ಅನುಮಾನವೇ ಬೇಡ ಕತ್ರಿನಾ ಕೈಫ್ ನಿಜಕ್ಕೂ ಗರ್ಭಿಣಿ ಎಂದ ಫ್ಯಾನ್ಸ್ ; ಸಾಕ್ಷಿ ಇಲ್ಲಿದೆ..!

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನಗಳು ಕಳೆಯುತ್ತಿದ್ದಂತೆ ಕೇಳೋ ಪ್ರಶ್ನೆ ಏನಾದ್ರೂ ಗುಡ್ ನ್ಯೂಸು.. ಅಂತಾನೇ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಅತಿಯಾಗಿರುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಕತ್ರಿನಾ ಕೈಫ್.

ಹೌದು, ವಿಕ್ಕಿ ಕೌಶಲ್ ಜೊತೆ ಕತ್ರಿನಾ ಮದುವೆಯಾದ ಮಾರನೇ ದಿನದಿಂದನೇ, ಅನೇಕರಿಗೆ ಕತ್ರಿನಾ ಕೈಫ್ ತಾಯ್ತನದ ಸುಖ ಯಾವತ್ತು ಅನುಭವಿಸುತ್ತಾರೆ ಅನ್ನುವ ಚಿಂತೆ ಶುರುವಾಗಿದೆ. ಈ ಕಾರಣಕ್ಕೆ ಕಾಲ .. ಕಾಲಕ್ಕೆ .. ಸಾಮಾಜಿಕ ಜಾಲತಾಣದಲ್ಲಿ ನೀವು ಗರ್ಭಿಣಿನಾ ಎಂದು ಕೇಳ್ತಿರುವ ಅನೇಕರು, ಮೊನ್ನೆ ವಿಕ್ಕಿ ಜೊತೆ ಕ್ಯಾಟ್ ಲಂಡನ್ ಫ್ಲೈಟ್ ಹತ್ತಿದ್ದೇ ತಡ.. ಕತ್ರಿನಾ ಕೈಫ್ ಮಗು ಹುಟ್ಟುವುದು ಲಂಡನ್‌ ನಲ್ಲಿಯೇ ಎಂದು ಪುಕಾರು ಹಬ್ಬಿಸಿದರು.

Did Katrina Kaif Unintentionally Reveal a Baby Bump in THIS Video

ಆ ನಂತರ ಲಂಡನ್ ಬೀದಿಯಲ್ಲಿ ಕತ್ರಿನಾ ಮತ್ತು ವಿಕ್ಕಿ ಓಡಾಟವನ್ನೂ ಸೆರೆ ಹಿಡಿದು, ಕತ್ರಿಕಾ ಕೈಫ್ ಹಾವ-ಭಾವ-ನಡಿಗೆ ಮತ್ತು ಉಡುಗೆ ಎಲ್ಲವೂ ಬದಲಾಗಿದೆ, ನೋ ಡೌಟ್.. ಕತ್ರಿಕಾ ಕೈಫ್ ಗರ್ಭಿಣಿ ಎಂದರು. ಈಗ ಸಾಕ್ಷಿಗೆ ಇನ್ನೊಂದು ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ಹೆಕ್ಕಿ ತೆಗೆದಿದ್ದಾರೆ. ನಮಗೆ ಕಂಡಂತೆ ನಿಮಗೆಲ್ಲರಿಗೂ ಬೇಬಿ ಬಂಪ್ ಕಾಣಿಸುತ್ತಿದೆಯಾ ಎಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಹೌದು, ಕತ್ರಿನಾ ಕೈಫ್ ಪ್ರೆಗ್ನೆನ್ಸಿ ವಿಚಾರವನ್ನ ತುಂಬಾನೇ ಮನಸಿಗೆ ಹಚ್ಚಿಕೊಂಡಿರುವ ಕೆಲವರು, ಕತ್ರಿನಾ ಕೈಫ್ ಅವರ ಹಳೆಯ ಫೋಟೋಗಳ ಮೇಲೆ ಕಣ್ಣಾಡಿಸಿದ್ದಾರೆ. ಆ ಪೈಕಿ ಏಪ್ರಿಲ್ ಹತ್ತೊಂಬತ್ತರಂದು ಕ್ಯಾಟ್ ಹಂಚಿಕೊಂಡ ವಿಡಿಯೋವೊಂದು ಇವರ ಕಣ್ಣಿಗೆ ಬಿದ್ದಿದೆ. ಪ್ರತಿಷ್ಠಿತ ವಾಚ್ ಬ್ರ್ಯಾಂಡ್ ಸಹಯೋಗದ ವಿಡಿಯೋ ಅದು. ಆ ವಾಚ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕತ್ರಿನಾ ಈ ವಿಡಿಯೋ ಮೂಲಕ ಅದರ ಪ್ರಚಾರವನ್ನ ಮಾಡಿದ್ದಾರೆ. ವಾಚ್ ಫ್ಯಾಕ್ಟರಿಯಲ್ಲಿ ಎಲ್ಲ ಓಡಾಡಿದ್ದಾರೆ.

