ಇದೇನ್ ಗುರು, ಅಂಬಾನಿಯ ಕೆಲಸಗಾರರನ್ನೂ ಬಿಡಲ್ಲ ಅಂತಾರೆ ಬಾಲಿವುಡ್ ನಟಿಯರು...!
ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಯೌವ್ವನದ ಹುಚ್ಚಕೊಡಿ ಮನಸಿನ ಇವತ್ತಿನ ಅನೇಕ ಯುವಕ ಮತ್ತು ಯುವತಿಯರಿಗಂತೂ ಲವ್ ಅನ್ನೋದು ಶೋಕಿ. ಅದರಲ್ಲಿಯೂ ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಮಾಮೂಲಿ. ಇಲ್ಲಿ ಇವತ್ತು ಒಬ್ಬರ ಜೊತೆ ಇದ್ದವರು, ಮರು ದಿನ ಇನ್ಯಾರದ್ದೋ ಜೊತೆಯಲ್ಲಿ ಇರುತ್ತಾರೆ. ಇದಕ್ಕೆ ಹತ್ತಾರು ಉದಾಹರಣೆಗಳು ಚಿತ್ರರಂಗದಲ್ಲಿವೆ. ಇದೀಗ ಈ ಸಾಲಿಗೆ ಅನನ್ಯಾ ಪಾಂಡೆ ಕೂಡ ಸೇರಿಕೊಂಡಿರುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ.
ಹೌದು, ಅನನ್ಯಾ ಪಾಂಡೆ, ಬಾಲಿವುಡ್‌ನ ಹಿರಿಯ ಕಲಾವಿದ ಚಂಕಿ ಪಾಂಡೆಯ ಮಗಳು. ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಅನನ್ಯಾ ಪಾಂಡೆ ಹೆಸರು ಮೊನ್ನೆವರೆಗೆ ಆಶಿಕಿ 2 ಚಿತ್ರದ ಹೀರೋ ಆದಿತ್ಯ ರಾಯ್ ಕಪೂರ್ ಜೊತೆ ಥಳುಕು ಹಾಕಿಕೊಂಡಿತ್ತು. ಇದಕ್ಕೆ ಪೂರಕವಾಗಿ ಇಬ್ಬರು ಕೈ ಹಿಡಿದು ಕೇವಲ ಮುಂಬೈ ಮಾತ್ರ ಅಲ್ಲ ದೇಶದ ನಾನಾ ಭಾಗಗಳಲ್ಲಿ ಜೊತೆಯಾಗಿ ಓಡಾಡಿದ್ದರು. ಆದರೆ, ಆ ನಂತರ ಅದೇನಾಯ್ತೋ ಎರಡು ವರ್ಷ ಪ್ರೇಮ ಗೀತೆಯನ್ನೂ ಹಾಡಿದ ಇಬ್ಬರು ಈ ವರ್ಷದ ಆರಂಭದಲ್ಲಿ ದೂರವಾದರು. ಮನದ ನೋವುಗಳಿಗೆ ಜಾಗ ಎಲ್ಲಿದೆ ಎಂದು ವಿರಹ ಗೀತೆ ಹಾಡಲು ಶುರುಮಾಡಿದರು.

ಆದಿತ್ಯ ರಾಯ್ ಕಪೂರ್ ಅವರಿಂದ ದೂರವಾದ ನಂತರ ಅನನ್ಯಾ ಪಾಂಡೆ ಹೆಸರು ಆಗ ತಾನೇ ತಮ್ಮ ಪತ್ನಿಯಿಂದ ದೂರವಾದ ಹಾರ್ದಿಕ್ ಪಾಂಡ್ಯ ಜೊತೆ ಕೇಳಿ ಬಂತು. ಆದರೆ ಇಲ್ಲಿ ಲವ್ ಟ್ರ್ಯಾಕ್ ಮಾಡುವುದು ಸುಲಭ ಅಲ್ಲ. ಯಾಕೆಂದರೆ, ಹಾರ್ದಿಕ್ ಪಾಂಡ್ಯ ಕೈ ಹಿಡಿಯಲು ಅನೇಕ ಚೆಲುವೆಯರು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಇಳಿದಿದ್ದಾರೆ. ಉದಾಹರಣೆಗೆ ಬ್ರಿಟನ್ ಗಾಯಕಿ ಜಾಸ್ಮಿನ್ ವಾಲಿಯಾ ಮತ್ತು ಪ್ಯಾರ್ ಕಾ ಪಂಚನಾಮಾ ಚಿತ್ರದ ನಾಯಕಿ ಇಶಿತಾ ರಾಜ್.
ಹೀಗಾಗಿಯೇ ಏನೋ ಹಾರ್ದಿಕ್ ಪಾಂಡ್ಯ ಅವರಿಂದ ಸದ್ಯಕ್ಕೆ ಅಂತರವನ್ನು ಕಾಪಾಡಿಕೊಂಡಂತೆ ಇರುವ ಅನನ್ಯಾ ಪಾಂಡೆ ಈಗ ವಾಕರ್ ಬ್ಲಾಂಕೊ ಜೊತೆ ಲವ್ವಲ್ಲಿ ಬಿದ್ದಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಬಾಲಿವುಡ್ ತುಂಬಾ ಕೇಳಿ ಬರುತ್ತಿದೆ. ಅಂದ್ಹಾಗೇ ಈ ವಾಕರ್ ಬ್ಲಾಂಕೊ ಸೆಲೆಬ್ರೆಟಿ ಅಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಯೂ ಅಲ್ಲ. ಇನ್ನೂ ಕ್ರೀಡೆಯಲ್ಲಿ ಕೂಡ ಈ ವ್ಯಕ್ತಿ ಹೆಸರು ಮಾಡಿಲ್ಲ. ಬದಲಿಗೆ ವಾಕರ್ ಬ್ಲಾಂಕೊ ತುಂಬಾ ಸಾಧಾರಣ ವ್ಯಕ್ತಿ. ಒಂದ್ಕಾಲದ ಅಮೆರಿಕಾದ ಮಾಡೆಲ್.

