ಬಿಜೆಪಿ ಪರ ದೀಪಿಕಾ-ರಣ್ವೀರ್ ಪ್ರಚಾರ? ಈ ಫೇಕ್ ಫೋಟೋ ಹಿಂದಿದೆ ಕುತಂತ್ರ

Recommended Video

ರಾಜಕೀಯಕ್ಕೆ ಬಂದ ರಣವೀರ್ ದಂಪತಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಮತ್ತು ರಣ್ವೀರ್ ಸಿಂಗ್ ದಂಪತಿ ಭಾರತೀಯ ಜನತಾ ಪಾರ್ಟಿ ಪರ ಪ್ರಚಾರ ಮಾಡುತ್ತಿದ್ದಾರೆ. ಮೋದಿಗೆ ವೋಟ್ ಮಾಡಿ ಅಂತ ಕೇಸರಿ ದುಪ್ಪಟ ಧರಿಸಿ ಮತಯಾಚನೆ ಮಾಡುತ್ತಿದ್ದಾರೆ. ಬಾಲಿವುಡ್ ನ ಈ ಸ್ಟಾರ್ಸ್ ಪ್ರಚಾರದಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಹೌದು, ದೀಪಿಕಾ ಪಡುಕೋಣೆ ದಂಪತಿ 'ಬಿಜೆಪಿಗೆ ವೋಟ್ ಮಾಡಿ' ಮತ್ತು 'ಮೋದಿಗೆ ವೋಟ್ ಮಾಡಿ' ಎಂದು ಬರೆದಿರುವ ಕೇಸರಿ ಬಣ್ಣದ ದುಪ್ಪಟ ಧರಿಸಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

'ಚಪಾಕ್' ಸಿನಿಮಾದಲ್ಲಿ ಬ್ಯುಸಿ ಇರುವ ದೀಪಿಕಾ ಯಾವಾಗ ಬಿಜೆಪಿ ಸೇರಿಕೊಂಡರು ಅಂತ ಅಚ್ಚರಿ ಪಡಬೇಡಿ. ಮೋದಿಗೆ ಜೈ ಎನ್ನುತ್ತಿರುವ ದೀಪಿಕಾ ದಂಪತಿಯ ಈ ಫೋಟೋ ಹಿಂದಿನ ಅಸಲಿ ಕಥೆನೇ ಬೇರೆ. ಈ ವೋಟ್ ಫಾರ್ ಮೋದಿ ಫೋಟೋ ಬಗ್ಗೆ ಮುಂದೆ ಓದಿ..

ಬಿಜೆಪಿ ಪ್ರಚಾರದ ಫೋಟೋ ಫೇಕ್

ಬಿಜೆಪಿ ಪ್ರಚಾರದ ಫೋಟೋ ಫೇಕ್

2018 ನವೆಂಬರ್ 14ರಂದು ಹಸೆಮಣೆ ಏರಿದ್ದ ದೀಪಿಕಾ ಮತ್ತು ರಣ್ವೀರ್ ನಂತರ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿರುವ ಫೋಟೋ ಇದು. ಸಾಂಪ್ರದಾಯಕ ಬಟ್ಟೆ ಧರಿಸಿ ಕೇಸರಿ ಬಣ್ಣದ ದುಪ್ಪಟ ಹಾಕಿಕೊಂಡು ಹೋಗಿದ್ದ ಈ ದಂಪತಿಯ ಫೋಟೋ ಈಗ 'ಏಕ್ ಬಿಹಾರಿ 100 ಪೇ ಭಾರಿ' ಎನ್ನುವ ಬಿಜೆಪಿಗೆ ಸೇರಿದ ಫೇಸ್ ಬುಕ್ ಪೇಜ್ ಗೆ ಆಹಾರವಾಗಿದೆ.

ವೋಟ್ ಫಾರ್ ಮೋದಿ

ವೋಟ್ ಫಾರ್ ಮೋದಿ

ದೀಪಿಕಾ ಮತ್ತು ರಣ್ವೀರ್ ಇಬ್ಬರು ದೇವಸ್ಥಾನಕ್ಕೆ ತೆರಳಿದ ಫೋಟೋವನ್ನು ಎಡಿಟ್ ಮಾಡಿ, ದುಪ್ಪಟದ ಮೇಲೆ 'ವೋಟ್ ಫಾರ್ ಮೋದಿ' ಮತ್ತು 'ವೋಟ್ ಫಾರ್ ಬಿಜೆಪಿ' ಎಂದು ಬರೆದು ಬಿಜೆಪಿ ಪೇಜ್ ಗೆ ಅಪ್ ಲೋಡ್ ಮಾಡಲಾಗಿದೆ. ಈ ಫೋಟೋ ನೋಡಿದ ಬಳಿಕ ಡಿಪ್ಪಿ ದಂಪತಿ ಬಿಜೆಪಿ ಸೇರಿಕೊಂಡ್ರಾ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ.

ಲಕ್ಷಗಟ್ಟಲೆ ಶೇರ್ ಆದ ಫೋಟೋ

ಲಕ್ಷಗಟ್ಟಲೆ ಶೇರ್ ಆದ ಫೋಟೋ

ಏಕ್ ಬಿಹಾರಿ 100 ಪೇ ಭಾರಿ ಪೇಜ್ ನಲ್ಲಿ ಡಿಪ್ಪಿ ದಂಪತಿಯ ಫೋಟೋ ಲಕ್ಷಗಟ್ಟಲೆ ಶೇರ್ ಆಗಿದೆ. ಅಲ್ಲದೆ ಇಬ್ಬರ ಫೋಟೊ ಅಪ್ ಲೋಡ್ ಮಾಡುತ್ತಿದ್ದಂತೆ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ. ಹೆಚ್ಚು ಲೈಕ್ಸ್ ಗಿಟ್ಟಿಸಿಕೊಳ್ಳುತ್ತ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೋಟೋ ಬಗ್ಗೆ ಸ್ಪಷ್ಟೀಕರಣ ನೀಡದ ಡಿಪ್ಪಿ ದಂಪತಿ

ಫೋಟೋ ಬಗ್ಗೆ ಸ್ಪಷ್ಟೀಕರಣ ನೀಡದ ಡಿಪ್ಪಿ ದಂಪತಿ

ದೇವಸ್ಥಾನಕ್ಕೆ ತೆರೆಳಿದ್ದ ಫೋಟೋ ಎಡಿಟ್ ಮಾಡಿ ಬಿಜೆಪಿಗೆ ಸೇರಿದ ಫೇಸ್ ಬುಕ್ ಪೇಜ್ ನಲ್ಲಿ ಓಡಾಡುತ್ತಿದ್ದರು ರಣ್ವೀರ್ ದಂಪತಿ ಈ ಬಗ್ಗೆ ಇದುವರೆಗೂ ಏನು ಸ್ಪಷ್ಟೀಕರಣ ನೀಡಿಲ್ಲ. ಆದ್ರೆ ಈ ಫೋಟೋ ನೋಡಿ ಅನೇಕರು ದೀಪಿಕಾ ಮತ್ತು ರಣ್ವೀರ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಅಂತಾನೆ ಅಂದುಕೊಳ್ಳುತ್ತಿದ್ದಾರೆ.

More from Filmibeat

English summary
Did Bollywood stars Ranveer Singh and Deepika Padukone really campaign for the BJP. A photoshopped image of Ranveer Singh and Deepika Padukone asking citizens to vote for the BJP is being circulated on the internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X