For Quick Alerts
  ALLOW NOTIFICATIONS  
  For Daily Alerts

  ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?

  |
  ದರ್ಶನ್ ನಾಯಕಿ ಹಾರ್ದಿಕ್ ಪಾಂಡ್ಯ ಮುಂದಿಟ್ಟ ಬೇಡಿಕೆ ಏನು? | Oneindia Kannada

  ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಾಲಿವುಡ್ ನಟಿಯರ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಇಶಾ ಗುಪ್ತಾ, ಎಲ್ಲಿ ಅವ್ರಾಮ್ ನಂತರ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ ಜೊತೆಯೂ ಹಾರ್ದಿಕ್ ಪಾಂಡ್ಯ ಹೆಸರು ಅಂಟಿಕೊಂಡಿತ್ತು.

  ಆ ವಿಷ್ಯ ತಿಳಿಯುವ ಮುನ್ನ ಈಗ ಇನ್ನೊಂದು ವಿಷ್ಯವನ್ನ ತಿಳಿಯಬೇಕಿದೆ. ಸದ್ಯ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಆಡುತ್ತಿರುವ ಹಾರ್ದಿಕ್ ಪಾಂಡ್ಯಗೆ ನಟಿ ಊರ್ವಶಿ ಒಂದು ಕೋರಿಕೆ ಇಟ್ಟಿದ್ದರಂತೆ.

  ಅವಳ್ ಬಿಟ್ಟು, ಇವಳ್ ಬಿಟ್ಟು ಇನ್ನೊಬ್ಬಳ ಜೊತೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.!ಅವಳ್ ಬಿಟ್ಟು, ಇವಳ್ ಬಿಟ್ಟು ಇನ್ನೊಬ್ಬಳ ಜೊತೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.!

  ಆದರೆ, ಊರ್ವಶಿಯ ಕೋರಿಕೆಯನ್ನ ಸಿರೀಯಸ್ ಆಗಿ ತೆಗೆದುಕೊಳ್ಳದ ಹಾರ್ದಿಕ್ ಪಾಂಡ್ಯ ನಯವಾಗಿ ಊರ್ವಶಿ ಬೇಡಿಕೆಯನ್ನ ತಿರಸ್ಕರಿಸಿದರಂತೆ. ಇದೀಗ, ಈ ವಿಷ್ಯ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ, ಊರ್ವಶಿ ಕೋರಿಕೆ ಏನಾಗಿತ್ತು? ಮುಂದೆ ಓದಿ...

  ಭಾರತ-ಪಾಕ್ ಪಂದ್ಯ ಟಿಕೆಟ್ ಕೇಳಿದ್ದರಂತೆ.!

  ಭಾರತ-ಪಾಕ್ ಪಂದ್ಯ ಟಿಕೆಟ್ ಕೇಳಿದ್ದರಂತೆ.!

  ಜೂನ್ 16 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆದಿತ್ತು. ಬದ್ಧ ವೈರಿ ಪಾಕಿಸ್ತಾನ ತಂಡವನ್ನ ಭಾರತ ಸೋಲಿಸಿ ವಿಜಯ ಪತಾಕೆ ಹಾರಿಸಿತ್ತು. ರಣ್ವೀರ್ ಸಿಂಗ್, ಸೈಫ್ ಅಲಿ ಖಾನ್, ಶಿಬಾನಿ ದಾಂಡೇಕರ್ ಪಂದ್ಯ ನೋಡಲು ಹೋಗಿದ್ದರು. ಇದೀಗ, ಚರ್ಚೆ ಆಗ್ತಿರುವ ವಿಷ್ಯ ಏನಪ್ಪಾ ಅಂದ್ರೆ ಹಾರ್ದಿಕ್ ಪಾಂಡ್ಯ ಬಳಿ ನಟಿ ಊರ್ವಶಿ ರೌಟೇಲಾ ಇಂಡೋ-ಪಾಕ್ ಪಂದ್ಯ ವೀಕ್ಷಿಸಲು ಎರಡು ಪಾಸ್ ಕೇಳಿದ್ದರಂತೆ.

