5 ವರ್ಷದ ದಾಂಪತ್ಯ ಜೀವನ ಮುರಿದುಕೊಂಡ ಸ್ಟಾರ್ ನಟಿ

ಬಾಲಿವುಡ್ ನಟಿ, ನಿರ್ಮಾಪಕಿ ದಿಯಾ ಮಿರ್ಜಾ ಮತ್ತು ಸಾಹಿಲ್ ಸಂಘ ಅವರ ದಾಂಪತ್ಯ ಜೀವನ ವಿಚ್ಛೇದನದ ಮೂಲಕ ಅಂತ್ಯವಾಗಿದೆ. ಐದು ವರ್ಷದ ವೈವಾಹಿಕ ಜೀವನವನ್ನ ಪರಸ್ಪರ ಒಪ್ಪಿಗೆಯಿಂದ ಮುರಿದುಕೊಂಡಿದ್ದಾರೆ.

ಈ ವಿಷ್ಯವನ್ನ ಇನ್ಸ್ಟಾಗ್ರಾಂನಲ್ಲಿ ದಿಯಾ ಮಿರ್ಜಾ ಮತ್ತು ಸಾಹಿಲ್ ಸಂಘ ಅವರು ಅಧಿಕೃತವಾಗಿ ಪ್ರಕಟಿಸಿಕೊಂಡಿದ್ದಾರೆ. '2014ರಲ್ಲಿ ಮದುವೆ ಆಗಿದ್ದ ನಾವು ಒಮ್ಮತದಿಂದ ಸಂಬಂಧ ಕಡಿದುಕೊಳ್ಳುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

11 ವರ್ಷದ ಹಿಂದೆ ದಿಯಾ ಮಿರ್ಜಾ ಮತ್ತು ಸಾಹಿಲ್ ಪರಿಚಯವಾಗಿತ್ತು. ಆ ಸ್ನೇಹ ಈಗ ಪ್ರೀತಿಗೆ ತಿರುಗಿ 2014ರ ಅಕ್ಟೋಬರ್ 18ರಂದು ಸಪ್ತಪದಿ ತುಳಿದಿದ್ದರು. ಇದೀಗ, ಕಾರಣಾಂತರಗಳಿಂದ ಇಬ್ಬರು ದೂರವಾಗಿದ್ದಾರೆ.

Dia Mirza and Sahil sangha Got Divorced

ವಿಚ್ಛೇದನ ಪಡೆದುಕೊಂಡಿರುವುದಕ್ಕೆ ನಿಖರವಾದ ಕಾರಣ ಬಹಿರಂಗಪಡಿಸಿಲ್ಲ. ಆದರೆ, ಮುಂದಿನ ದಿನಗಳಲ್ಲಿ ನಾವಿಬ್ಬರು ಗೆಳೆಯರಾಗಿ ಮುಂದುವರೆಯುತ್ತೇವೆ ಎಂದು 37 ವರ್ಷದ ದಿಯಾ ಬರೆದುಕೊಂಡಿದ್ದಾರೆ.

''11 ವರ್ಷದಿಂದ ನಾವು ಒಟ್ಟಾಗಿದ್ದೇವು. ಈಗ ಒಮ್ಮತ ನಿರ್ಧಾರದಿಂದ ದೂರವಾಗುತ್ತಿದ್ದೇವೆ. ಇಲ್ಲಿಂದ ನಾವು ಕೇವಲ ಸ್ನಹಿತರಾಗಿ ಮುಂದುವರಿಯಲಿದ್ದೇವೆ. ನಮ್ಮಲ್ಲಿದ್ದ ಪ್ರೀತಿ ಮತ್ತು ಗೌರವ ಉಳಿದುಕೊಳ್ಳಲಿದೆ. ನಮ್ಮ ಮುಂದಿನ ಜರ್ನಿ ಬೇರೆ ಮಾರ್ಗದಲ್ಲಿ ಸಾಗಬೇಕಿದೆ. ನಮ್ಮ ಬಗ್ಗೆ ಪ್ರೀತಿ ಕಾಳಜಿ ಹೊಂದಿರುವ ಕುಟುಂಬ, ಗೆಳೆಯರಿಗೆ ಧನ್ಯವಾದ'' ಎಂದು ತಿಳಿಸಿದ್ದಾರೆ.

More from Filmibeat

English summary
Bollywood actress Dia Mirza and husband Sahil sangha Got Divorced in mutual decision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X