ಎದೆಯೆತ್ತರಕ್ಕೆ ಬೆಳೆದ ಮಗ ಇದ್ದರೂ, ತನಗಿಂತ 8 ವರ್ಷ ಚಿಕ್ಕವನ ಜೊತೆ ಎರಡನೇ ಮದ್ವೆಗೆ ರೆಡಿಯಾದ ಖ್ಯಾತ ನಟಿ..?
ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಆದರೆ .. ಇದು ಬಣ್ಣದ ಲೋಕ. ಇಲ್ಲಿ.. ಪ್ರೀತಿ ಮೊಳಕೆಯೊಡೆದಷ್ಟೇ ವೇಗವಾಗಿ ಉಸಿರುಗಟ್ಟಿ ಸತ್ತು ಹೋಗುತ್ತದೆ. ಆ ನಂತರ ಅಷ್ಟೇ ಬೇಗ ಇನ್ಯಾರದ್ದೋ ಮೇಲೆ ಮತ್ತೊಮ್ಮೆ ಪ್ರೇಮಾಂಕುರವಾಗುತ್ತೆ.
ಇದಕ್ಕೆ ಕೊಂಕಣಾ ಸೇನ್ ಶರ್ಮಾ ಅವರ ಲವ್ ಸ್ಟೋರಿಯನ್ನು ಅನೇಕರು ಉದಾಹರಣೆಯನ್ನಾಗಿ ಸದ್ಯ ನೀಡಲು ಶುರು ಮಾಡಿದ್ದಾರೆ. ಹೌದು, ಕೊಂಕಣಾ ಸೇನ್ ಶರ್ಮಾ, ತನ್ನ ಅಭಿನಯದಿಂದ ಮನೆ ಮಾತಾದ ಕೃಷ್ಣ ಸುಂದರಿ. ಇವರ ಅಭಿನಯದ ಪೇಜ್ 3 ಇವತ್ತು ಕೂಡ ಹಲವರ ಪಾಲಿನ ಅಚ್ಚು ಮೆಚ್ಚಿನ ಚಿತ್ರ. ಓಂಕಾರ .. ಲೈಫ್ ಇನ್ ಮೆಟ್ರೋ .. ವೇಕ್ ಅಪ್ ಸಿದ್ .. ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಕಾ .. ಹೀಗೆ ಇವರು ಅಭಿನಯಿಸಿರುವ ಜನಪ್ರಿಯ ಚಿತ್ರಗಳ ಲಿಸ್ಟ್ ಬೆಳೆಯುತ್ತಲೇ ಹೋಗುತ್ತೆ.

ಇಂಥಾ ಕೊಂಕಣಾ ಸೇನ್ ಶರ್ಮಾ 2007ರಲ್ಲಿ ಬಾಲಿವುಡ್‌ನ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾದ ರಣ್ವೀರ್ ಶೋರೆ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. 2010ರಲ್ಲಿ ತಮ್ಮ ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ಮದುವೆ ಕೂಡ ಆದರು. ಇಬ್ಬರ ಪ್ರೀತಿಯ ಸಂಕೇತವಾಗಿ ಇಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ.
ಆದರೆ, ಹತ್ತೇ ವರ್ಷ. ಇಬ್ಬರ ಸಂಸಾರದಲ್ಲಿ ಬಿರುಕು ಮೂಡಲು ಶುರುವಾಯ್ತು. 2020ರಲ್ಲಿ ಇಬ್ಬರು ದೂರವಾದರು. ವಿಚ್ಛೇದನ ಪಡೆದರು. ಇಲ್ಲಿಂದ ಅವರ ಅವರ ದಾರಿಯಲ್ಲಿ ನಡೆಯಲು ಇಬ್ಬರು ಶುರು ಮಾಡಿದರು. ಆದರೆ ಈ ದಾರಿಯಲ್ಲಿ ನಡೆದುಕೊಂಡು ಬರುವಾಗ ಕೊಂಕಣಾ ಸೇನ್ ಶರ್ಮಾಗೆ ಮತ್ತೊಮ್ಮೆ ಪ್ರೀತಿಯಾಗಿದೆ ಎನ್ನುವ ಅನುಮಾನ ಹಲವರದ್ದು.
ಅದು ತನಗಿಂತ 08 ವರ್ಷ ಚಿಕ್ಕವನ ಜೊತೆ ಕೊಂಕಣಾ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದಾರೆ ಎನ್ನುವ ವಾದವನ್ನು ಮಾಯಾನಗರಿ ಮುಂಬೈನಲ್ಲಿ ಕಳೆದ ಕೆಲ ದಿನಗಳಿಂದ ಹಲವರು ಮಾಡುತ್ತಿದ್ದಾರೆ. ಹೀಗಿರುವಾಗ ಕೊಂಕಣಾ ಸೇನ್ ಶರ್ಮಾ ತಮಗಿಂತ 8 ವರ್ಷ ಚಿಕ್ಕವನಾಗಿರುವ ವ್ಯಕ್ತಿಯ ಜೊತೆ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಹೌದು, ಹಿಂದಿಯಲ್ಲಿ ಗ್ರಾಮ್ ಚಿಕಿತ್ಸಾಲಯ್ ಎಂಬ ವೆಬ್ ಸರಣಿ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿರುವ ಈ ವೆಬ್ ಸರಣಿಯಲ್ಲಿ ಅಮೋಲ್ ಪರಾಶರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೇ ಅಮೋಲ್ ಜೊತೆ ಕೊಂಕಣಾ ಸೇನ್ ಶರ್ಮಾ ಹೆಸರು ತಳುಕು ಹಾಕಿಕೊಂಡಿದ್ದು ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಅಮೋಲ್ ಪರಾಶರ್ ಜೊತೆ ಕೊಂಕಣಾ ಸೇನ್ ಶರ್ಮಾ ಕಾಣಿಸಿಕೊಂಡಿದ್ಧಾರೆ. ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಇಬ್ಬರ ನಡುವಿನ ಆತ್ಮೀಯತೆ ಕಂಡು ಇಬ್ಬರ ನಡುವೆ ಪ್ರೇಮಾಂಕುರವಾಗಿರುವುದು ನಿಜಾ ಎಂದು ಸದ್ಯ ಅನೇಕರು ಅಂದುಕೊಂಡಿದ್ದಾರೆ. ಇಬ್ಬರ ಬಗ್ಗೆ ಮಾತನಾಡುತ್ತಿದ್ದಾರೆ.
ಅಂದ್ಹಾಗೇ 2019ರಲ್ಲಿ ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಡಾಲಿ ಕಿಟ್ಟಿ ಔರ್ ವೋ ಚಮಕ್ತೇ ಸಿತಾರೆ ಚಿತ್ರದಲ್ಲಿ ಅಮೋಲ್ ಮತ್ತು ಕೊಂಕಣಾ ಸೇನ್ ಶರ್ಮಾ ಜೊತೆಯಾಗಿ ಕೆಲಸ ಮಾಡಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು ಆ ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದರು ಎನ್ನುವ ಮಾತು ಹಿಂದೆಯಿಂದ ಕೇಳಿ ಬರುತ್ತಲೇ ಇದೆ. ತಮ್ಮ ಈ ಸಂಬಂಧದ ಬಗ್ಗೆ ಇಬ್ಬರು ಅಧಿಕೃತವಾಗಿ ಮಾತನಾಡದೇ ಇದ್ದರೂ ಕೂಡ ಇಬ್ಬರ ಮೇಲೆ ಹಲವರ ಕಣ್ಣು ಸದ್ಯಕ್ಕೆ ಇದೆ.


Click it and Unblock the Notifications











