ಶಾರುಖ್ ಖಾನ್ 'ಡಂಕಿ'ಯಲ್ಲಿ ಕುಸ್ತಿ ಸೀನ್: 'ಜವಾನ್' ಸೀನ್ ನೆನಪಾಗಿದ್ದೇಕೆ?
2023ರ ಮೋಸ್ಟ್ ಸಕ್ಸಸ್‌ಪುಲ್ ನಟ ಶಾರುಖ್ ಖಾನ್. ಎರಡು ಬ್ಯಾಕ್ ಟು ಬ್ಯಾಕ್ ಮೆಗಾ ಹಿಟ್ ಸಿನಿಮಾಗಳನ್ನು ನೀಡಿದ ಬಳಿಕ ಮೂರನೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದುವೇ 'ಡಂಕಿ'. ಈಗಾಗಲೇ 'ಡಂಕಿ'ಡ್ರಾಪ್ 1 ಹಾಗೂ 'ಡಂಕಿ' ಡ್ರಾಪ್ 2 ಮೂಲಕ ಸಿನಿಮಾ ಬಗ್ಗೆ ಸಿನಿಪ್ರಿಯರ ಗಮನ ಸೆಳೆದಿದ್ದೂ ಆಗಿದೆ.
ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ 'ಡಂಕಿ'ಯ ಡ್ರಾಪ್ 2 ನಲ್ಲಿರೋ ಒಂದು ಕುಸ್ತಿ ಸೀನ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಶಾರುಖ್ ಖಾನ್ ಅಭಿಮಾನಿಗಳಿಂದ ಹಿಡಿದು ಸಿನಿಮಾ ಆಸಕ್ತಿಗೆ ಈ ಸೀನ್ ವಿಚಿತ್ರವಾಗಿ ಕಂಡಿದೆ. ಕೆಲವರಿಗೆ ಅದು ಕಾಪಿ ಮಾಡಿದ್ದಾರೆ ಅಂತನೂ ಅನಿಸಿದೆ. ಹಾಗಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಆ ಮಟ್ಟಿಗೆ ಚರ್ಚೆಯಲ್ಲಿರೋ 'ಡಂಕಿ' ಸಿನಿಮಾದ ಸೀನ್ ಯಾವುದು? ಯಾಕಿಷ್ಟು ಚರ್ಚೆ ತಿಳಿಯಲು ಮುಂದೆ ಓದಿ.

ಬಾಲಿವುಡ್‌ನಲ್ಲಿ 'ಡಂಕಿ' ಕ್ರೇಜ್ ಜೋರಾಗಿದೆ. ಅದಕ್ಕೆ ಕಾರಣ ಇಬ್ಬರು. ಇಬ್ಬರು ಕಿಂಗ್ ಖಾನ್. ಮತ್ತೊಬ್ಬರು ರಾಜ್‌ಕುಮಾರ್ ಹಿರಾನಿ. ಇವರಿಬ್ಬರ ಮೊದಲ ಕಾಂಬಿನೇಷನ್ ಸಿನಿಮಾವಿದು. ಈ ಕಾರಣಕ್ಕೆ 'ಡಂಕಿ' ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡುತ್ತೆ ಅಂತ ಕಾನ್ಫಿಡೆಂಟ್ ಆಗಿ ಬಾಲಿವುಡ್ ಮಂದಿ ಹೇಳುತ್ತಿದ್ದಾರೆ. ಈ ಮಧ್ಯೆ ರಾಜ್‌ಕುಮಾರ್ ಹಿರಾನಿ 'ಜವಾನ್' ಸೀನ್ ಕದ್ರಾ? ಅನ್ನೋ ಚರ್ಚೆ ಕೂಡ ಆಗುತ್ತಿದೆ.
ಇತ್ತೀಚೆಗಷ್ಟೇ 'ಡಂಕಿ' ಸಿನಿಮಾದ "ಲುಟ್ ಪುಟ್ ಗಯಾ.." ಅನ್ನೋ ಮೆಲೋಡಿ ಹಾಡನ್ನು ರಿಲೀಸ್ ಮಾಡಲಾಗಿತ್ತು. ತಾಪ್ಸಿ ಪನ್ನು ಹಾಗೂ ಶಾರುಖ್ ಖಾನ್ ನಡುವಿನ ರೊಮ್ಯಾಂಟಿಕ್ ದೃಶ್ಯವಿರುವ ಈ ಹಾಡು ಸಿನಿಪ್ರಿಯರ ಫೇವರಿಟ್ ಆಗಿದೆ. ಇದೇ ಹಾಡಿನಲ್ಲಿ ಕುಸ್ತಿಯ ಸೀನ್‌ವೊಂದು ಕಾಣಿಸುವುದಕ್ಕೆ ಸಿಗುತ್ತೆ. ಅದೇ ತರಹದ ಸೀನ್ 'ಜವಾನ್' ಸಿನಿಮಾದಲ್ಲೀ ಇದೆ.

