'ಸಂಜು' ಚಿತ್ರದಲ್ಲಿನ ಸೀನ್ ಡಿಲೀಟ್ ಮಾಡುವಂತೆ ಒತ್ತಾಯ ಮಾಡಿದ್ರಾ ಮಾಧುರಿ.?
ಬಾಲಿವುಡ್ ನಟ ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ನಡುವೆ ಅಫೇರ್ ಇತ್ತು ಎಂಬ ಸಂಗತಿ ಗುಟ್ಟಾಗಿ ಉಳಿದಿಲ್ಲ. ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಜಯ್ ದತ್ ಅರೆಸ್ಟ್ ಆದ್ಮೇಲೆ, ಇಬ್ಬರ ಸಂಬಂಧ ಮುರಿದು ಬಿತ್ತು ಅನ್ನೋದು ಕೂಡ ಎಲ್ಲರಿಗೂ ಗೊತ್ತಿರೋದೇ.
ಆದ್ರೆ, ತಮ್ಮ ಪ್ರೀತಿಯ ಬಗ್ಗೆ ಸಂಜಯ್ ದತ್ ಆಗಲಿ, ಮಾಧುರಿ ದೀಕ್ಷಿತ್ ಆಗಲಿ ಪಬ್ಲಿಕ್ ಗಾಗಿ ಯಾವತ್ತೂ ಒಪ್ಪಿಕೊಂಡಿಲ್ಲ.
ಸದ್ಯ ಸಂಜಯ್ ದತ್ ಜೀವನಚರಿತ್ರೆ ಆಧಾರಿತ 'ಸಂಜು' ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ನಡುವಿನ ಸಂಬಂಧವನ್ನ ಯಾವ ರೀತಿ ತೋರಿಸಲಾಗಿದೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಹೀಗಿರುವಾಗಲೇ, 'ಸಂಜು' ಚಿತ್ರದಲ್ಲಿನ ತಮ್ಮ ಸೀನ್ ಗಳನ್ನು ಡಿಲೀಟ್ ಮಾಡಿ ಎಂದು ನಿರ್ದೇಶಕರಿಗೆ ನಟಿ ಮಾಧುರಿ ದೀಕ್ಷಿತ್ ಒತ್ತಾಯ ಮಾಡಿದ್ದರು ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದು ನಿಜವೇ.? ಉತ್ತರ ಇಲ್ಲಿದೆ. ಓದಿರಿ...

ಎಲ್ಲೆಲ್ಲೂ ಇದೇ ಗುಸು ಗುಸು.!
'ಸಂಜು' ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಬಗ್ಗೆ ಉಲ್ಲೇಖ ಮಾಡಿಲ್ಲ. ಕೆಲ ಸೀನ್ ಗಳನ್ನು ಮಾಧುರಿ ದೀಕ್ಷಿತ್ ಕೋರಿಕೆ ಮೇಲೆ ಡಿಲೀಟ್ ಮಾಡಲಾಗಿದೆ ಎಂಬ ಗುಸು ಗುಸು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಫೋನ್ ಮಾಡಿದ್ರಂತೆ.!
'ಸಂಜು' ಚಿತ್ರದ ನಿರ್ದೇಶಕ ರಾಜಕುಮಾರ್ ಹಿರಾನಿಗೆ ಫೋನ್ ಮಾಡಿ, ತಮ್ಮ ಉಲ್ಲೇಖ ಇರುವ ಸೀನ್ ಗಳನ್ನು ಡಿಲೀಟ್ ಮಾಡುವಂತೆ ನಟಿ ಮಾಧುರಿ ದೀಕ್ಷಿತ್ ಕೇಳಿಕೊಂಡಿದ್ದರು ಎಂದು ಕೆಲ ವೆಬ್ ತಾಣಗಳು ಹಾಗೂ ಪತ್ರಿಕೆಗಳು ವರದಿ ಮಾಡಿದ್ದವು.

