ಸದ್ದಿಲ್ಲದೇ ಅಮೆರಿಕಾದಲ್ಲಿ ಕದ್ದು ಮುಚ್ಚಿ ಮದುವೆಯಾದ ಖ್ಯಾತ ನಾಯಕಿ, ಶಾಕ್ ಆದ ಫ್ಯಾನ್ಸ್..!

ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೇ ಹಿರಿಯರು ಹೇಳಿರುವುದು, ಮದುವೆ ಅನ್ನುವುದು ಒಂದೆರಡು ದಿನದ ಆಟವಲ್ಲ, ಇದು ಜೀವನ ಪೂರ್ತಿಯಾಗಿ ಸಂಗಾತಿ ಜತೆಗೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ.

ಈ ಸಂದರ್ಭವನ್ನು ಅನೇಕರು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿಯೂ ಸೆಲೆಬ್ರಿಟಿಗಳ ಮದುವೆ ಅಂದರೆ ಕಣ್ಣು ಕುಕ್ಕುವಂತೆ ಇರುತ್ತೆ. ಅದ್ದೂರಿತನ ತುಂಬಿರುತ್ತೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಅಲ್ಲೊಬ್ಬರು ಇಲ್ಲೊಬ್ಬರು ಸರಳ ಮದುವೆಯಾಗುತ್ತಾರೆ. ಇನ್ನು ಕೆಲವರು ಯಾವ ಸುಳಿವನ್ನು ನೀಡದೇ ಸದ್ದಿಲ್ಲದೇ ಸಪ್ತಪದಿಯನ್ನು ತುಳಿಯುತ್ತಾರೆ. ನರ್ಗಿಸ್ ಫಕ್ರಿ ಇದಕ್ಕೆ ಸದ್ಯದ ತಾಜಾ ಉದಾಹರಣೆ.

Did Nargis Fakhri secretly marry her longtime beau Tony Beig in LA Pics go viral

ಹೌದು, ನರ್ಗಿಸ್ ಫಖ್ರಿ, ಬಾಲಿವುಡ್‌ನ ಸ್ಟಾರ್. ರಾಕ್ ಸ್ಟಾರ್, ಮೇ ತೇರಾ ಹೀರೊ, ಅಜರ್, ಹೌಸ್‌ಫುಲ್ 3, ಹೀಗೆ ಹಲವು ಚಿತ್ರಗಳ ಮೂಲಕ ಹೆಸರು ಮತ್ತು ಕೀರ್ತಿಯನ್ನು ಗಳಿಸಿದವರು. ಇಂಥಾ ನರ್ಗಿಸ್ ಫಕ್ರಿ ಸದ್ದಿಲ್ಲದೇ ತಮ್ಮ 45ನೇ ಪ್ರಾಯದಲ್ಲಿ ಅಮೆರಿಕಾದಲ್ಲಿ ಮದುವೆಯಾಗಿದ್ದಾರೆ. ನಿಜಾ. ಹರಿದಾಡುತ್ತಿರುವ ಈ ಸುದ್ದಿಯನ್ನು ನರ್ಗಿಸ್ ಫಕ್ರಿ ಖಚಿತ ಪಡಿಸಿಲ್ಲ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮದುವೆಯ ಫೋಟೊಗಳನ್ನು ಹಂಚಿಕೊಂಡಿಲ್ಲ. ಆದರೆ, ಇವರ ಮದುವೆ ಸಮಾರಂಭದ್ದೇ ಎನ್ನಲಾದ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಟೋನಿ ಬಿಯಿಗ್, ನರ್ಗಿಸ್ ಫಕ್ರಿ ಅವರನ್ನು ಮದುವೆಯಾದ ವ್ಯಕ್ತಿ. ಅಮೆರಿಕಾದಲ್ಲಿ ಉದ್ಯಮಿಯಾಗಿದ್ದಾರೆ ಇವರು. ಈ ಹಿನ್ನೆಲೆ ಕಳೆದ ವಾರ ಅಮೆರಿಕಾದಲ್ಲಿಯೇ ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ನರ್ಗಿಸ್ ಫಕ್ರಿ ಮದುವೆಯಾಗಿದ್ದಾರೆ ಎಂಬ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನು ಇವರಿಬ್ಬರದ್ದು ಮೂರು ವರ್ಷಗಳ ಪ್ರೀತಿ. 2021ರಿಂದ ಇಬ್ಬರು ಪ್ರೀತಿಯಲ್ಲಿದ್ದರು. ಈಗ ಮದುವೆಯಾಗುವ ಮೂಲಕ ಹೊಸ ಬದುಕಿಗೆ ಮುನ್ನುಡಿಯನ್ನು ಇಬ್ಬರು ಬರೆದಿದ್ದಾರೆ.

