ಮೋದಿ ಸರ್ಕಾರವನ್ನ ಅಣುಕಿಸಿದ ವಿದ್ಯಾ ಬಾಲನ್ ? ಡರ್ಟಿ ಪಿಕ್ಚರ್ ಬೆಡಗಿ ಮಾಡಿದ್ದೇನು..?

ಆದಾಯ ತೆರಿಗೆ ..ಸಂಪತ್ತು ತೆರಿಗೆ .. ಆಸ್ತಿ ಹಾಗೂ ಬಂಡವಾಳ ಹೂಡಿಕೆ ಮೇಲೆ ಬರುವ ಲಾಭದ ತೆರಿಗೆ.. ಉಡುಗೊರೆ ತೆರಿಗೆ..ಅಬಕಾರಿ ತೆರಿಗೆ.. ಹೊಸ ವಾಹನ ಖರೀದಿಸಿದರೆ ಮೋಟಾರ್ ವಾಹನ ತೆರಿಗೆ.. ಮನೋರಂಜನಾ ತೆರಿಗೆ.. ಹೀಗೆ ಒಂದಾ..ಎರಡಾ.. ದೇಶವನ್ನ ಸಂಪದ್ಭರಿತ ರಾಷ್ಟ್ರವನ್ನಾಗಿಸುವಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳನ್ನ ಕಟ್ಟಿ ಅನೇಕರು ಇಲ್ಲಿಯವರೆಗೆ ಸುಸ್ತಾಗಿದ್ದಾರೆ. ಅರ್ಥಶಾಸ್ತ್ರಜ್ಞರನ್ನೂ ಮೀರಿಸುವಂತೆ ಚರ್ಚೆಗಳನ್ನೂ ಮಾಡಿದ್ದಾರೆ.

ಇನ್ನೂ ತೆರಿಗೆ ಎಂಬ ಶಬ್ದ ಎಲ್ಲ ಕಾಲದಲ್ಲಿಯೂ ಪ್ರಚಲಿತದಲ್ಲಿದೆ. ಕಾಲ ಬದಲಾದಂತೆ ಅದರ ಸ್ವರೂಪ ಬದಲಾಗಿದೆ ಅಷ್ಟೇ. ಉದಾಹರಣೆಗೆ ವೇದಯುಗದ ಕಾಲದಲ್ಲಿ ಭಾರತದ ತೆರಿಗೆಯ ಕಲ್ಪನೆ ಭಿನ್ನವಾಗಿತ್ತು. ಇಂದು ಯಾವುದೆಲ್ಲವನ್ನೂ ಕೆಲವರ ಮೇಲೆ ತೆರಿಗೆಯ ಭಾರ ಹೇರಿ ಉಳಿದವರಿಗೆ ಭಾಗ್ಯವಾಗಿ ಕರುಣಿಸುತ್ತಿದ್ದೇವೆಯೋ ಅವೆಲ್ಲವನ್ನೂ ಅಂದು ದಾನದ ರೂಪದಲ್ಲಿ ನೋಡಲಾಗುತ್ತಿತ್ತು.ಆದರೆ ಈಗ ಹಾಗಿಲ್ಲ. ಬದಲಾದ ಈ ಕಾಲಘಟ್ಟದಲ್ಲಿ ಪ್ರತಿಯೊಂದಕ್ಕೂ ತೆರಿಗೆ ಕಟ್ಟಬೇಕು ಅನ್ನುವ ವಾತಾವರಣ ಇದೆ.