  ಪದೇ ಪದೇ ಕೇಳಿ ಹಾರ್ದಿಕ್ ಗೆ ಕಾಡಿದ್ದರಂತೆ

  ಪದೇ ಪದೇ ಕೇಳಿ ಹಾರ್ದಿಕ್ ಗೆ ಕಾಡಿದ್ದರಂತೆ

  ನಟಿ ಊರ್ವಶಿ ಮತ್ತು ಅವರ ತಾಯಿಗಾಗಿ ಎರಡು ಪಾಸ್ ಕೊಡಿಸು ಎಂದು ಹಾರ್ದಿಕ್ ಪಾಂಡ್ಯಗೆ ಕೇಳಿದ್ದರಂತೆ. ಪದೇ ಪದೇ ಮೆಸೆಜ್ ಮಾಡಿ ಒತ್ತಾಯಿಸಿದ್ದರಂತೆ. ಆದರೆ, ಆ ಕಡೆ ಪಂದ್ಯಕ್ಕಾಗಿ ತಯಾರಾಗುತ್ತಿದ್ದ ಹಾರ್ದಿಕ್, ಊರ್ವಶಿ ಮೆಸೆಜ್ ಗೆ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಈಗ ಸದ್ದು ಮಾಡ್ತಿದೆ.

  ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಇಶಾ ಗುಪ್ತ ಮದುವೆ.! ಹೌದೇನು.?ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಇಶಾ ಗುಪ್ತ ಮದುವೆ.! ಹೌದೇನು.?

  ಇದೆಲ್ಲ ಸುಳ್ಳು ಎಂದ ನಟಿ

  ಇದೆಲ್ಲ ಸುಳ್ಳು ಎಂದ ನಟಿ

  ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಊರ್ವಶಿ, ''ಇದೆಲ್ಲ ಸುಳ್ಳು. ನಾನು ಯಾರನ್ನ ಪಾಸ್ ಕೇಳಿಲ್ಲ. ಲಂಡನ್ ನಲ್ಲಿ ನನ್ನ ಹೊಸ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದಕ್ಕಾಗಿ ಹೋಗಿದ್ದೆ. ನನಗೆ ಮ್ಯಾಚ್ ನೋಡಲು ಸಮಯವಿರಲಿಲ್ಲ. ಲಂಡನ್ ನಿಂದ ಮ್ಯಾಂಚೆಸ್ಟರ್ ದೂರ. ನಮ್ಮ ಹಳೇ ಪಿ.ಆರ್ ಹೇಳುವ ಯಾವ ವಿಷ್ಯವನ್ನ ನಂಬಬೇಡಿ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ಕೊಹ್ಲಿಯನ್ನ ತಬ್ಬಿಕೊಂಡ ನಟಿ ಊರ್ವಶಿ: ನಿನ್ನ ಅನುಷ್ಕಾ ಸಾಯಿಸ್ತಾಳೆ.!ಕೊಹ್ಲಿಯನ್ನ ತಬ್ಬಿಕೊಂಡ ನಟಿ ಊರ್ವಶಿ: ನಿನ್ನ ಅನುಷ್ಕಾ ಸಾಯಿಸ್ತಾಳೆ.!

  ಡೇಟಿಂಗ್ ಮಾಡ್ತಿದ್ರಂತೆ.!

  ಡೇಟಿಂಗ್ ಮಾಡ್ತಿದ್ರಂತೆ.!

  ಈ ಹಿಂದೆ ಊರ್ವಶಿ ರೌಟೇಲಾ ಮತ್ತು ಹಾರ್ದಿಕ್ ಪಾಂಡ್ಯ ಡೇಟ್ ಮಾಡ್ತಿದ್ರು ಎಂಬ ಸುದ್ದಿಯೂ ಇದೆ. ಹೀಗಾಗಿ, ಹಾರ್ದಿಕ್ ಬಳಿ ಭಾರತ-ಪಾಕ್ ಪಂದ್ಯ ನೋಡಲು ಪಾಸ್ ಕೇಳಿರಬಹುದು ಎಂಬ ಮಾತಿದೆ. ಆದರೆ, ಈ ಬಗ್ಗೆ ಊರ್ವಶಿ ಮಾಹಿತಿ ನೀಡಿದ್ದು, ಇದರಲ್ಲಿ ಸತ್ಯವಿಲ್ಲ ಎಂದಿದ್ದಾರೆ. ಅಲ್ಲಿಗೆ ಈ ಸುದ್ದಿ ಕೇವಲ ಗಾಸಿಪ್ ಅಷ್ಟೇ.

  English summary
  Did indian cricketer hardik pandya rejects bollywood actress urvashi rautela request. really she asked passes for india vs pakistan world cup 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X