ಇನ್ನು ಮದುವೆಯಾದ ನಂತರ ನರ್ಗಿಸ್ ಫಕ್ರಿ ತಮ್ಮ ಪತಿ ಟೋನಿ ಬಿಯಿಗ್ ಜೊತೆ ಸ್ವಿಜರ್‌ಲ್ಯಾಂಡ್‌ಗೆ ಹನಿಮೂನ್‌ಗೆ ತೆರಳಿದ್ದಾರೆ. ಸ್ವಿಜರ್‌ಲ್ಯಾಂಡ್‌ನಲ್ಲಿ ಇಬ್ಬರು ಮೋಜು-ಮಸ್ತಿ ಮಾಡುತ್ತಿರುವ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿವೆ.

ಅಂದ್ಹಾಗೇ ನರ್ಗಿಸ್ ಫಕ್ರಿ ಅವರ ತಂದೆ ಪಾಕಿಸ್ತಾನದ ಮೂಲದವರು. ತಾಯಿ ಜೆಕ್ ಗಣರಾಜ್ಯದವರು. ನರ್ಗಿಸ್ ಆರು ವರ್ಷದವರಿದ್ದಾಗಲೇ ತಂದೆತಾಯಿ ದೂರವಾಗಿದ್ದರು. ಡಿವೋರ್ಸ್ ಪಡೆದಿದ್ದರು. ಇನ್ನು ನರ್ಗಿಸ್‌ಗೆ ಆಲಿಯಾ ಎಂಬ ತಂಗಿ ಕೂಡ ಇದ್ದು ಮಾಜಿ ಪ್ರಿಯಕರ ಮತ್ತು ಆತನ ಗೆಳತಿಯನ್ನು ಕೊಲೆ ಮಾಡಿದ ಆರೋಪದಡಿ ಆಲಿಯಾ ಕಳೆದ ವರ್ಷ ಅಮೆರಿಕಾದಲ್ಲಿ ಬಂಧನಕ್ಕೊಳಗಾಗಿದ್ದರು.

ಇನ್ನುಳಿದಂತೆ ರಾಕ್ ಸ್ಟಾರ್ ಚಿತ್ರದ ಮೂಲಕ ವೃತ್ತಿ ಜೀವನ ಶುರು ಮಾಡಿದ ನರ್ಗಿಸ್ ಫಕ್ರಿ ಇಲ್ಲಿಯವರೆಗೆ ಹದಿನೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪೈಕಿ ರಾಕ್ ಸ್ಟಾರ್ ಹೊರತು ಪಡಿಸಿದರೆ ಮದ್ರಾಸ್ ಕೆಫೆ ಇವರಿಗೆ ಹೆಸರನ್ನು ತಂದು ಕೊಟ್ಟಿತ್ತು. ಇನ್ನು ಒಂದು ವೆಬ್ ಸಿರೀಸ್‌ನಲ್ಲಿ ಕೂಡ ಕಾಣಿಸಿಕೊಂಡಿರುವ ನರ್ಗಿಸ್ ಹಲವು ಆಲ್ಬಂ ಹಾಡುಗಳಿಗೆ ಕೂಡ ಹೆಜ್ಜೆಯನ್ನು ಹಾಕಿದ್ದಾರೆ. ಇಂಥಾ ಚೆಲುವೆ ಸದ್ಯ ಅಕ್ಷಯ್ ಕುಮಾರ್ ಅಭಿನಯದ ಬಹುತಾರಾಗಣದ ಹೌಸ್‌ಫುಲ್ 5 ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ವರ್ಷ ಈ ಚಿತ್ರ ತೆರೆಗೆ ಬರಲಿದೆ.

Nargis Fakhri is married to her bf Tony Beig
byu/ExtraStudy1399 inBollyBlindsNGossip

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X