ಏನು.. ಸಲ್ಮಾನ್ ಖಾನ್-ಶಿಲ್ಪಾ ಶೆಟ್ಟಿ ಡೇಟಿಂಗ್ ಮಾಡ್ತಿದ್ರಾ.?

ವಯಸ್ಸು 52 ಆದರೂ, ನಟ ಸಲ್ಮಾನ್ ಖಾನ್ ಮಾತ್ರ ಇನ್ನೂ ಬಾಲಿವುಡ್ ನ ದಿ ಮೋಸ್ಟ್ ಎಲಿಜಿಬಲ್ ಬಾಚ್ಯುಲರ್. ಸಲ್ಮಾನ್ ಖಾನ್ ಯಾವಾಗ ಮದುವೆ ಆಗುತ್ತಾರೋ ಅಂತ ಅಭಿಮಾನಿಗಳು ಕಾಯುತ್ತಿರುವಾಗಲೇ ಒಂದು ಗಾಸಿಪ್ ಇತ್ತೀಚೆಗಷ್ಟೆ ಎಲ್ಲರ ಕಿವಿಗೆ ಬಿತ್ತು.

ಅದೇನಪ್ಪಾ ಅಂದ್ರೆ, ಐಶ್ವರ್ಯ ರೈ ಜೊತೆಗೆ ಬ್ರೇಕಪ್ ಆದ್ಮೇಲೆ ಒಂಟಿಯಾಗಿದ್ದ ಸಲ್ಮಾನ್ ಖಾನ್ ಬಾಳಲ್ಲಿ ತಂಗಾಳಿಯಂತೆ ಬಂದವರು ನಟಿ ಶಿಲ್ಪಾ ಶೆಟ್ಟಿ ಅಂತೆ. ಹಾಗಂತ ಬಾಲಿವುಡ್ ತುಂಬಾ ಗುಲ್ಲೋ ಗುಲ್ಲು.

ಇದೇ ಗಾಸಿಪ್ ಬಗ್ಗೆ ಇದೀಗ ಶಿಲ್ಪಾ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ''ಸಲ್ಮಾನ್ ಹಾಗೂ ನನ್ನ ನಡುವೆ ಸ್ನೇಹ ಬಿಟ್ಟು ಇನ್ನೇನೂ ಇರಲಿಲ್ಲ. ನಾವಿಬ್ಬರು ಡೇಟಿಂಗ್ ಮಾಡಲಿಲ್ಲ'' ಎಂದು ಸಂದರ್ಶನವೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಡೇಟಿಂಗ್ ಮಾಡಿಲ್ಲ

ಡೇಟಿಂಗ್ ಮಾಡಿಲ್ಲ

''ಆಗಿನ ಕಾಲದಲ್ಲಿ ನಟ-ನಟಿಯರ ನಡುವೆ ಆತ್ಮೀಯ ಅನುಬಂಧ ಇತ್ತು. ನಾನು ಮತ್ತು ಸಲ್ಮಾನ್ ಖಾನ್ ಡೇಟಿಂಗ್ ಮಾಡಲಿಲ್ಲ. ಸಲ್ಮಾನ್ ಖಾನ್ ತುಂಬಾ ಒಳ್ಳೆಯ ಮನುಷ್ಯ'' ಎಂದಿದ್ದಾರೆ ನಟಿ ಶಿಲ್ಪಾ ಶೆಟ್ಟಿ.

ಮಧ್ಯರಾತ್ರಿ ಬರುತ್ತಿದ್ದ ಸಲ್ಮಾನ್

ಮಧ್ಯರಾತ್ರಿ ಬರುತ್ತಿದ್ದ ಸಲ್ಮಾನ್

''ಎಷ್ಟೋ ಬಾರಿ ಸಲ್ಮಾನ್ ನನ್ನ ಮನೆಗೆ ಮಧ್ಯರಾತ್ರಿ ಬಂದಿದ್ದಾರೆ. ನಾನು ಆಗ ನಿದ್ದೆ ಮಾಡುತ್ತಿದ್ದರೆ, ಸಲ್ಮಾನ್ ಮತ್ತು ನನ್ನ ತಂದೆ ಡ್ರಿಂಕ್ಸ್ ಮಾಡುತ್ತಿದ್ದರು. ನನ್ನ ತಂದೆ ತೀರಿಕೊಂಡಾಗ, ಸಲ್ಮಾನ್ ಅದೇ ಬಾರ್ ಟೇಬಲ್ ಮೇಲೆ ಕಣ್ಣೀರು ಹಾಕಿದ್ದು ನನಗೆ ನೆನಪಿದೆ'' ಅಂತಾರೆ ಶಿಲ್ಪಾ ಶೆಟ್ಟಿ.

ಸುಖ ಸಂಸಾರ ನಡೆಸುತ್ತಿರುವ ಶಿಲ್ಪಾ

ಸುಖ ಸಂಸಾರ ನಡೆಸುತ್ತಿರುವ ಶಿಲ್ಪಾ

2009 ರಲ್ಲಿ ಬಿಸಿನೆಸ್ ಮ್ಯಾನ್ ರಾಜ್ ಕುಂದ್ರಾ ರನ್ನ ಶಿಲ್ಪಾ ಶೆಟ್ಟಿ ವಿವಾಹವಾದರು. ಈ ದಂಪತಿಗೆ ವಿಯಾನ್ ಎಂಬ ಪುತ್ರನಿದ್ದಾನೆ. ಮದುವೆ ಆಗಿ ಮಗು ಆದ್ಮೇಲೆ, ಅಭಿನಯದಿಂದ ಶಿಲ್ಪಾ ಶೆಟ್ಟಿ ಕೊಂಚ ದೂರ ಉಳಿದಿದ್ದಾರೆ.

'ಭಾರತ್' ಶೂಟಿಂಗ್ ನಲ್ಲಿ ಸಲ್ಮಾನ್ ಬಿಜಿ

'ಭಾರತ್' ಶೂಟಿಂಗ್ ನಲ್ಲಿ ಸಲ್ಮಾನ್ ಬಿಜಿ

ಇತ್ತ ಸಲ್ಮಾನ್ ಖಾನ್ ಸದ್ಯ 'ಭಾರತ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಜೊತೆಗೆ 'ಬಿಗ್ ಬಾಸ್' ಕಾರ್ಯಕ್ರಮದ ನಿರೂಪಣೆಯ ಹೊಣೆ ಅವರ ಮೇಲಿದೆ.

More from Filmibeat

English summary
Did Shilpa Shetty ever date Salman Khan.? Read the article to know what Shilpa Shetty has to say about this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X