70 ವರ್ಷದ ಹಿರಿಯ ನಟನ ಜೊತೆ ಪ್ರೀತಿಯಲ್ಲಿ ಬಿದ್ದ 31 ವರ್ಷದ ನಟಿ...?
ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಪ್ರೀತಿಗೆ ಯಾವುದೇ ಗಡಿ ಎನ್ನುವುದು ಕೂಡ ಇರುವುದಿಲ್ಲ. ಅದು ಯಾವತ್ತು ಬೇಕಾದರೂ ಯಾರ ಮೇಲಾದರೂ ಆಗಬಹುದು. ಇಬ್ಬರಲ್ಲೂ ಪ್ರೀತಿಯು ಆಳವಾಗಿ ಇದ್ದಾಗ ಅದನ್ನು ಪ್ರಶ್ನಿಸುವ ಕೆಲಸ ಮಾಡಬಾರದು. ಆದರೆ, ಶಿವಾಂಗಿ ವರ್ಮಾ ಹಂಚಿಕೊಂಡ ಫೋಟೊ ಹಲವು ಪ್ರಶ್ನೆಗಳನ್ನು ಅನೇಕರಲ್ಲಿ ಹುಟ್ಟುಹಾಕಿದೆ. ಟ್ರೋಲಿಗರಿಗೆ ಆಹಾರವೂ ಆಗಿದೆ.
ಹೌದು, ಹಿಂದಿ ಕಿರುತೆರೆ ವಲಯದಲ್ಲಿ ಚಿರಪರಿಚಿತವಾದ ಶಿವಾಂಗಿ ವರ್ಮಾ, ಮೊನ್ನೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್‌ನ ಹಿರಿಯ ನಟ ಗೋವಿಂದ್ ನಾಮ್‌ದೇವ್ ಜೊತೆ ಫೋಟೊ ಹಂಚಿಕೊಂಡಿದ್ದರು. ಆದರೆ ಅದಕ್ಕೆ ಪ್ರೀತಿಗೆ ವಯಸ್ಸಿಲ್ಲ, ಮಿತಿಯಿಲ್ಲ ಎಂಬ ಸಾಲನ್ನು ಬರೆದುಕೊಂಡಿದ್ದರು. ಈ ಫೋಟೊ ನೋಡಿ ಅನೇಕರು ಬೆಚ್ಚಿ ಬಿದ್ದಿದ್ದರು.

ಯಾಕೆಂದರೆ ಶಿವಾಂಗಿ ವರ್ಮಾಗೆ ಈಗ 31ರ ಹರೆಯ. ಇನ್ನು ಗೋವಿಂದ್ ನಾಮ್‌ದೇವ್ ಅವರ ವಯಸ್ಸು 70. ಈ ಕಾರಣಕ್ಕೆ ಅನೇಕರು 31ನೇ ವಯಸ್ಸಿನಲ್ಲಿ 70ರ ಪ್ರಾಯದ ನಟನ ಜೊತೆ ಮದ್ವೆ ಮಾಡಿಕೊಳ್ತಿದ್ದೀರಾ ಹೇಗೆ ಎನ್ನುವ ಪ್ರಶ್ನೆಯನ್ನು ಅನೇಕರು ಶಿವಾಂಗಿ ವರ್ಮಾ ಅವರಿಗೆ ಕೇಳಲು ಶುರು ಮಾಡಿದ್ದರು. ಇನ್ನು ಕೆಲವರು ಹಣ ಇದ್ದರೆ ಎಲ್ಲವೂ ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಗೋವಿಂದ್ ನಾಮ್‌ದೇವ್ ಅವರ ಆಸ್ತಿಯ ಸಲುವಾಗಿ ಶಿವಾಂಗಿ ವರ್ಮಾ ಈ ಪ್ರೀತಿ ಪ್ರೇಮದ ನಾಟಕವನ್ನು ಮಾಡುತ್ತಿದ್ದಾರೆ ಎಂದೆಲ್ಲ ಕಾಮೆಂಟ್ ಮಾಡಿದ್ದರು. ಹೀನಾಮಾನವಾಗಿ ಶಿವಾಂಗಿ ವರ್ಮಾ ಅವರನ್ನು ಟ್ರೋಲ್ ಕೂಡ ಮಾಡಿದರು.
