ವಿಡಿಯೋ: ಕುಡಿದು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ನಟ!

ಹಲವು ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ನಟಿಸಿರುವ ಹಾಗೂ ಬಿಗ್‌ಬಾಸ್ ವಿನ್ನರ್ ಸಹ ಆಗಿರುವ ಸಿದ್ಧಾರ್ಥ್ ಶುಕ್ಲಾ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಎರಡು ದಿನ ಹಿಂದೆ (ಡಿಸೆಂಬರ್ 12) ರಂದು ಹುಟ್ಟುಹಬ್ಬ ಆಚರಿಸಿಕೊಂಡ ಸಿದ್ಧಾರ್ಥ್, ಅದೇ ದಿನ ತಡರಾತ್ರಿ ಮುಂಬೈನ ಏರಿಯಾವೊಂದರಲ್ಲಿ ಸಿದ್ಧಾರ್ಥ್ ಹಾಗೂ ಅವರ ಗೆಳೆಯರು ಕುಡಿದು ಬಡ ವ್ಯಕ್ತಿಯೊಬ್ಬನನ್ನು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವಂತೆ, ಕಾರಿನಲ್ಲಿ ಕೂತಿರುವ ಸಿದ್ಧಾರ್ಥ್ ಶುಕ್ಲಾ ಅವರಿಗೆ ಕೇಳುತ್ತಿದ್ದಾನೆ, 'ಕುಡಿದು, ಬಡ ವ್ಯಕ್ತಿಯೊಬ್ಬನಿಗೆ ಹೊಡೆದಿದ್ದೀರಲ್ಲವೆ, ಸರಿ ಬಿಡಿ ನಿಮಗೆ ಒಳ್ಳೆಯದಾಗಲಿ' ಎಂದಿದ್ದಾನೆ.

Did Sidharth Shukla Get Drunk And Engaged In Street Fight

ಕಾರಿನಲ್ಲಿ ಕೂತಿದ್ದ ಸಿದ್ಧಾರ್ಥ್ ಶುಕ್ಲಾ, ವಿಡಿಯೋ ಮಾಡುತ್ತಿದ್ದ ವ್ಯಕ್ತಿಯಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಜೊತೆಗೆ 'ಆ ವ್ಯಕ್ತಿ ನನಗೆ ಚಾಕು ತೋರಿಸಿದ' ಎಂದು ಹೇಳುತ್ತಾರೆ. ಅಷ್ಟರಲ್ಲಿ ಮತ್ತೆ ಸಿದ್ಧಾರ್ಥ್ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ, ಅಲ್ಲಿಗೆ ವಿಡಿಯೋ ಎಂಡ್ ಆಗಿದೆ.

ಆದರೆ ನಟ ಸಿದ್ಧಾರ್ಥ್ ಬೇರೆಯದೇ ರೀತಿ ಘಟನೆಯನ್ನು ಬಣ್ಣಿಸಿದ್ದು, ತಮ್ಮ ಕಾರಿಗೆ ಗುದ್ದಿದ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದಾಗ, ಅವರು ಜಗಳಕ್ಕೆ ನಿಂತು ಚಾಕು ತೋರಿಸಿದರು, ನಾವು ಅವರನ್ನು ಬಲಪ್ರಯೋಗಿಸಿ ತಳ್ಳಿ, ಆ ಸ್ಥಳದಿಂದ ಹೊರಟು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದೆವು ಎಂದಿದ್ದಾರೆ. ಅಲ್ಲದೆ, ಗಾಡಿ ಓಡಿಸಬೇಕಾದರೆ, ತಾವು ಕುಡಿದಿರಲಿಲ್ಲ ಎಂದು ಸಹ ಹೇಳಿದ್ದಾರೆ.

Recommended Video

ಕಳೆದು ಹೋದದನ್ನ ಪುನಃ ಪಡೆದುಕೊಂಡ ಮೇಘಾ ಶೆಟ್ಟಿ | Filmibeat Kannada

ಸಿದ್ಧಾರ್ಥ್ ನೀಡಿರುವ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಸತ್ಯಾಂಶ ಹೊರಬರಬೇಕಿದೆ.

More from Filmibeat

English summary
Did Sidharth Shukla get drunk and engaged in a street fight. A video viral on social media in that a man accusing Sidharth for hitting a poor man.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X