ಶ್ರೀಲೀಲಾ ಬೆನ್ನ ಹಿಂದೆ ಬಿದ್ದ ಕಾರ್ತಿಕ್ ಆರ್ಯನ್, ನೀವು ಕಣ್ಣಾಕದ ಹುಡುಗಿ ಯಾರಾದರೂ ಇದ್ದಾರಾ ಎಂದ ನೋರಾ ಫತೇಹಿ..!

ಕೆಲವರು ಪ್ರೀತಿಯಲ್ಲಿ ಬಿದ್ದರೆ ಕೊನೆಯವರೆಗೆ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರಿಯಕರ/ಪ್ರಿಯತಮೆ ಅಪ್ರಾಮಾಣಿಕವಾದರೂ ಕೂಡ ತಾವು ಮಾತ್ರ ತಮ್ಮ ಪ್ರೀತಿಗೆ ಬದ್ಧರಾಗಿರುತ್ತಾರೆ. ಆದರೆ ಇನ್ನೂ ಕೆಲವರು ಪದೇ ಪದೇ ಪ್ರೀತಿಯಲ್ಲಿ ಬೀಳುತ್ತಾರೆ. ಇದಕ್ಕೆ ಕಾರ್ತಿಕ್ ಆರ್ಯನ್ ಸದ್ಯದ ಉದಾಹರಣೆ.

ಹೌದು, ಅಸಲಿಗೆ ಕೆಲ ದಿನಗಳಿಂದ ಬಾಲಿವುಡ್‌ನ ಹೊಸ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ನಿಜ ಜೀವನದಲ್ಲಿ ಕೂಡ ಪ್ರೇಮ ಗೀತೆ ಹಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಡೆ ಕೂಡ ಹಾಗೇ ಇದೆ. ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಕುಣಿದು ಕುಪ್ಪಳಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ.

Did Nora Fatehi recently take a swipe at Kartik Aaryan amid dating rumours with Sreeleela

ಇದು ಸಾಲದು ಎನ್ನುವಂತೆ ಕಾರ್ತಿಕ್ ಆರ್ಯನ್ ಅವರ ತಾಯಿ ಮಾಲಾ ತಿವಾರಿ ಮಾಧ್ಯಮದವರು ನಿಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕು, ಅವರ ಮೇಲೆ ನಿಮಗೆ ಇರುವ ನಿರೀಕ್ಷೆಗಳೇನು ಎಂದು ಕೇಳಿದ ಪ್ರಶ್ನೆಗೆ ನನ್ನ ಮಗನ ಕೈ ಹಿಡಿಯುವ ಹುಡುಗಿ ಒಳ್ಳೆಯ ಡಾಕ್ಟರ್ ಆಗಿರಬೇಕು ಎಂದು ಹೇಳಿದ್ದಾರೆ. ಇದು ನನ್ನ ಬೇಡಿಕೆ ಮಾತ್ರವಲ್ಲ ನಮ್ಮ ಇಡೀ ಕುಟುಂಬದ ಬೇಡಿಕೆ ಕೂಡ ಹೌದು ಎಂದು ಹೇಳಿದ್ದಾರೆ.

ಇನ್ನು ಬಹುತೇಕರಿಗೆ ಗೊತ್ತಿರುವಂತೆ ಶ್ರೀಲೀಲಾ ಕೇವಲ ನಾಯಕಿ ಮಾತ್ರ ಅಲ್ಲ. ಆಕ್ಟಿಂಗ್ ಜೊತೆಯಲ್ಲಿ ಶ್ರೀಲೀಲಾ ಎಂಬಿಬಿಎಸ್ ವ್ಯಾಸಂಗವನ್ನು ಕೂಡ ಮಾಡುತ್ತಿದ್ದಾರೆ. ಹೀಗಾಗಿಯೇ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಸಂಬಂಧದ ಕುರಿತು ಈಗ ಅನೇಕರು ತಲೆ ಕೆಡಿಸಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಅವರ ತಾಯಿ ಶ್ರೀಲೀಲಾ ಅವರನ್ನು ತಲೆಯಲ್ಲಿಟ್ಟುಕೊಂಡೇ ಮಾತನಾಡಿದ್ಧಾರೆ ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ.