ಆದರೆ, ವಾಸ್ತವದಲ್ಲಿ ಶಿವಾಂಗಿ ವರ್ಮಾ ಮತ್ತು ಗೋವಿಂದ್ ನಾಮ್‌ದೇವ್ ನಡುವೆ ಇರುವುದು ಕೇವಲ ನಟ ಮತ್ತು ನಟಿಯ ಸಂಬಂಧ ಮಾತ್ರ. ಹೌದು, ಅಸಲಿಗೆ ಕಿರುತೆರೆಯಲ್ಲಿ ಕಳೆದ ಒಂದು ದಶಕದಿಂದ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡಿರುವ ಶಿವಾಂಗಿ ವರ್ಮಾ ಸದ್ಯ ಬೆಳ್ಳಿತೆರೆಗೆ ಲಗ್ಗೆ ಇಡ್ತಿದ್ದಾರೆ. ನಾಯಕಿಯಾಗಿ ಬಾಲಿವುಡ್‌ನ ಪ್ರವೇಶಿಸುತ್ತಿದ್ದಾರೆ. ಸಂಪೂರ್ಣ ಹಾಸ್ಯಮಯ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಗೋವಿಂದ್ ನಾಮ್‌ದೇವ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇನ್ನೂ ಗೋವಿಂದ್ ನಾಮ್‌ದೇವ್ ಬಾಲಿವುಡ್‌ನ ದಿಗ್ಗಜ. ಕಳೆದ ಮೂರು ದಶಕಗಳಲ್ಲಿ ನೂರಾರು ಚಿತ್ರ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ. ಇಂತಹ ಹಿರಿಯ ಕಲಾವಿದನ ಜೊತೆ ತಮ್ಮ ಮೊದಲ ಚಿತ್ರದಲ್ಲಿಯೇ ಶಿವಾಂಗಿ ವರ್ಮಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಫುಲ್ ಎಕ್ಸೈಟ್ ಆಗಿರುವ ಶಿವಾಂಗಿ ವರ್ಮಾ, ಗೋವಿಂದ್ ನಾಮ್‌ದೇವ್ ಅವರ ಜೊತೆ ಫೋಟೊ ಹಂಚಿಕೊಂಡಿದ್ದಾರೆ. ಆದರೆ ಇದನ್ನರಿಯದ ಅನೇಕರು ಶಿವಾಂಗಿ ವರ್ಮಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.
ಅಂದ್ಹಾಗೇ ಗೋವಿಂದ್ ನಾಮ್‌ದೇವ್ ಅವರ ಪತ್ನಿಯ ಹೆಸರು ಸುಧಾ ನಾಮ್‌ದೇವ್. ಇವರಿಬ್ಬರಿಗೆ ಪಲ್ಲವಿ, ಮೇಘಾ ಮತ್ತು ಪ್ರಗತಿ ಎಂಬ ಮೂರು ಹೆಣ್ಣು ಮಕ್ಕಳಿದ್ದಾರೆ. ಆ ಪೈಕಿ ಪಲ್ಲವಿ ಮತ್ತು ಮೇಘಾ ಅವರ ಮದುವೆ ಕೂಡ ಆಗಿದೆ. ಇನ್ನುಳಿದಂತೆ ಮಾಸ್ಟರ್ ಚೆಫ್ ಸೀಸನ್ 3ರ ವಿಜೇತ ರಿಪುದಮನ್ ಹಂಡ ಅವರನ್ನು ಶಿವಾಂಗಿ ವರ್ಮಾ ಕಳೆದ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಸದ್ಯಕ್ಕೆ ವೃತ್ತಿ ಜೀವನದ ಕಡೆ ಗಮನ ಹರಿಸುತ್ತಿರುವ ಕಾರಣದಿಂದ ನಾವು ಇನ್ನು ಕೆಲ ವರ್ಷಗಳ ಕಾಲ ಮದುವೆಯಾಗುವುದಿಲ್ಲ ಎಂದು ಕೂಡ ಶಿವಾಂಗಿ ವರ್ಮಾ ಹೇಳಿದ್ದಾರೆ. ಇನ್ನುಳಿದಂತೆ ಶಿವಾಂಗಿ ವರ್ಮಾ ಮತ್ತು ಗೋವಿಂದ್ ನಾಮ್‌ದೇವ್ ಅಭಿನಯದ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.


Click it and Unblock the Notifications











