For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ, ಸಾರಾ, ಶ್ರದ್ಧ ಕಪೂರ್‌ಗೆ ಕ್ಲೀನ್ ಚಿಟ್?

  |

  ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟಿಯರ ಹೆಸರು ತಳುಕು ಹಾಕಿಕೊಂಡಿದೆ. ಈಗಾಗಲೇ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧ ಕಪೂರ್ ಸೇರಿದಂತೆ ಹಲವರು ನಟಿಯರಿಗೆ ನೋಟಿಸ್ ನೀಡಿ ವಿಚಾರಣೆ ಸಹ ಮಾಡಲಾಗಿದೆ.

  ಎನ್‌ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ನಟಿಯರಿಗೆ ಡ್ರಗ್ಸ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ ಎಂಬ ವಿಷಯ ಚರ್ಚೆಯಾಗುತ್ತಿದೆ. ನಟಿಯರ ವಿಚಾರದಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ, ಹಾಗು ನಟಿಯರು ಸಿಗರೇಟ್ ಸಹ ಸೇವಿಸಿಲ್ಲ ಎಂಬ ಅಚ್ಚರಿ ಹೇಳಿಕೆಗಳು ಇದಕ್ಕೆ ಪೂರಕವಾಗಿದೆ. ಆದ್ರೆ, ಎನ್‌ಸಿಬಿ ಅಧಿಕಾರಿಗಳು ತನಿಖೆಯಲ್ಲಿ ಬಹಿರಂಗವಾಗಿರುವ ವಿಚಾರಗಳೇ ಬೇರೆ ಇದೆ. ಮುಂದೆ ಓದಿ....

  ನಟಿಯರ ಮೊಬೈಲ್ ಎನ್‌ಸಿಬಿ ಕೈಯಲ್ಲಿ, ಹೆಚ್ಚಾದ ಆತಂಕನಟಿಯರ ಮೊಬೈಲ್ ಎನ್‌ಸಿಬಿ ಕೈಯಲ್ಲಿ, ಹೆಚ್ಚಾದ ಆತಂಕ

  ಡ್ರಗ್ಸ್ ಚಾಟ್‌ ಕಥೆ ಏನು?

  ಡ್ರಗ್ಸ್ ಚಾಟ್‌ ಕಥೆ ಏನು?

  ದೀಪಿಕಾ ಪಡುಕೋಣೆ ಮತ್ತು ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಅವರ ನಡುವಿನ ಡ್ರಗ್ಸ್ ಚಾಟ್ ಕುರಿತಂತೆ ಸ್ಪಷ್ಟನೆ ನೀಡಿರುವ ಇಬ್ಬರು, ಸಿಗರೇಟ್ ಬದಲು ವೀಡ್, ಮಾಲ್, ಹ್ಯಾಶ್ ಎಂಬ ಪದಗಳನ್ನು ಬಳಸುತ್ತಿದ್ದೆವು ಎಂದು ಹೇಳಿದ್ದಾರೆ ಎನ್ನಲಾಗಿದೆ. ಕಡಿಮೆ ಗುಣಮಟ್ಟದ ಸಿಗರೆಟ್‌ಗೆ ಮಾಲ್, ಉತ್ತಮ ಗುಣಮಟ್ಟದ ಸಿಗರೇಟ್‌ಗೆ ಹ್ಯಾಶ್ ಮತ್ತು ದಪ್ಪ ಸಿಗರೇಟ್‌ಗೆ ಡೂಬ್ ಎಂದು ಕರೆಯುತ್ತಿದ್ದವು. ಇದೆಲ್ಲವೂ ತಮಾಷೆಗಾಗಿ ಚಾಟ್ ಮಾಡುತ್ತಿದ್ದೆವು ಎಂದು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