did-bollywood-actress-vidya-balan-mocked-modi-government-over-gst

ಆದರೆ ಈ ವಾತಾವರಣ ಅನೇಕರ ಉಸಿರುಗಟ್ಟಿಸುತ್ತಿದೆ ಅನ್ನುವ ಅಭಿಪ್ರಾಯ ಅನೇಕರಲ್ಲಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವು ಪರೋಕ್ಷ ತೆರಿಗೆಗಳನ್ನು ಬದಲಿಸಲು ಕೇಂದ್ರ ಸರ್ಕಾರ 2017ರಲ್ಲಿ ಜಾರಿಗೆ ತಂದ ಜಿಎಸ್‌ಟಿ ವಿರುದ್ಧ ಅನೇಕರು ಹರಿಹಾಯ್ದಿದ್ದಾರೆ. ಕೇಂದ್ರದ ಆರ್ಥಿಕ ನೀತಿಗಳಿಂದಾಗಿ, ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುವತ್ತ ಸಾಗಿದೆ ಎಂದು ಟೀಕಿಸಿದ್ದಾರೆ.

ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೇಂದ್ರದ ಜಿಎಸ್‌ಟಿಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದಾರೆ. ಸಾವಿರಾರು ಬಾರಿ ಜಿಎಸ್‌ಟಿಯನ್ನ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದಿದ್ದಾರೆ. ಜಿಎಸ್‌ಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅನೇಕ ಬಾರಿ ಕೆಂಡವನ್ನೂ ಕಾರಿದ್ದಾರೆ. ಈ ಸಾಲಿಗೆ ಈಗ ಬಾಲಿವುಡ್‌ನ ಫೇಮಸ್ ಹೀರೋಯಿನ್ ವಿದ್ಯಾ ಬಾಲನ್ ಕೂಡ ಸೇರಿಕೊಂಡಿದ್ದಾರಾ ಗೊತ್ತಿಲ್ಲ. ಆದರೆ ಅನೇಕರಿಗೆ ಈ ಅನುಮಾನವಂತೂ ಕಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಅದೊಂದು ವಿಡಿಯೋ

did-bollywood-actress-vidya-balan-mocked-modi-government-over-gst

ಹೌದು.. ವಿದ್ಯಾ ಬಾಲನ್ ವಿಡಿಯೋವೊಂದನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವಿದ್ಯಾಗೆ ಕರೆ ಮಾಡುವ ವ್ಯಕ್ತಿಯೊಬ್ಬ ಸತ್ಯ ಹೇಳು, ನೀನು ನನ್ನನ್ನು ಎಷ್ಟು ಪರ್ಸೆಂಟೇಜ್ ಪ್ರೀತಿಸುತ್ತೀಯ? ಎಂದು ಪ್ರಶ್ನೆಯನ್ನು ಮಾಡುತ್ತಾನೆ. ಇದಕ್ಕೆ ಉತ್ತರ ನೀಡುವ ವಿದ್ಯಾ ಬಾಲನ್ ಶೇಕಡಾ 72 ಪ್ರತಿಶತ ಎಂದು ಹೇಳುತ್ತಾರೆ.

ಆ ನಂತರ ಪ್ರೇಮ ಪರೀಕ್ಷೆಯಲ್ಲಿ 100ಕ್ಕೆ ಕೇವಲ 72 ಅಂಕ ಪಡೆದ ವ್ಯಕ್ತಿ ವಿಚಲಿತಗೊಂಡಂತೆ ಕೇವಲ 72 % ಮಾತ್ರ ಯಾಕೆ ಎಂಬ ಪ್ರಶ್ನೆ ಕೇಳುತ್ತಾನೆ. ಈ ಪ್ರಶ್ನೆಗೆ ಸ್ವಲ್ಪ ಯೋಚಿಸುವ ವಿದ್ಯಾ ಬಾಲನ್ ಶೇ.28ರಷ್ಟು ಜಿಎಸ್ ಟಿ ಎನ್ನುತ್ತಾರೆ.

