ಮತ್ತೊಮ್ಮೆ ವಿವಾಹವಾಗಲಿದ್ದಾರೆ ಬಾಲಿವುಡ್ ನಟಿ ದಿಯಾ ಮಿರ್ಜಾ?
ಬಾಲಿವುಡ್ ನಟಿ, ನಿರ್ಮಾಪಕಿ ದಿಯಾ ಮಿರ್ಜಾ ಅವರ ದಾಂಪತ್ಯ ಕಳೆದ ವರ್ಷ ಮುರಿದುಬಿದ್ದಿತ್ತು. ಸಾಹಿಲ್ ಸಂಘ ಅವರ ಜೊತೆಗಿನ ಐದು ವರ್ಷದ ವೈವಾಹಿಕ ಬದುಕಿಗೆ ನಟಿ ದಿಯಾ ಅಂತ್ಯವಾಡಿದ್ದರು. ಪರಸ್ಪರ ಒಪ್ಪಿಗೆ ಮೆರೆಗೆ ಕೊರ್ಟ್‌ನಲ್ಲಿ ಡಿವೋರ್ಸ್ ಪಡೆದು ದೂರವಾದರು.
ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ನಟಿ ದಿಯಾ ಮತ್ತೊಮ್ಮೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹಲವು ದಿನಗಳಿಂದ ವೈಭವ್ ಶೇಖಿ ಎನ್ನುವರ ಜೊತೆ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ, ಈ ಪ್ರೀತಿ ಮದುವೆವರೆಗೂ ಬಂದಿದೆ. ಮುಂಬೈ ಮೂಲದ ಉದ್ಯಮಿ ಜೊತೆ ವಿವಾಹವಾಗಲು ಸಿದ್ಧವಾಗಿದ್ದಾರೆ ಎಂದು ''Spotboye'' ವೆಬ್‌ಸೈಟ್ ವರದಿ ಮಾಡಿದೆ. ಮುಂದೆ ಓದಿ...

ಫೆಬ್ರವರಿ 15ಕ್ಕೆ ಮದುವೆ?
'Spotboye' ವರದಿ ಮಾಡಿರುವಂತೆ ನಟಿ ದಿಯಾ ಮಿರ್ಜಾ ಮತ್ತು ಉದ್ಯಮಿ ವೈಭವ್ ಶೇಖಿ ಅವರ ಮದುವೆ ಫೆಬ್ರವರಿ 15 ರಂದು ಸೋಮವಾರ ನಡೆಯಲಿದೆ. ಇದು ಖಾಸಗಿ ಕಾರ್ಯಕ್ರಮವಾಗಿದ್ದು, ಕೆಲವೇ ಕೆಲವು ಸಂಬಂಧಿಕರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಹೇಳಿದೆ.

11 ವರ್ಷದ ದಾಂಪತ್ಯ ಮುರಿದುಕೊಂಡಿದ್ದ ನಟಿ
12 ವರ್ಷಗಳ ಹಿಂದೆ ದಿಯಾ ಮಿರ್ಜಾ ಮತ್ತು ಸಾಹಿಲ್ ಸಂಘ ನಡುವೆ ಪರಿಚಯ ಆಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿ 2014ರ ಅಕ್ಟೋಬರ್ 18ರಂದು ಸಪ್ತಪದಿ ತುಳಿದಿದ್ದರು. ಐದು ವರ್ಷ ಒಟ್ಟಿಗೆ ದಾಂಪತ್ಯ ನಡೆಸಿದ ದಿಯಾ ಮತ್ತು ಸಾಹಿಲ್ ಒಪ್ಪಿಗೆ ಮೆರೆಗೆ 2019ರಲ್ಲಿ ಡಿವೋರ್ಸ್ ಪಡೆದುಕೊಂಡರು.

ಸ್ನೇಹಿತರಾಗಿ ಮುಂದುವರಿಯುತ್ತೇವೆ
''11 ವರ್ಷದಿಂದ ನಾವು ಒಟ್ಟಾಗಿದ್ದೇವು. ಈಗ ಒಮ್ಮತ ನಿರ್ಧಾರದಿಂದ ದೂರವಾಗುತ್ತಿದ್ದೇವೆ. ಇಲ್ಲಿಂದ ನಾವು ಕೇವಲ ಸ್ನಹಿತರಾಗಿ ಮುಂದುವರಿಯಲಿದ್ದೇವೆ. ನಮ್ಮಲ್ಲಿದ್ದ ಪ್ರೀತಿ ಮತ್ತು ಗೌರವ ಉಳಿದುಕೊಳ್ಳಲಿದೆ. ನಮ್ಮ ಮುಂದಿನ ಜರ್ನಿ ಬೇರೆ ಮಾರ್ಗದಲ್ಲಿ ಸಾಗಬೇಕಿದೆ. ನಮ್ಮ ಬಗ್ಗೆ ಪ್ರೀತಿ ಕಾಳಜಿ ಹೊಂದಿರುವ ಕುಟುಂಬ, ಗೆಳೆಯರಿಗೆ ಧನ್ಯವಾದ'' ಎಂದು ದಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
Recommended Video

ವೈಭವ್ ಶೇಖಿಗೂ ಎರಡನೇ ವಿವಾಹ
ಅಂದ್ಹಾಗೆ, ದಿಯಾ ಮಿರ್ಜಾ ವಿವಾಹವಾಗುತ್ತಿರುವ ವೈಭವ್ ಶೇಖಿ ಅವರಿಗೂ ಈ ಮೊದಲೇ ವಿವಾಹವಾಗಿದೆ. ಯೋಗ ಟೀಚರ್ ಸುನೈನ ಅವರ ಜೊತೆ ಮದುವೆಯಾಗಿದ್ದರು. ಇವರಿಬ್ಬರಿಗೆ ಒಬ್ಬ ಮಗಳು ಸಹ ಇದ್ದಾಳೆ. ಪತಿಯಿಂದ ದೂರವಾಗಿರುವ ವೈಭವ್ ಈಗ ನಟಿ ದಿಯಾ ಜೊತೆ ಮರು ವಿವಾಹವಾಗುತ್ತಿದ್ದಾರೆ.


Click it and Unblock the Notifications