  ಪ್ರತ್ಯೇಕವಾಗಿ ವಿಚಾರಣೆ

  ಪ್ರತ್ಯೇಕವಾಗಿ ವಿಚಾರಣೆ

  ದೀಪಿಕಾ ಪಡುಕೋಣೆ ಮತ್ತು ಕರೀಶ್ಮಾ ಪ್ರಕಾಶ್ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಇಬ್ಬರು ಬೇರೆ ಬೇರೆಯಾಗಿ ವಿಚಾರಣೆ ಎದುರಿಸಿದರೂ ಉತ್ತರ ಒಂದೇ ರೀತಿ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ದೀಪಿಕಾ ವಾಟ್ಸಾಪ್ ಚಾಟ್‌ನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಸಿಬಿ ಮತ್ತಷ್ಟು ಮಂದಿಗೆ ನೋಟಿಸ್ ನೀಡುವ ತಯಾರಿಲ್ಲಿದೆಯಂತೆ.

  ಡ್ರಗ್ಸ್ ಪ್ರಕರಣ: NCB ವಿಚಾರಣೆಯಲ್ಲಿ ದೀಪಿಕಾ, ಶ್ರದ್ಧಾ, ಸಾರಾ ಹೇಳಿದ್ದೇನು?ಡ್ರಗ್ಸ್ ಪ್ರಕರಣ: NCB ವಿಚಾರಣೆಯಲ್ಲಿ ದೀಪಿಕಾ, ಶ್ರದ್ಧಾ, ಸಾರಾ ಹೇಳಿದ್ದೇನು?

  ಸುಶಾಂತ್ ಸಾವಿನ ಬಗ್ಗೆ ಮಾಹಿತಿ ಇಲ್ಲ

  ಸುಶಾಂತ್ ಸಾವಿನ ಬಗ್ಗೆ ಮಾಹಿತಿ ಇಲ್ಲ

  ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಹಾಗು ಡ್ರಗ್ಸ್ ಸೇವಿಸುತ್ತಿದ್ದಾರಾ ಎನ್ನುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ನಟಿಯರು, ಆ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ನಿರಾಕರಿಸಿದ್ದಾರಂತೆ. ರಿಯಾ ಚಕ್ರವರ್ತಿ ಬಂಧನ ಆಗಿದೆ. ರಿಯಾ ಹೇಳಿಕೆಯ ನಂತರವೇ ಈ ನಟಿಯರಿಗೆ ನೋಟಿಸ್ ನೀಡಲಾಗಿದೆ ಎನ್ನುವುದು ಗಮನಿಸಬೇಕು.

  ಧಾರವಾಹಿ, ಸಿನಿಮಾಗೂ ಬರೋಕೆ ಮುಂಚೆ ಯಶ್ ಇವರ ಶಿಷ್ಯ ಆಗಿದ್ರು | Filmibeat Kannada
  ಮತ್ತೊಮ್ಮೆ ವಿಚಾರಣೆ ಕರೆಯಬಹುದು

  ಮತ್ತೊಮ್ಮೆ ವಿಚಾರಣೆ ಕರೆಯಬಹುದು

  ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ, ಸಾರಾ, ಶ್ರದ್ಧಾ ಹಾಗೂ ರಕುಲ್ ವಿಚಾರಣೆ ಒಂದು ಹಂತದಲ್ಲಿ ಮುಗಿದಿದೆ. ಸದ್ಯಕ್ಕೆ ಅವರ ಮೊಬೈಲ್ ಹಾಗೂ ವಾಟ್ಸಾಪ್ ಚಾಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅದರ ಮೇಲೆ ತನಿಖೆ ಮಾಡಲಾಗುತ್ತಿದೆ. ಸದ್ಯಕ್ಕೆ ನಟಿಯರಿಗೆ ರಿಲೀಫ್ ಸಿಕ್ಕಿದೆ, ಆದ್ರೆ, ಇನ್ನೊಂದು ಹಂತದಲ್ಲಿ ವಿಚಾರಣೆಗೆ ಕರೆದರೂ ಅಚ್ಚರಿ ಇಲ್ಲ.

  English summary
  Did NCB gives Clean chit to Deepika padukone, sara ali khan drugs, shraddha kapoor in drugs case?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X