Did Katrina Kaif Unintentionally Reveal a Baby Bump in THIS Video

ಆದರೆ ..ವಿಡಿಯೋದಲ್ಲಿ ಬಹುತೇಕ ಕಡೆ ಕತ್ರಿನಾ ಅವರ ಮುಖ ಮಾತ್ರ ಕಾಣಿಸಿದೆ. ಪೂರ್ತಿ ದೇಹವಲ್ಲ. ಇನ್ನೂ ಅಲ್ಲಲ್ಲಿ ವೈಡ್ ಆಂಗಲ್ ಗಳಿವೆ. ಈ ವೈಡ್ ಆಂಗಲ್‌ಗಳಲ್ಲಿ ಕತ್ರಿನಾ ಕೈಫ್ ಅವರ ಬೇಬಿ ಬಂಪ್ ಕಾಣಿಸುತ್ತಿದೆ ಎಂಬ ವಾದವನ್ನ ಸದ್ಯಕ್ಕೆ ಅನೇಕರು ಮಾಡುತ್ತಿದ್ದಾರೆ. ಮ್ಯಾಮ್ ನೀವು ನಿಜಕ್ಕೂ ಗರ್ಭಿಣಿನಾ ಎಂಬ ಪ್ರಶ್ನೆಯನ್ನ ಕಮೆಂಟ್ ಮೂಲಕ ಈಗ ಕೇಳುತ್ತಿದ್ದಾರೆ. ಕತ್ರಿನಾ ಕೈಫ್ ಗರ್ಭಿಣಿ ಅನ್ನುವುದರಲ್ಲಿ ಅನುಮಾನವೇ ಬೇಡ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಒಂದು ತಿಂಗಳ ಹಿಂದಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Did Katrina Kaif Unintentionally Reveal a Baby Bump in THIS Video

ಒಟ್ನಲ್ಲಿ ಸದ್ಯಕ್ಕೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಆದಾಗ್ಯೂ, ಕತ್ರಿನಾ ಅವರ ಪ್ರತಿಯೊಂದು ಚಲನ ವಲನದ ಬಗ್ಗೆ ಮಾಧ್ಯಮಕ್ಕೆ ಮಾಹಿತಿಯನ್ನ ನೀಡುವ ರೈನ್‌ಡ್ರಾಪ್ ಸಂಸ್ಥೆ ಈ ಸುದ್ದಿಯನ್ನ ಅಲ್ಲಗೆಳೆದಿದೆ. ದೃಢೀಕರಿಸದ ವರದಿ ಮತ್ತು ಊಹಾಪೋಹಗಳನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ವಿನಂತಿಸಿಕೊಂಡಿದೆ.

More from Filmibeat

English summary
In the video, Katrina was seen promoting a watch brand. She wore a body-hugging green dress paired with a jacket. While the video primarily focused on close-up shots of her, a few wide-angle shots seemingly revealed what some speculate to be her baby bump.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X