ಇದೆಲ್ಲ ನಿಜವೇ.?
ಈ ಗಾಸಿಪ್ ರಾಜಕುಮಾರ್ ಹಿರಾನಿ ಕಿವಿಗೂ ಬಿದ್ಮೇಲೆ ಸ್ಪಷ್ಟನೆ ಕೊಟ್ಟಿದ್ದಾರೆ. ''ನನಗೆ ಮಾಧುರಿ ದೀಕ್ಷಿತ್ ರಿಂದ ದೂರವಾಣಿ ಕರೆ ಬಂದಿಲ್ಲ. ಇವೆಲ್ಲ ಗಾಳಿಮಾತು ಅಷ್ಟೇ. ನನಗೆ ಮಾಧುರಿ ಫೋನ್ ಮಾಡಿಲ್ಲ, ಕೆಲ ಸೀನ್ ಗಳನ್ನು ಡಿಲೀಟ್ ಮಾಡಿ ಅಂತ ಹೇಳೂ ಇಲ್ಲ. ಇದೆಲ್ಲ ಸುಳ್ಳು'' ಎಂದು ನಿರ್ದೇಶಕ ರಾಜಕುಮಾರ್ ಹಿರಾನಿ ಸ್ಪಷ್ಟ ಪಡಿಸಿದ್ದಾರೆ.

ಸಂಜು-ಮಾಧುರಿ ಫ್ಲ್ಯಾಶ್ ಬ್ಯಾಕ್
ಸಂಜಯ್ ದತ್ ಹಾಗೂ ಮಾಧುರಿ ಲಿಂಕಪ್ ಸುದ್ದಿ ಮೊದಲು ಬ್ರೇಕ್ ಆಗಿದ್ದು 'ಸಾಜನ್' ಚಿತ್ರದ ಚಿತ್ರೀಕರಣದ ವೇಳೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸಂಜಯ್ ದತ್ ಹೇಳಿದ್ದು ಹೀಗೆ - ''ಈ ಸುದ್ದಿ ಬ್ರೇಕ್ ಆದ್ಮೇಲೆ, ನಾನು ಮಾಧುರಿ ಬಳಿ ತೆರಳಿ ಕ್ಷಮೆ ಕೇಳಿದ್ದೆ. ಯಾಕಂದ್ರೆ, ತಮ್ಮ ತಪ್ಪಿಲ್ಲದೆ ಅನವಶ್ಯಕವಾಗಿ ಅವರು ಜನರ ಬಾಯಿಗೆ ಆಹಾರವಾಗಿದ್ದರು''

ಮಾಧುರಿ ಕೊಟ್ಟಿದ್ದ ಪ್ರತಿಕ್ರಿಯೆ ಏನು.?
''ಇಂತಹ ಸುದ್ದಿ ಎಲ್ಲಿಂದ ಬರುತ್ತಿದೆ ಅನ್ನೋದೇ ಗೊತ್ತಾಗುತ್ತಿಲ್ಲ. ಇದಾವುದೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ'' ಎಂದು ಇದೇ ವಿಚಾರವಾಗಿ ನಟಿ ಮಾಧುರಿ ದೀಕ್ಷಿತ್ ಪ್ರತಿಕ್ರಿಯೆ ಕೊಟ್ಟಿದ್ದರು.

ಕರಿಷ್ಮಾ ತನ್ನ ಪಾತ್ರ ಏನು.?
ಈ ಎಲ್ಲದರ ನಡುವೆ 'ಸಂಜು' ಚಿತ್ರದಲ್ಲಿ ಕರಿಷ್ಮಾ ತನ್ನ ಪಾತ್ರದ ಮೇಲೆ ಎಲ್ಲರ ಕಣ್ಣಿದೆ. ಸಿನಿಮಾದಲ್ಲಿ ಕರಿಷ್ಮಾ ತನ್ನ ಮಾಧುರಿಯಾಗಿ ಕಾಣಿಸಿಕೊಳ್ತಾರಾ.? ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


Click it and Unblock the Notifications