ಇದರ ನಡುವೆ ಈಗ ಬಾಲಿವುಡ್‌ನ ಬೆಡಗಿ ನೋರಾ ಫತೇಹಿ ಇಬ್ಬರ ನಡುವೆ ಪ್ರವೇಶಿಸಿದ್ದಾರೆ. ಕಾರ್ತಿಕ್ ಆರ್ಯನ್ ಕಾಲೆಳೆದಿದ್ದಾರೆ. ಆದರೆ ನೋಡುಗರಿಗೆ ಅದು ಬೇಕು ಬೇಕಂತಲೇ ಕಾರ್ತಿಕ್ ಆರ್ಯನ್‌ಗೆ ನೋರಾ ಫತೇಹಿ ತಿರುಗೇಟು ನೀಡಿದಂತೆ ಭಾಸವಾಗುತ್ತಿದೆ.

ಹೌದು, ನೋರಾ ಫತೇಹಿ .. ಯಾರಿಗೆ ತಾನೇ ಗೊತ್ತ್ ಇಲ್ಲ. ಬಾಲಿವುಡ್ ನ ''ರಾಣಿ ಜೇನು''. ವಯ್ಯಾರದಿಂದ ನೋರಾ ಕುಣಿಯುತ್ತಿದ್ದರೆ, ಅನೇಕರು ಕುಂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಚಡಪಡಿಸುತ್ತಾರೆ. ಇವತ್ತು ನೊರಾ ಹೆಸರಿಗೆ ಒಂದು ಬೆಲೆ ಇದೆ. ಇಂಥಾ ನೋರಾ ಮೊನ್ನೆ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಎಲ್ಲರೆದುರು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ವೇದಿಕೆಯ ಮುಂಭಾಗದಲ್ಲಿ ಬಂದು ಕುಂತಿದ್ದರು.

ಇನ್ನು ಈ ಬಾರಿಯ ಐಫಾ ನಿರೂಪಣೆ ಮಾಡಿದ್ದು ಬೇರೆ ಯಾರು ಅಲ್ಲ ಬದಲಿಗೆ ಕರಣ್ ಜೋಹರ್ ಮತ್ತು ಕಾರ್ತಿಕ್ ಆರ್ಯನ್. ನಿರೂಪಣೆ ಮಾಡುತ್ತಾ ತಮಾಷೆ ತಮಾಷೆಯಾಗಿ ಮಾತನಾಡುತ್ತಿದ್ದ ಕರಣ್ ಜೋಹರ್, ನೋರಾ ಫತೇಹಿ ಬಳಿ ಬಂದು ಪ್ರಶ್ನೆ ಕೇಳಿದ್ಧಾರೆ. ನಿಮ್ಮ ಪ್ರಕಾರ ಕಾರ್ತಿಕ್ ಆರ್ಯನ್‌ಗೆ ಯಾರು ಸೂಕ್ತವಾದ ಜೋಡಿ ಎನ್ನುವ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅರೆಕ್ಷಣ ಕೂಡ ಯೋಚನೆ ಮಾಡದ ನೋರಾ ಫತೇಹಿ ನೀವು ಇಲ್ಲಿಯವರೆಗೆ ಡೇಟ್ ಮಾಡದ ಹುಡುಗಿಯರು ಇಂಡಸ್ಟ್ರೀಯಲ್ಲಿ ಯಾರಾದರೂ ಇನ್ನು ಇದ್ದಾರಾ ಎಂದು ಕಾರ್ತಿಕ್ ಆರ್ಯನ್‌ಗೆ ಪ್ರಶ್ನೆಯನ್ನು ಕೇಳಿದ್ದಾರೆ. ನೋರಾ ಅವರ ಈ ಪ್ರಶ್ನೆಯಿಂದ ಅತ್ತ ಕಾರ್ತಿಕ್ ಮುಜುಗರಕ್ಕೊಳಗಾದರೆ ಈ ಕಡೆ ಪ್ರೇಕ್ಷಕರ ಗ್ಯಾಲರಿಯಿಂದ ಶಿಳ್ಳೆ-ಚಪ್ಪಾಳೆಗಳ ಸದ್ದು ಕೇಳಿ ಬಂದಿದೆ. ಆ ನಂತರ ಸಡನ್‌ ಆಗಿ ಎಚ್ಚೆತ್ತುಕೊಳ್ಳುವ ನೋರಾ ಸೂಕ್ತವಾದ ಜೋಡಿ ಯಾರೆಂದು ಕಾರ್ತಿಕ್ ಆರ್ಯನ್ ಅವರಿಗೆ ಕೇಳಬೇಕು ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರ್ತಿಕ್ ಆರ್ಯನ್ ಅವರಿಂದ ಅಂತರ ಕಾಪಾಡಿಕೊಳ್ಳುವಂತೆ ಶ್ರೀಲೀಲಾ ಅವರ ಅಭಿಮಾನಿ ಬಳಗ ಶ್ರೀಲೀಲಾ ಅವರಲ್ಲಿ ಮನವಿಯನ್ನು ಮಾಡುತ್ತಿದೆ.

