ ಮಗನ ಕೈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದಾರೆ.

  ಮದುವೆಯಾಗಿ ಒಂದೂವರೆ ತಿಂಗಳಲ್ಲೇ ಗುಡ್ ನ್ಯೂಸ್ ನೀಡಿದ ನಟಿ ದಿಯಾ ಮಿರ್ಜಾಮದುವೆಯಾಗಿ ಒಂದೂವರೆ ತಿಂಗಳಲ್ಲೇ ಗುಡ್ ನ್ಯೂಸ್ ನೀಡಿದ ನಟಿ ದಿಯಾ ಮಿರ್ಜಾ

  ಅವ್ಯಾನ್ ಎಂದು ನಾಮಕರಣ

  ಅವ್ಯಾನ್ ಎಂದು ನಾಮಕರಣ

  ಮಗನಿಗೆ ಅವ್ಯಾನ್ ಆಜಾದ್ ರೇಖಿ ಎಂದು ನಾಮಕರಣ ಮಾಡಿದ್ದಾರೆ. "ನಮ್ಮ ಹೃದಯ ಬಡಿತ, ನಮ್ಮ ಮಗ ಅವ್ಯಾನ್ ಮೇ 14ರಂದು ಜನಿಸಿದ್ದಾನೆ. ಬೇಗನೇ ಆಗಮಿಸಿದ. ಪುಟ್ಟಕಂದನನ್ನು ದಾದಿಯರು ಮತ್ತು ವೈದ್ಯರು ನೋಡಿಕೊಳ್ಳುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

  ಜೀವಕ್ಕೆ ಅಪಾಯವಿತ್ತು- ದಿಯಾ

  ಜೀವಕ್ಕೆ ಅಪಾಯವಿತ್ತು- ದಿಯಾ

  ಗರ್ಭಿಣಿಯಾಗಿದ್ದಾಗ ತಾನು ಅನುಭವಿಸಿದ ಕಷ್ಟಗಳ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. "ಜೀವಕ್ಕೆ ಆಪಾಯವಾಗಿತ್ತು. ಅದೃಷ್ಟವಶಾತ್ ನಮ್ಮ ವೈದ್ಯರ ಚಿಕಿತ್ಸೆಯಿಂದ ನನ್ನ ಮಗು ಸುರಕ್ಷಿತವಾಗಿ ಆಗಮಿಸಿದ್ದಾನೆ" ಎಂದು ಹೇಳಿದ್ದಾರೆ. ಜೊತೆಗೆ ಈ ಸಮಯದಲ್ಲಿ ಪ್ರೀತಿ, ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

  ಮದುವೆಗೂ ಮುಂಚೆ ಗರ್ಭಿಣಿ: ಪ್ರಶ್ನೆ ಮಾಡಿದವಗೆ ಪ್ರತ್ಯುತ್ತರ ನೀಡಿದ ನಟಿಮದುವೆಗೂ ಮುಂಚೆ ಗರ್ಭಿಣಿ: ಪ್ರಶ್ನೆ ಮಾಡಿದವಗೆ ಪ್ರತ್ಯುತ್ತರ ನೀಡಿದ ನಟಿ

  ಬಾಲಿವುಡ್ ಗಣ್ಯರ ಅಭಿನಂದನೆ

  ಬಾಲಿವುಡ್ ಗಣ್ಯರ ಅಭಿನಂದನೆ

  ದಿಯಾ ಮಿರ್ಜಾ ದಂಪತಿಗೆ ಬಾಲಿವುಡ್ ಗಣ್ಯರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅನುಷ್ಕಾ ಶರ್ಮಾ, ಮಲೈಕಾ ಅರೋರಾ, ಮಸಬಾ ಗುಪ್ತಾ ಕರೀನಾ ಕಪೂರ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

  ಫೆಬ್ರವರಿಯಲ್ಲಿ ಮದುವೆ

  ಫೆಬ್ರವರಿಯಲ್ಲಿ ಮದುವೆ

  ನಟಿ ದಿಯಾ ಮಿರ್ಜಾ ಫೆಬ್ರವರಿ 15ರಂದು ವೈಭವ್ ರೇಖಿ ಜೊತೆ ಎರಡನೇ ವಿವಾಹವಾಗಿದ್ದರು. ಸರಳವಾಗಿ ನೆರವೇರಿದ ಮದುವೆ ಸಮಾರಂಭದಲ್ಲಿ ದಿಯಾ ಮತ್ತು ವೈಭವ್ ಕುಟುಂಬದ ಕೆಲವೇ ಸದಸ್ಯರು ಭಾಗಿಯಾಗಿದ್ದರು. ಮದುವೆಯಾಗಿ ಒಂದೂವರೆ ತಿಂಗಳಲ್ಲೇ ದಿಯಾ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಮೂಲಕ ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು.

  ಲೆಜೆಂಡ್ Dadasaheb Phalke ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ಮಹಿಳೆ Ragini | Filmibeat Kannada
  ಟ್ರೋಲ್‌ಗೆ ಉತ್ತರಿಸಿದ್ದ ದಿಯಾ ಮಿರ್ಜಾ

  ಟ್ರೋಲ್‌ಗೆ ಉತ್ತರಿಸಿದ್ದ ದಿಯಾ ಮಿರ್ಜಾ

  ದಿಯಾ ತಾಯಿಯಾಗುತ್ತಿರುವ ವಿಚಾರ ಬಹಿರಂಗ ಪಡಿಸಿದ ಬಳಿಕ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು. ಬಳಿಕ ಇದಕ್ಕೆ ಉತ್ತರಿಸಿದ ದಿಯಾ, "ನಾವು ಪೋಷಕರಾಗುತ್ತಿದ್ದೇವೆ ಎಂಬ ಕಾರಣಕ್ಕೆ ಮದುವೆ ಆಗಲಿಲ್ಲ. ಮದುವೆಯ ತಯಾರಿಯಲ್ಲಿದ್ದಾಗ ನಾನು ಗರ್ಭಿಣಿ ಆಗಿರುವುದು ಗೊತ್ತಾಯಿತು. ಗರ್ಭಿಣಿ ಆಗಿದ್ದಕ್ಕೆ ನಾವು ಮದುವೆ ಆಗಲಿಲ್ಲ. ಪೋಷಕರಾಗುತ್ತಿರುವುದಾಗಿ ನಾವು ಮೊದಲೇ ಘೋಷಿಸಬಹುದಿತ್ತು. ಆದರೆ ವೈದ್ಯಕೀಯ ಕಾರಣಗಳಿಂದಾಗಿ ನಾವು ತಡವಾಗಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡೆವು. ಈ ಸಂದರ್ಭಕ್ಕಾಗಿ ಹಲವು ವರ್ಷಗಳಿಂದ ನಾನು ಕಾದಿದ್ದೇನೆ. ವೈದ್ಯಕೀಯ ಕಾರಣವಲ್ಲದೆ ಬೇರಾವುದೇ ಕಾರಣದಿಂದಲೂ ನಾನು ಈ ವಿಷಯವನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ" ಎಂದಿದ್ದರು. ಇದೀಗ ತಾಯಿಯಾದ ಸಂಭ್ರಮವನ್ನು ದಿಯಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  English summary
  Actress Dia Mirza and husband Vaibhav Rekhi welcome baby boy named him Avyaan Azaad Rekh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X