ಹೌದು.. ಅಟ್ಲೀ ನಿರ್ದೇಶಿಸಿದ 'ಜವಾನ್' ಸಿನಿಮಾದಲ್ಲೂ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಮಧ್ಯೆ ಇಂತಹದ್ದೇ ಒಂದು ಕುಸ್ತಿ ಸೀನ್ ಇದೆ. ಅದೇ ಸೀನ್ 'ಡಂಕಿ'ಯಲ್ಲೂ ರಿಪೀಟ್ ಆಗಿದೆ ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ಬಾಲಿವುಡ್‌ನ ಬೆಸ್ಟ್ ಡೈರೆಕ್ಟರ್. ಹೀಗೆ ಚಿಕ್ಕದೊಂದು ಸೀನ್ ಅನ್ನೂ ಕಾಪಿ ಮಾಡುವುದಿಲ್ಲ. 'ಡಂಕಿ'ಯಲ್ಲಿ ಕುಸ್ತಿ ಸೀನ್ ಇರೋದು ಕಾಕತಾಳೀಯ ಇರಬಹುದು ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಆದರೆ, ಶಾರುಖ್ ಖಾನ್ ಫ್ಯಾನ್ಸ್‌ಗೆ ಮಾತ್ರ 'ಡಂಕಿ' ಸಿನಿಮಾದ ಲುಟ್ ಪುಟ್ ಗಯಾದಲ್ಲಿ ಬರುವ ಕುಸ್ತಿ ಸೀನ್ ಸ್ಪೆಷಲ್ ಎನಿಸಿದೆ. ಅಖಾಡದಲ್ಲಿ ತಾಪ್ಸಿ ಶಾರುಖ್ ಎತ್ತಿ ಹಾಕುವ ದೃಶ್ಯವಿದೆ. ಅದೇ ರೀತಿ ಜವಾನ್ ಸಿನಿಮಾದ ಹಾಡಿನಲ್ಲಿ ದೀಪಿಕಾ, ಶಾರುಖ್‌ರನ್ನು ಎತ್ತಾಕುತ್ತಾರೆ. ಈ ಎರಡು ಸೀನ್ಸ್ ನೋಡಿ ಫ್ಯಾನ್ಸ್ ಕಿಂಗ್ ಖಾನ್ ಕುಸ್ತಿ ಹಿಂದೆ ಬಿದ್ದಿದ್ಯಾಕೆ ಎಂದು ಚರ್ಚೆ ಮಾಡುತ್ತಿದ್ದಾರೆ.
'ಡಂಕಿ' ರಾಜ್‌ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿರೋ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್‌ನಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಕಥೆ ಪೋಣಿಸಿದ್ದಾರೆ. ಈ ಸಿನಿಮಾ ಇದೇ ಡಿಸೆಂಬರ್ 22ಕ್ಕೆ ಈ ಸಿನಿಮಾ ಗ್ರ್ಯಾಂಡ ಆಗಿ ರಿಲೀಸ್ ಆಗುತ್ತಿದೆ.


Click it and Unblock the Notifications