Nora roasted Kartik 😂
byu/ikeverything2 inBollyBlindsNGossip

ಇನ್ನುಳಿದಂತೆ ಕೆಲ ದಿನಗಳ ಹಿಂದೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಅನೇಕರು ಈ ಸಂಬಂಧ ಹೇಗೆ ಅತ್ಯಲ್ಫ ಅವಧಿಯಲ್ಲಿ ಇಷ್ಟೊಂದು ಬೇರೂರಿದೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಸಂಶೋಧನೆಯನ್ನು ಮಾಡುತ್ತಿದ್ದಾರೆ. ಆ ಪ್ರಕಾರ ನೋಡುವುದಾದರೆ ಕಾರ್ತಿಕ್ ಆರ್ಯನ್ ಸಹೋದರಿ ಕೃತಿಕಾ ಕೂಡ ಶ್ರೀಲೀಲಾ ಓದುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೇ. ಹೀಗಾಗಿ ಕಾರ್ತಿಕ್ ಆರ್ಯನ್ ಸಹೋದರಿ ಶ್ರೀಲೀಲಾಗೆ ಮೊದಲಿಂದ ಪರಿಚಯ. ಹೀಗಾಗಿಯೇ ಶ್ರೀಲೀಲಾ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಾದವನ್ನು ಹಲವರು ಮಾಡುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಅವರ ಪ್ರಚಾರ ಮಾಡುವ ಹೊಣೆ ಹೊತ್ತಿರುವ ಪಿಆರ್‌ಗಳು ಇನ್ನಾದರೂ ಬುದ್ದಿ ಕಲಿಯಿರಿ ಸಾಕು ಎನ್ನುತ್ತಿದ್ದಾರೆ. ಎಷ್ಟು ಅಂತ ಹೀಗೆ ಎಲ್ಲ ನಾಯಕಿಯರ ಜೊತೆ ಕಾರ್ತಿಕ್ ಹೆಸರು ಥಳುಕು ಹಾಕಿ ಪ್ರಚಾರ ಪಡೆಯುತ್ತಿರಾ ಎನ್ನುತ್ತಿದ್ದಾರೆ.

ಮಿಕ್ಕಂತೆ ಕಾರ್ತಿಕ್ ಆರ್ಯನ್ಮತ್ತು ಶ್ರೀಲೀಲಾ ಅಭಿನಯದ ಈ ಚಿತ್ರವನ್ನು ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಅನುರಾಗ್ ಬಸು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲವಾದರೂ ಅನೇಕರು ಆಶಿಕಿ 3 ಎಂದು ನಾಮಕರಣ ಮಾಡಿದರೆ ಸೂಕ್ತವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಇನ್ನು ಹಿಂದೆ ಇದೇ ಚಿತ್ರಕ್ಕೆ ಅನಿಮಲ್‌ ಚಿತ್ರದ ನಾಯಕಿ ತೃಪ್ತಿ ದಿಮ್ರಿಯವರನ್ನು ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆ ನಂತರ ಅದೇನಾಯ್ತೋ ? ತೃಪ್ತಿ ದಿಮ್ರಿ ಈ ಚಿತ್ರದಿಂದ ಹೊರ ಬಂದರು. ತೃಪ್ತಿಯ ಜಾಗಕ್ಕೆ ಈಗ ಶ್ರೀಲೀಲಾ ಬಂದಿದ್ದಾರೆ

