For Quick Alerts
  ALLOW NOTIFICATIONS  
  For Daily Alerts

  'ಚಪಾಕ್' ಸ್ಕ್ರಿಪ್ಟ್ ರಿಜೆಕ್ಟ್ ಮಾಡಿದ್ರಂತೆ ಸ್ಟಾರ್ ನಟಿ, ಯಾರು ಆಕೆ?

  |

  ದೀಪಿಕಾ ಪಡುಕೋಣೆ ನಟಿಸಿರುವ ಚಪಾಕ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದೇ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಆಸಿಡ್ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ ವಾಲ್ ಅವರ ಜೀವನ ಆಧರಿತ ಕಥೆಯಾಗಿದೆ.

  ಈ ಕುರಿತು ಸಿನಿಮಾ ಮಾಡಬೇಕು ಎಂದು 2014ರಲ್ಲೇ ಬರಹಗಾರ ರಾಕೇಶ್ ಭಾರತಿ ನಿರ್ಧರಿಸಿದ್ದರಂತೆ. ಆದರೆ, ನಿರ್ದೇಶಕಿ ಮೇಘನಾ ಗುಲ್ಜರ್ ಅನುಮತಿ ಪಡೆಯದ ಸಿನಿಮಾ ಮಾಡಿದ್ದಾರೆ. ಇದು ನನ್ನದೇ ಕಥೆ ಎಂದು ರಾಕೇಶ್ ಆರೋಪಿಸಿದ್ದಾರೆ.

  ಫಾಕ್ಸ್ ನಿರ್ಮಾಣ ಸಂಸ್ಥೆಯ ಜೊತೆ ಈ ಸಂಬಂಧ ಚರ್ಚೆ ಮಾಡಿ, 'ಬ್ಲಾಕ್ ಡೇ' ಎಂದು ಶೀರ್ಷಿಕೆ ಕೂಡ ನೋಂದಣಿ ಮಾಡಿದ್ದರಂತೆ. ಬಳಿಕ ಕಂಗನಾ ರಣಾವತ್ ಅವರ ಬಳಿ ಈ ಸಿನಿಮಾ ಮಾಡಿ ಎಂದು ಕೇಳಿದರಂತೆ. ಆದರೆ, ಕಂಗನಾ ಸಹೋದರಿ ರಂಗೋಲಿ ''ಭಾವನಾತ್ಮಕವಾಗಿ ಈ ಚಿತ್ರ ಮಾಡಲು ಅವರಿಗೆ ಕಷ್ಟ ಆಗುತ್ತೆ'' ಎಂದು ಹೇಳಿದ್ದರಂತೆ.

  ವಿವಾದದಲ್ಲಿ ದೀಪಿಕಾ ಅಭಿನಯದ ಚಪಾಕ್: ಕೋರ್ಟ್ ಮೆಟ್ಟಿಲೇರಿದ ಬರಹಗಾರ.!ವಿವಾದದಲ್ಲಿ ದೀಪಿಕಾ ಅಭಿನಯದ ಚಪಾಕ್: ಕೋರ್ಟ್ ಮೆಟ್ಟಿಲೇರಿದ ಬರಹಗಾರ.!

  ಬಳಿಕ ಬಾಲಿವುಡ್ ಸ್ಟಾರ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಐಶ್ವರ್ಯ ರೈ ಬಚ್ಚನ್, ಅನುಷ್ಕಾ ಶರ್ಮಾ, ಶ್ರದ್ಧಾ ಕಪೂರ್ ಅವರ ಬಳಿಕಯೂ ಮಾತನಾಡಿದ್ದರಂತೆ. ಆದರೆ ಯಾವುದು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

  ಚಪಾಕ್ ಸಿನಿಮಾ ಬಗ್ಗೆ ಮಾತನಾಡಿದ ರಾಕೇಶ್ 'ಮೇಘನಾ ಗುಲ್ಜಾರ್ ಅವರು ಚಪಾಕ್ ಸಿನಿಮಾ ಘೋಷಣೆ ಮಾಡಿದಾಗ ಅವರಿಗೆ ಮೆಸೆಜ್ ಮಾಡಿದ್ದೆ. ನೀವು ಈ ಸಿನಿಮಾ ಹೇಗೆ ಮಾಡ್ತಿದ್ದೀರಾ? ನಾನು ಶೀರ್ಷಿಕೆ ನೊಂದಣಿ ಮಾಡಿಸಿದ್ದೇನೆ. ನೀವು ಸಿನಿಮಾ ಮಾಡಲೇಬೇಕು ಅಂತ ಇದ್ರೆ ಒಟ್ಟಿಗೆ ಮಾಡೋಣ ಎಂದೆ. ಅದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ'' ಎಂದು ದೂರಿದ್ದಾರೆ.

  ಇದೀಗ, ರಾಕೇಶ್ ಭಾರತಿ ಸಿನಿಮಾ ಬಿಡುಗಡೆಗೊಳಿಸದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯಕ್ಕೆ ಚಪಾಕ್ ಸಿನಿಮಾಗೆ ಯಾವುದೇ ಕಾನೂನಿನ ಸಮಸ್ಯೆ ಇಲ್ಲ. ಈ ಮೊದಲೇ ನಿರ್ಧರಿಸಿದಂತೆ ಜನವರಿ 10 ರಂದು ತೆರೆಗೆ ಬರ್ತಿದೆ.

  English summary
  Did Aishwarya rai bachchan, anushka sharma, priyanka chopra reject Chhapaak script?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X