KGF In Bollywood: ಅಕ್ಷಯ್ ಕುಮಾರ್ ಹಿಂದಿ ಸಿನಿಮಾದಲ್ಲಿ ಕನ್ನಡದ 'ಕೆಜಿಎಫ್' ಮಾತು

ನಟ ಅಕ್ಷಯ್ ಕುಮಾರ್ ಬಾಲಿವುಡ್‌ನ ದೊಡ್ಡ ಸ್ಟಾರ್ ನಟ. ವಿಶ್ವದಾದ್ಯಂತ ವರ್ಷಕ್ಕೆ ಹೆಚ್ಚು ಹಣ ಗಳಿಸುವ ನಟರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ ಅಕ್ಷಯ್.

ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾ 'ಬಚ್ಚನ್ ಪಾಂಡೆ' ಮಾರ್ಚ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದಿಲ್ಲವಾದ್ದರಿಂದ ಸಾಧಾರಣ ಪ್ರದರ್ಶನವನ್ನು ಚಿತ್ರಮಂದಿರಗಳಲ್ಲಿ ಕಾಣುತ್ತಿದೆ ಸಿನಿಮಾ.

'ಬಚ್ಚನ್ ಪಾಂಡೆ' ಸಿನಿಮಾವು ತಮಿಳಿನ 'ಜಿಗರ್ ಥಂಡಾ' ಸಿನಿಮಾದ ರೀಮೇಕ್ ಆಗಿದ್ದು ಸಿನಿಮಾದಲ್ಲಿ ರೌಡಿ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ರೌಡಿಯಾಗಿರುವ ಬಚ್ಚನ್ ಪಾಂಡೆಯನ್ನು ಹೀರೋ ಅನ್ನಾಗಿ ಹಾಕಿಕೊಂಡು ಸಿನಿಮಾ ಮಾಡುವ ಕತೆಯನ್ನು 'ಜಿಗರ್ ಥಂಡಾ' ಹೊಂದಿದೆ.

ಅಕ್ಷಯ್ ಕುಮಾರ್‌ರ 'ಜಿಗರ್ ಥಂಡಾ' ಸಿನಿಮಾದಲ್ಲಿ ಕನ್ನಡದ ಸಿನಿಮಾ 'ಕೆಜಿಎಫ್'ನ ಉಲ್ಲೇಖವಿದೆ. ಸಿನಿಮಾದ ಕತೆಯಲ್ಲಿ ರೌಡಿ ಬಚ್ಚನ್ ಪಾಂಡೆ (ಅಕ್ಷಯ್ ಕುಮಾರ್) ನಟಿಸಲಿರುವ ಸಿನಿಮಾಕ್ಕೆ ಹೆಸರು ಇಡುವ ಬಗ್ಗೆ ಅವನ ಸಹವರ್ತಿಗಳು ಮಾತನಾಡಿಕೊಳ್ಳುತ್ತಿರುತ್ತಾರೆ. ಆಗ ಒಬ್ಬ ಈ ಸಿನಿಮಾಕ್ಕೆ ಬಿಪಿ ಎಂದು ಹೆಸರಿಡುವ ಎನ್ನುತ್ತಾನೆ.

ಸಿನಿಮಾದಲ್ಲಿ 'ಕೆಜಿಎಫ್' ಉಲ್ಲೇಖ

ಸಿನಿಮಾದಲ್ಲಿ 'ಕೆಜಿಎಫ್' ಉಲ್ಲೇಖ

ಅದೇನು ಬಿಪಿ ಎಂದರೆ? ಎಂದು ಕೇಳಿದಾಗ ಈಗ ಇದೇ ಟ್ರೆಂಡ್ 'ಕೋಲಾರ್ ಗೋಲ್ಡ್ ಫೀಲ್ಡ್' ಅನ್ನು 'ಕೆಜಿಎಫ್' ಎಂದು ಇಟ್ಟಿಲ್ಲವೆ ಹಾಗೆ ಬಚ್ಚನ್ ಪಾಂಡೆ ಸಿನಿಮಾಕ್ಕೆ ಬಿಪಿ ಎಂದು ಹೆಸರಿಡೋಣ ಎನ್ನುತ್ತಾನೆ ಮತ್ತೊಬ್ಬ. ಈ ದೃಶ್ಯ ನಡೆವಾಗ ನಟ ಅಕ್ಷಯ್ ಕುಮಾರ್ ಪೂಜೆ ಮಾಡುತ್ತಾ ಸಂಭಾಷಣೆ ಆಲಿಸುತ್ತಿರುತ್ತಾರೆ. 'ಬಚ್ಚನ್ ಪಾಂಡೆ' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ, ಪ್ರತೀಕ್ ಬಬ್ಬರ್ ನಟಿಸಿದ್ದಾರೆ. ನಾಯಕಿಯಾಗಿ ಕೃತಿ ಸೆನನ್, ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ.