ಇನ್ನು ಆಶಿಕಿ ಬಾಲಿವುಡ್‌ನ ಬ್ರ್ಯಾಂಡ್‌ಗಳಲ್ಲೊಂದು. ಆಶಿಕಿ ಮತ್ತು ಆಶಿಕಿ 2 ಇವೆರಡು ಚಿತ್ರಗಳು ಅನೇಕರಿಗೆ ಬಾಲಿವುಡ್‌ನಲ್ಲಿ ಬದುಕನ್ನು ನೀಡಿವೆ. ಇಂತಹ ಬ್ರ್ಯಾಂಡ್ ತಮ್ಮನ್ನು ಹುಡುಕಿಕೊಂಡು ಬಂದ ಹಿನ್ನೆಲೆ ಶ್ರೀಲೀಲಾಗೆ ಸದ್ಯಕ್ಕೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಹ ಅನುಭವಆಶಿಕಿ ಬಾಲಿವುಡ್‌ನ ಬ್ರ್ಯಾಂಡ್‌ಗಳಲ್ಲೊಂದು. ಆಶಿಕಿ ಮತ್ತು ಆಶಿಕಿ 2 ಇವೆರಡು ಚಿತ್ರಗಳು ಅನೇಕರಿಗೆ ಬಾಲಿವುಡ್‌ನಲ್ಲಿ ಬದುಕನ್ನು ನೀಡಿವೆ. ಇಂತಹ ಬ್ರ್ಯಾಂಡ್ ತಮ್ಮನ್ನು ಹುಡುಕಿಕೊಂಡು ಬಂದ ಹಿನ್ನೆಲೆ ಶ್ರೀಲೀಲಾ ಸದ್ಯ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.ಹೀಗಿರುವಾಗ ಈಗ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಹೆಸರು ತಳುಕು ಹಾಕಿಕೊಂಡಿದೆ.

ಈ ಚಿತ್ರವನ್ನು ಹೊರತು ಪಡಿಸಿದರೆ ಸದ್ಯ ಬಾಲಿವುಡ್‌ ಕಡೆ ಮುಖ ಮಾಡಿರುವ ಶ್ರೀಲೀಲಾ ತೆಲುಗಿನ ಮಾಸ್ ಮಾಹಾರಾಜ ರವಿತೇಜಾ ಅಭಿನಯದ 'ಮಾಸ್ ಜಾತರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿತಿನ್ ಜೊತೆ 'ರಾಬಿನ್ ಹುಡ್' ಚಿತ್ರಕ್ಕೆ ಕೂಡ ಶ್ರೀಲೀಲಾ ನಾಯಕಿ. ಈ ಚಿತ್ರಗಳನ್ನು ಹೊರತು ಪಡಿಸಿದರೆ ಶಿವಕಾರ್ತಿಕೇಯನ್ ಅಭಿನಯದ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ಕೂಡ ಶ್ರೀಲೀಲಾ ಪ್ರವೇಶಿಸುತ್ತಿದ್ಧಾರೆ. ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಕೂಡ ಶ್ರೀಲೀಲಾ ನಟಿಸುತ್ತಿದ್ದಾರೆ.

Take a Poll

ಸದ್ಯ ಶ್ರೀಲೀಲಾ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದು ಕನ್ನಡಕ್ಕೆ ಮರಳಿ ಬರುವುದು ಬಹುತೇಕ ಅನುಮಾನ ಎನ್ನುವ ವಾತಾವರಣ ಇದೆ. ರಶ್ಮಿಕಾ ಮಂದಣ್ಣ ಅವರಂತೆ ಇವರು ಕೂಡ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಅಥವಾ ಕನ್ನಡಾಭಿಮಾನದಿಂದ ಮತ್ತೆ ಬಣ್ಣ ಹಚ್ತಾರಾ ಎನ್ನುವುದನ್ನು ನೋಡಬೇಕಿದೆ. ಕಾರ್ತಿಕ್ ಆರ್ಯನ್ ಜೊತೆಗಿನ ಸಂಬಂಧದ ಕುರಿತು ಕೂಡ ಸ್ಪಷ್ಟೀಕರಣ ನೀಡುತ್ತಾರಾ ಎಂಬ ಪ್ರಶ್ನೆಗೆ ಕೂಡ ಉತ್ತರ ಸಿಗಬೇಕಿದೆ.

More from Filmibeat

Read more about: sreeleela filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X