ವಿದ್ಯಾ ಬಾಲನ್ ಅವರ ಈ ಶೇಕಡಾ 28 % ಮಾತು ಸದ್ಯಕ್ಕೆ ಸಿಕ್ಕಾಪಟ್ಟೆ ಚರ್ಚೆಗೀಡಾಗ್ತಿದೆ. ಇನ್ನೂ ಬಹುತೇಕರಿಗೆ ತಿಳಿದಿರುವಂತೆ ಜಿಎಸ್‌ಟಿಯು ಶೇ. 5, 12, 18 ಮತ್ತು ಶೇ. 28ರ ನಾಲ್ಕು ಸ್ಲ್ಯಾಬ್‌ಗಳನ್ನು ಹೊಂದಿದೆ. ವಿಶೇಷ ಅಂದರೆ ಜಿಎಸ್‌ಟಿ ಬಗ್ಗೆ ಮಾತನಾಡಿರುವ ವಿದ್ಯಾ ಬಾಲನ್ ಈ ಸ್ಲ್ಯಾಬ್‌ಗಳನ್ನೇ ತಮ್ಮ ವಿಡಿಯೋಗೆ ಶೀರ್ಷಿಕೆಯನ್ನಾಗಿ ನೀಡಿದ್ದಾರೆ.

ಈ ಕಾರಣಕ್ಕೆ ಬೇಕು ಬೇಕೆಂದೇ ವಿದ್ಯಾ ಬಾಲನ್ ಜಿಎಸ್‌ಟಿಯ ಬಗ್ಗೆ ವಿಡಿಯೋ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನ ತೆಗಳಲೆಂದೇ ವಿದ್ಯಾ ಬಾಲನ್ ಈ ತರಹದ ವಿಡಿಯೋ ಮಾಡಿದ್ದಾರೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಇನ್ನೂ ಬಹುತೇಕರು ಸಾಮಾಜಿಕ ಜಾಲತಾಣದ ಸಹಾಯದ ಮೂಲಕ ವಿದ್ಯಾ ಬಾಲನ್ ಮೇಲೆ ಮುಗಿ ಬಿದ್ದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಸಾಧನೆಯನ್ನ ವಿವರಿಸಿ, ವಿದ್ಯಾ ಬಾಲನ್ ಅವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ನೋಡಲು ಸಿಕ್ಕಾಪಟ್ಟೆ ತಮಾಷೆಯಾಗಿರುವ ಈ ವಿಡಿಯೋವನ್ನ ಅನೇಕರು ಗಂಭೀರವಾಗಿ ತೆಗೆದುಕೊಂಡಿದ್ಧಾರೆ. ವಿದ್ಯಾ ಬಾಲನ್ ಅವರ ಈ 72 + 28 = 100 ಎಂಬ ಪ್ರೇಮ ಪಾಠದ ಬಗ್ಗೆ ಚಕಾರ ಎತ್ತುತ್ತಿದ್ದಾರೆ. ಇಷ್ಟೇ ಯಾಕೆ.. ವಿದ್ಯಾ ಬಾಲನ್ ಅವರ ದೇಶಭಕ್ತಿಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ನಿಮ್ಮ ದೇಶಪ್ರೇಮವನ್ನ ಸಾಬೀತು ಮಾಡಿ ಎಂಬ ಸವಾಲನ್ನೂ ಹಾಕುತ್ತಿದ್ದಾರೆ. ಇನ್ನೂ.. ಇದೆಲ್ಲದರ ನಡುವೆ ಸದ್ಯದಲ್ಲಿಯೇ ಈ ವಿಡಿಯೋ ರಾಜಕೀಯದ ಪಡಸಾಲೆಯಲ್ಲಿಯೂ ಸದ್ದು ಮಾಡುವ ಲಕ್ಷಣಗಳು ಕೂಡ ದಟ್ಟವಾಗಿ ಕಂಡು ಬರುತ್ತಿವೆ.

More from Filmibeat

English summary
In The Recent Video Which Went Viral On Social Media Showcases Bollywood Actress Vidya Balan Taking Dig At Modi Government Over GST. Did Actress Did It Intentionally..?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X