For Quick Alerts
  ALLOW NOTIFICATIONS  
  For Daily Alerts

  ಕರಣ್, ಶಾರುಖ್ ಬಳಿಕ ಮತ್ತೊಂದು ಸಿನಿಮಾದಿಂದ ಕಾರ್ತಿಕ್ ಔಟ್: ನಿರ್ದೇಶಕನ ಪ್ರತಿಕ್ರಿಯೆ

  |

  ಬಾಲಿವುಡ್‌ನ ಖ್ಯಾತ ನಟ ಕಾರ್ತಿಕ್ ಆರ್ಯನ್ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕರಣ್ ಜೋಹರ್ ನಿರ್ಮಾಣದ ದೋಸ್ತಾನ-2 ಚಿತ್ರದಿಂದ ಔಟ್ ಆದ ಬಳಿಕ ಕಾರ್ತಿಕ್ ಜೊತೆ ಕೆಲಸ ಮಾಡಲು ಅನೇಕ ನಿರ್ಮಾಣ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

  ಕರಣ್ ಜೋಹರ್ ಸಿನಿಮಾ ಬಳಿಕ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್‌ನಲ್ಲಿ ಮೂಡಿಬರುತ್ತಿದ್ದ ಫ್ರಡ್ಡಿ ಚಿತ್ರದಿಂದಲೂ ಕಾರ್ತಿಕ್ ನನ್ನು ದೂರ ಇಡಲಾಯಿತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸಿನಿಮಾದಿಂದನೂ ಔಟ್ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶನದ ಚಿತ್ರದಿಂದ ಕಾರ್ತಿಕ್‌ನನ್ನು ಹೊರ ಹಾಕಲಾಗಿದೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ.

  ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?

  ಕಾರ್ತಿಕ್ ಆರ್ಯನ್ ಬಗ್ಗೆ ಬ್ಯಾಕ್ ಟು ಬ್ಯಾಕ್ ಈ ರೀತಿಯ ಸುದ್ದಿ ಕೇಳಿ ಬರುವುದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸುದ್ದಿ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ಆನಂದ್ ಎಲ್ ರಾಯ್ ಆಂಗ್ಲ ವೆಬ್ ಪೋರ್ಟಲ್‌ಗೆ ಪ್ರತಿಕ್ರಿಯೆ ನೀಡಿರುವ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

  'ಕಾರ್ತಿಕ್ ನಮ್ಮ ಸಂಸ್ಥೆಯ ಯಾವುದೇ ಸಿನಿಮಾಗೂ ಸಹಿ ಮಾಡಿಲ್ಲ. ಇದು ಆಧಾರ ರಹಿತ ಸುದ್ದಿ' ಎಂದು ಹೇಳಿದ್ದಾರೆ. ನನ್ನನ್ನು ಭೇಟಿಯಾಗಲು ಅನೇಕ ನಟರು ಬರುತ್ತಾರೆ. ಹಾಗಂತ ಅವರು ನಮ್ಮ ಸಿನಿಮಾಗೆ ಸಹಿ ಮಾಡಿದ್ದಾರೆ ಅರ್ಥವಲ್ಲ' ಎಂದಿದ್ದಾರೆ. ಇತ್ತೀಚಿಗೆ ಕಾರ್ತಿಕ್ ಆರ್ಯನ್, ಆನಂದ್ ಎಲ್ ರಾಯ್ ಅವರ ಕಚೇರಿಯ ಮುಂಭಾಗದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು.

  ಅಂದಹಾಗೆ ಕಾರ್ತಿಕ್ ಮತ್ತ ಆನಂದ್ ಇಬ್ಬರು ತಮಿಳಿನ ರೊಮ್ಯಾಂಟಿಕ್ ಚಿತ್ರ 'ಕಲ್ಯಾಣ ಸಮಯಲ್ ಸಾದಂ' ಚಿತ್ರವನ್ನು ರಿಮೇಕ್ ಮಾಡಲು ಸಿದ್ಧರಾಗಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಆದರೀಗ ನಿರ್ದೇಶಕ ಆನಂದ್ ಎಲ್ ರಾಯ್ ಈ ವದಂತಿಯನ್ನು ತಳ್ಳಿಹಾಕಿದ್ದಾರೆ.

  ಸೃಜನಶೀಲ ಭಿನ್ನಾಭಿಪ್ರಾಯ ಎನ್ನುವ ಕಾರಣ ನೀಡಿ ಕರಣ್ ಜೋಹರ್ ನಿರ್ಮಾಣದ ಧರ್ಮ ಸಂಸ್ಥೆ ಕಾರ್ತಿಕ್‌ನನ್ನು ಹೊರ ಹಾಕಿತ್ತು. ರೆಡ್ ಚಿಲ್ಲೀಸ್ ಕೂಜ ಅದೇ ಕಾರಣ ನೀಡುತ್ತಿದೆ. ಆದರೆ ಕಾರ್ತಿಕ್ ಗೆ ವೃತ್ತಿಪರತೆ ಇಲ್ಲ ಎಂದು ಆರೋಪಿಸಿ ಸಿನಿಮಾದಿಂದ ಹೊರಹಾಕಿದ್ದಾರೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಒಂದು ಸಂಸ್ಥೆಯಿಂದ ಹೊರಬಿದ್ದ ಕಾರ್ತಿಕ್ ಜೊತೆ ಕೆಲಸ ಮಾಡಲು ಉಳಿದ ನಿರ್ಮಾಣ ಸಂಸ್ಥೆಗಳು ಹಿಂದೇಟು ಹಾಕಿತ್ತಿವೆಯಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

  Junior NTR ಗಾಗಿ ಪ್ರಶಾಂತ್ ನೀಲ್ ಮಾಡಿದ್ದಾರೆ ಭಯಂಕರ ಕಥೆ | Filmibeat Kannada

  ಸುಶಾಂತ್ ಸಿಂಗ್ ರೀತಿಯಲ್ಲೇ ಕಾರ್ತಿಕ್ ಸಿನಿ ಜೀವನವನ್ನು ಹಾಳು ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾದಿಂದ ಹೊರ ಹಾಕುತ್ತಿದ್ದಂತೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಒಂದೇ ಕಾರಣ ಹೇಳಿ ಕಾರ್ತಿಕ್‌ನನ್ನು ಹಾಕಲಾಗಿದೆ. ಇದನ್ನು ನಂಬಲು ಅಸಾಧ್ಯ, ಇದರ ಹಿಂದೆ ಬೇರೆ ಉದ್ದೇಶವಿದೆ, ಕರಣ್ ಮತ್ತು ಶಾರುಖ್ ಸಂಸ್ಥೆ ಸುಳ್ಳು ಹೇಳುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ.

  English summary
  Did Kartik Aaryan out from Aanand L rai's movie. Anand L Rai reaction about Kartik Aaryan out from his movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X