For Quick Alerts
  ALLOW NOTIFICATIONS  
  For Daily Alerts

  ಪ್ರೇಯಸಿಯನ್ನು ಪರಿಚಯಿಸಿದ 'ಮಹಾಭಾರತ' ಧಾರಾವಾಹಿಯ ಅರ್ಜುನ

  |

  ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟ ಶಾಹೀರ್ ಶೇಖ್ ಕನ್ನಡ ಪ್ರೇಕ್ಷಕರಿಗೂ ಚಿರಪರಿಚಿತ. ಶಾಹೀರ್ ಶೇಖ್ ಎನ್ನುವುದಕ್ಕಿಂತ 'ಮಹಾಭಾರತ'ದ ಅರ್ಜುನ ಎಂದರೆ ಕನ್ನಡ ಪ್ರೇಕ್ಷಕರಿಗೆ ಥಟ್ ಅಂತ ನೆನಪಾಗುತ್ತೆ. ಅರ್ಜುನ ಪಾತ್ರದ ಮೂಲಕ ಶಾಹೀರ್ ಶೇಖ್ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ.

  ಶಾಹೀರ್ ಶೇಖ್ ಗರ್ಲ್ ಫ್ರೆಂಡ್ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ನಟ. ಶಾಹೀರ್ ಪ್ರೇಯಸಿ ಯಾರು ಎನ್ನುವ ಕುತೂಹಲ ಅಭಿಮಾನಿಗಲ್ಲೂ ಇತ್ತು. ಸಾಕಷ್ಟು ನಟಿಯ ಜೊತೆ ಶಾಹೀರ್ ಹೆಸರು ತಳಕುಹಾಕಿಕೊಂಡಿತ್ತು. ಆದರೀಗ ಶಾಹೀರ್ ಗರ್ಲ್ ಫ್ರೆಂಡ್ ಯಾರು ಎನ್ನುವ ಕುತೂಲಹಕ್ಕೆ ತೆರೆ ಬಿದ್ದಿದೆ. ಇತ್ತೀಚಿಗೆ ಶಾಹೀರ್ ಮದುವೆಯಾಗುತ್ತಿರುವ ಹುಡುಗಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮುಂದೆ ಓದಿ...

  ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟ 'ಮಹಾಭಾರತ' ಧಾರಾವಾಹಿಯ ಅರ್ಜುನ

  ಪ್ರೇಯಸಿ ಜೊತೆ ಪೋಟೋ ಹಂಚಿಕೊಂಡ ಶಾಹೀರ್

  ಪ್ರೇಯಸಿ ಜೊತೆ ಪೋಟೋ ಹಂಚಿಕೊಂಡ ಶಾಹೀರ್

  ಶಾಹೀರ್ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡುವ ಮಾಡುವ ಮೂಲಕ ಅಧಿಕೃತವಾಗಿ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದಾರೆ.

  ಅಂದ್ಹಾಗೆ ಶಾಹೀರ್ ಪ್ರೇಯಸಿಯ ಹೆಸರು ರುಚಿಕಾ ಕಪೂರ್. ಸ್ಟುಡಿಯೋ ಕಾರ್ಯನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇದೀಗ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದಾರೆ.

  ಶಾಹೀರ್ ಜೋಡಿಗೆ ಅಭಿಮಾನಿಗಳ ಅಭಿನಂದನೆ

  ಶಾಹೀರ್ ಜೋಡಿಗೆ ಅಭಿಮಾನಿಗಳ ಅಭಿನಂದನೆ

  ರಿಚಿಕಾ ಕಪೂರ್ ಜೊತೆ ಫೋಟೋ ಶೇರ್ ಮಾಡುತ್ತಿದಂತೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಕಿರುತೆರೆ ಗಣ್ಯರು ಸಹ ಅಭಿನಂದನೆ ತಿಳಿಸುತ್ತಿದ್ದಾರೆ. 'ಮಹಾಭಾರತ' ಧಾರಾವಾಹಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಶಾಹೀರ್ ಕೊನೆಯದಾಗಿ 'ಯೇ ರಿಶ್ತಾ ಹೇ ಪ್ಯಾರ್ ಕಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ.

  ಡೇಟಿಂಗ್, ಮದುವೆ ಬಗ್ಗೆ 'ಅರ್ಜುನ' ಪಾತ್ರದ ಖ್ಯಾತಿಯ ನಟ ಶಾಹೀರ್ ಹೇಳಿದ್ದೇನು?

  ಮಹಾಭಾರತ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ನಟ

  ಮಹಾಭಾರತ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ನಟ

  ಮೂಲತಹ ಕಾಶ್ಮೀರದವರಾದ ಶಾಹೀರ್ 2009ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಹೀರ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು 2014ರಲ್ಲಿ ಬಂದ 'ಮಹಾಭಾರತ' ಧಾರಾವಾಹಿಯ ಅರ್ಜುನ ಪಾತ್ರ. ಬಳಿಕ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟ ಶಾಹೀರ್

  ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟ ಶಾಹೀರ್

  ಧಾರಾವಾಹಿ ಬಳಿಕ ಶಾಹೀರ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಮೊದಲ ಬಾರಿಗೆ ಶಾಹೀರ್ ವೆಬ್ ಸೀರಿಸ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯ ನಟನಾಗಿ ಗುರುಸಿಕೊಂಡಿರುವ ಶಾಹೀರ್ ಬಾಲಿವುಡ್ ನ ಸಾಕಷ್ಟು ಸಿನಿಮಾ ಆಫರ್ ಗಳನ್ನು ರಿಜೆಕ್ಟ್ ಮಾಡಿದ್ದಾರೆ. ಆದರೀಗ ವೆಬ್ ಸೀರಿಸ್ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

  English summary
  Famous TV Actor Shaheer Sheikh confirm his relationship with ruchika kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X