'ಕೆಜಿಎಫ್' ಮಾಡಿದ್ದ ಮೋಡಿಗೆ ಸಾಕ್ಷಿ

'ಕೆಜಿಎಫ್' ಮಾಡಿದ್ದ ಮೋಡಿಗೆ ಸಾಕ್ಷಿ

ಬಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಕನ್ನಡ ಸಿನಿಮಾದ ಉಲ್ಲೇಖ ಮಾಡಿರುವುದು ಕೇಳಿ ಕನ್ನಡಿಗರು ಸಹಜವಾಗಿಯೇ ಥ್ರಿಲ್ ಆಗಿದ್ದಾರೆ. ಯಶ್ ಅಭಿಮಾನಿಗಳಂತೂ ಸಿನಿಮಾದ ಈ ದೃಶ್ಯವನ್ನು ವೈರಲ್ ಮಾಡುತ್ತಿದ್ದಾರೆ. 'ಕೆಜಿಎಫ್' ಸಿನಿಮಾ ಕನ್ನಡ ಅಥವಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಹಿಂದಿಯಲ್ಲಿಯೂ ಬಹುದೊಡ್ಡ ಹಿಟ್ ಅಗಿತ್ತು ಎಂಬುದಕ್ಕೆ ಇದೇ ಸಾಕ್ಷಿ. ಅಲ್ಲದೆ 'ಕೆಜಿಎಫ್ 2' ಬಗ್ಗೆ ಹಿಂದಿ ಭಾಷಿಕರಿಗೆ ಇರುವ ನಿರೀಕ್ಷೆಗೂ ಇದು ಸಾಕ್ಷಿಯಾಗಿದೆ.

ರಿಯಾಲಿಟಿ ಶೋನಲ್ಲಿ 'ಕೆಜಿಎಫ್' ಬಗ್ಗೆ ಮಾತು

ರಿಯಾಲಿಟಿ ಶೋನಲ್ಲಿ 'ಕೆಜಿಎಫ್' ಬಗ್ಗೆ ಮಾತು

ಹಿಂದಿ ರಿಯಾಲಿಟಿ ಶೋ ಒಂದರಲ್ಲಿ ಸಹ ಒಮ್ಮೆ 'ಕೆಜಿಎಫ್' ಸಿನಿಮಾ ಹಾಗೂ ಯಶ್‌ ಉಲ್ಲೇಖ ಆಗಿತ್ತು. ನಟಿ ಸೋನಾಕ್ಷಿ ಸಿನ್ಹಾ ಹಾಗೂ ಅವರ ತಂದೆ ಶತೃಘ್ನ ಸಿನ್ಹಾ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನಟ ರಣ್ವೀರ್ ಸಿಂಗ್ 'ಕೆಜಿಎಫ್' ಸಿನಿಮಾದ ಪೋಸ್ಟರ್ ತೋರಿಸಿ ಇದು ಯಾವ ಸಿನಿಮಾದ ಪೋಸ್ಟರ್ ಮತ್ತು ನಟನ್ಯಾರು ಎಂದು ಕೇಳಿದ್ದರು. ನಟಿ ಸೋನಾಕ್ಷಿ ಸಿನ್ಹ ಸಿನಿಮಾದ ಹೆಸರು ಹಾಗೂ ನಟ ಯಶ್ ಅನ್ನು ಗುರುತಿಸಿದ್ದರು. ಆದರೆ ಯಾವ ಭಾಷೆಯ ಸಿನಿಮಾ ಎಂದು ಗುರಿತಿಸಲು ವಿಫಲವಾದರು. ಆಗ ಅವರ ಸಹೋದರ ಕುಶ್ ಸಿನ್ಹಾ, ಯಶ್ ಅವರ ಬಗ್ಗೆ ಪೂರ್ಣ ಮಾಹಿತಿ ನೀಡಿದ ಜೊತೆಗೆ 'ಕೆಜಿಎಫ್ 2' ಸಿನಿಮಾಕ್ಕಾಗಿ ಕಾಯುತ್ತಿರುವುದಾಗಿಯೂ ಹೇಳಿದರು.

ಏಪ್ರಿಲ್ 14 ಕ್ಕೆ ಸಿನಿಮಾ ಬಿಡುಗಡೆ

ಏಪ್ರಿಲ್ 14 ಕ್ಕೆ ಸಿನಿಮಾ ಬಿಡುಗಡೆ

'ಕೆಜಿಎಫ್ 2' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾವು ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಸಿನಿಮಾದ ಮೊದಲ ಹಾಡು ಮಾರ್ಚ್ 21 ರಂದು ಅಂದರೆ ನಾಳೆ ಬಿಡುಗಡೆ ಆಗಲಿದೆ. 'ಕೆಜಿಎಫ್ 2' ಭಾರತದಲ್ಲಿಯೇ ಅತಿ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದಲ್ಲಿ ಯಶ್ ಜೊತೆಗೆ ನಟ ಸಂಜಯ್ ದತ್ ವಿಲನ್ ಆಗಿ ನಟಿಸಿದ್ದಾರೆ. ರವೀನಾ ಟಂಡನ್ ಇದ್ದಾರೆ. ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್ ಇನ್ನೂ ಹಲವು ಕಲಾವಿದರು ಕೆಜಿಎಫ್ 2 ನಲ್ಲಿದ್ದಾರೆ. ಸಿನಿಮಾದ ಪ್ರಚಾರ ಈಗಷ್ಟೆ ಆರಂಭವಾಗಿದೆ.

More from Filmibeat

English summary
A dialogue about Kannada movie KGF in Akshay Kumar's new movie Bachchan Pande. Movie released on March 18. KGF 2 will release on April 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X