ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಬಂದ ಆ ಸುರಸುಂದರಾಂಗಿ ಯಾರು..?

ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಇಬ್ಬರು ದೂರವಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. ಹರಿದಾಡುತ್ತಿರುವ ಈ ಸುದ್ದಿಯಲ್ಲಿನ ಸತ್ಯಾಸತ್ಯತೆ ಅಭಿಷೇಕ್ ಮತ್ತು ಐಶ್ವರ್ಯ ಅವರಿಗೆ ಗೊತ್ತಾದರೂ ಸದ್ಯಕ್ಕೆ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಅಭಿಷೇಕ್ ಬಚ್ಚನ್ ಜೊತೆ ತೆರೆಹಂಚಿಕೊಂಡಿದ್ದ ನಾಯಕಿ ಕಾರಣವೆಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

Did Abhishek Bachchan Have an Affair with This Co-Star Betraying Aishwarya Rai Here s What We Know

ಹೌದು, ಅಸಲಿಗೆ ಅಭಿಷೇಕ್ ಬಚ್ಚನ್ .. 2021ರ ಆಸು ಪಾಸು ಚಿತ್ರವೊಂದನ್ನು ಮಾಡಿದ್ದರು. ಆ ಚಿತ್ರದ ಹೆಸರು ದಸವಿ. ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ನಾಯಕಿಯ ಪಾತ್ರಗಳನ್ನು ನಿರ್ವಹಿಸಿದ್ದರು. ಈ ಚಿತ್ರವೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಸಾರ ಹಾಳು ಮಾಡಿದ್ದು ಅನ್ನುವುದು ಸದ್ಯಕ್ಕೆ ಅನೇಕರ ವಾದ.

ಆ ಪ್ರಕಾರ ನೋಡುವುದಾದರೆ.. ಈ ಚಿತ್ರದ ಸಮಯದಲ್ಲಿ ನಿಮ್ರತ್ ಕೌರ್ ಸೌಂದರ್ಯಕ್ಕೆ ಅಭಿಷೇಕ್ ಬಚ್ಚನ್ ಮನ ಸೋತಿದ್ದರು. ಪ್ರೀತಿಯಲ್ಲಿ ಬಿದ್ದಿದ್ದರು. ಇನ್ನೂ ನಿಮ್ರತ್ ಕೌರ್ ಕೂಡ ಅಭಿಷೇಕ್ ಬಚ್ಚನ್ ಅವರಿಂದ ಅಂತರವನ್ನು ಕಾಪಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಅಭಿಷೇಕ್ ಬಚ್ಚನ್ ಜೊತೆ ತೀರಾ ಸಲುಗೆಯನ್ನು ಬೆಳೆಸಿಕೊಂಡಿದ್ದರು. ಅಭಿಷೇಕ್ ಬಚ್ಚನ್ ಅವರನ್ನು ನಿಮ್ರತ್ ಕೌರ್ ಕೂಡ ಪ್ರೀತಿಸಲು ಶುರು ಮಾಡಿದ್ದರು. ಐಶ್ವರ್ಯ ರೈ ಬೆನ್ನ ಹಿಂದೆ ಇಬ್ಬರು ಮಾಡಬಾರದ್ದನ್ನೆಲ್ಲ ಮಾಡಿದ್ದರು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ವಾ..? ಅಭಿಷೇಕ್ ಬಚ್ಚನ್ ತಮಗೆ ಮೋಸ ಮಾಡುತ್ತಿರುವ ವಿಚಾರ ಐಶ್ವರ್ಯ ರೈ ಅವರಿಗೆ ಗೊತ್ತಾಯಿತು. ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಆತ್ಮೀಯತೆಯಿಂದ ಐಶ್ವರ್ಯ ಹೃದಯ ನುಚ್ಚು ನೂರಾಯಿತು.

Did Abhishek Bachchan Have an Affair with This Co-Star Betraying Aishwarya Rai Here s What We Know

ಆದರೆ ಇದೇ ಸಮಯದಲ್ಲಿ ಅಭಿಷೇಕ್ ಬಚ್ಚನ್ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಹೀಗಾಗಿಯೇ ಮುಂದೆ ಇಟ್ಟಿದ್ದ ಹೆಜ್ಜೆಯನ್ನು ಹಿಂದೆ ತೆಗೆದುಕೊಂಡ ಅಭಿಷೇಕ್ ಬಚ್ಚನ್ ಮರಳಿ ಐಶ್ವರ್ಯ ರೈ ಅವರ ಬಳಿಯೇ ಬಂದರು. ಆದರೆ ಐಶ್ವರ್ಯ ರೈ ಅವರ ಒಡೆದ ಹೃದಯ ಮತ್ತೆ ಮಿಡಿಯಲಿಲ್ಲ. ಈ ಕಾರಣಕ್ಕೆ ಮನೆಯನ್ನು ಖಾಲಿ ಮಾಡಿದ ಐಶ್ವರ್ಯ ರೈ ಸದ್ಯ ತಮ್ಮ ಮಗಳು ಆರಾಧ್ಯ ಮತ್ತು ತಾಯಿಯ ಜೊತೆ ಪ್ರತೈಕವಾಗಿ ವಾಸ ಮಾಡುತ್ತಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಬಳಕೆದಾರರೊಬ್ಬರು ವಿಚಾರವನ್ನು ಹಂಚಿಕೊಂಡಿದ್ಧಾರೆ. ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸದ್ಯಕ್ಕೆ ಈ ವಿಚಾರದ ಕುರಿತು ಐಶ್ವರ್ಯ ರೈ ಆಗಲಿ ಅಭಿಷೇಕ್ ಬಚ್ಚನ್ ಆಗಲಿ ಅಥವಾ ನಿಮ್ರತ್ ಕೌರ್ ಆಗಲಿ ಯಾರು ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. ಸ್ಪಷ್ಟನೆಯನ್ನು ಕೂಡ ನೀಡಿಲ್ಲ. ಹೀಗಾಗಿಯೇ ಅನೇಕರು ಹಬ್ಬಿರುವ ಈ ಸುದ್ದಿ ನಿಜಾ ಎಂದುಕೊಳ್ಳುತ್ತಿದ್ದಾರೆ. ಬೆಂಕಿ ಇರದೇ ಹೊಗೆಯಾಡಲ್ಲ ಎನ್ನುತ್ತಿದ್ದಾರೆ. ದಸವಿ ಚಿತ್ರದ ಪ್ರಚಾರದ ಸಮಯದಲ್ಲಿ ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ನೀಡಿದ ಸಂದರ್ಶನಗಳನ್ನು ಹುಡುಕಿ ತೆಗೆಯುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X