ಈ ಕಾರಣಕ್ಕೆ ಎಲ್ಲಿಯ ಅನನ್ಯಾ ಪಾಂಡೆ. ಎಲ್ಲಿಯ ವಾಕರ್ ಬ್ಲಾಂಕೋ..? ಇಬ್ಬರ ನಡುವೆ ಪ್ರೇಮಾಂಕುರವಾಗಲು ಹೇಗೆ ಸಾಧ್ಯ..? ಮುಂತಾದ ಪ್ರಶ್ನೆಗಳು ಮೂಡುವುದು ಸಹಜವೇ. ಈ ಪ್ರಶ್ನೆಗೆ ಉತ್ತರ ಹುಡುಕಲು ಮಾಯಾನಗರಿ ಮುಂಬೈನ ಅನೇಕರು ಮುಂದಾದಾಗ ಅವರಿಗೆ ಕಂಡಿದ್ದು ಗುಜರಾತ್‌ನ ಜಾಮನಗರದಲ್ಲಿರುವ 3000 ಎಕರೆ ವಿಸ್ತಾರವಾಗಿರುವ ಅಂಬಾನಿ ಅವರ ಹಚ್ಚ ಹಸಿರಿನ ಅರಣ್ಯ ಪ್ರದೇಶ.
ಹೌದು, ಅಸಲಿಗೆ.. ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಗುಜರಾತ್‌ನ ಜಾಮನಗರದಲ್ಲಿ ಪ್ರಾಣಿಗಳ ಪುನರ್ವಸತಿಗಾಗಿಯೆಂದೇ ಪ್ರಾಣಿ ರಕ್ಷಣಾ ಕೇಂದ್ರವನ್ನೂ ತೆರೆದಿದ್ದಾರೆ. 3000 ಎಕರೆ ಭೂಮಿಯಲ್ಲಿ ಸೃಷ್ಟಿಯಾಗಿರುವ ಈ ಕಾಡಿಗೆ ಇವರು ಇಟ್ಟಿರುವ ಹೆಸರು ವಂತಾರ. ಅನನ್ಯಾ ಪಾಂಡೆ ಜೊತೆ ಕೇಳಿ ಬರುತ್ತಿರುವ ವಾಕರ್ ಬ್ಲಾಂಕೋ ಇದೇ ವಂತಾರದ ಉದ್ಯೋಗಿ. ನಂಬಲು ತುಸು ಕಷ್ಟವಾದರೂ ಇದೇ ಸತ್ಯ.

ಇತ್ತೀಚೆಗೆ ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಅನನ್ಯಾ ಪಾಂಡೆ ಮತ್ತು ವಾಕರ್ ಬ್ಲಾಂಕೋ ಪರಿಚಯವಾಗಿದೆ. ಕ್ರೂಸ್ ಪಾರ್ಟಿಯಲ್ಲಿ ಆದ ಈ ಪರಿಚಯ ಆ ನಂತರ ಸ್ನೇಹಕ್ಕೆ ತಿರುಗಿದೆ. ಕೆಲವೇ ದಿನಗಳಲ್ಲಿ ಆ ಸ್ನೇಹ ಈಗ ಪ್ರೇಮದ ಸ್ವರೂಪ ಪಡೆದಿದೆ. ಇದಕ್ಕೆ ಪುರಾವೆ ಎನ್ನುವಂತೆ ಅನನ್ಯಾ ಪಾಂಡೆ ಕೊರಳಿನಲ್ಲಿ ವಾಲ್ಕರ್ ಬ್ಲಾಂಕೋ ಅವರ ಆರಂಭಿಕ ಪದ WB ಹೊಂದಿರುವ ಚಿನ್ನದ ಸರ ನೇತಾಡುತ್ತಿದೆ.
ಇನ್ನೂ ಮೊನ್ನೆಯಷ್ಟೇ ಪ್ರಸಾರವಾದ ಅನನ್ಯಾ ಪಾಂಡೆ ವೆಬ್ ಸರಣಿ ಕಾಲ್ ಮೀ ಬೇಯ ಕುರಿತು ವಾಲ್ಕರ್ ಬ್ಲಾಂಕೋ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಇನ್ಸ್‌ಟಾಗ್ರಾಮ್‌ನಲ್ಲಿ ಇಬ್ಬರು ಪರಸ್ಪರ ಫಾಲೋ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಅನನ್ಯಾ ಪಾಂಡೆ ಮತ್ತು ವಾಲ್ಕರ್ ಬ್ಲಾಂಕೋ ನಡುವೆ ಪ್ರೀತಿ ಮೊಳಕೆಯೊಡೆದಿದೆ ಅನ್ನುವುದು ಅನೇಕರ ವಾದ. ಇದು ನಿಜವೇ ಆದಲ್ಲಿ ಇವರಿಬ್ಬರ ಈ ಪ್ರೀತಿ ಎಲ್ಲಿಯವರೆಗೆ ಮುಂದುವರೆಯುತ್ತೆ..? ಇಬ್ಬರು ಮದುವೆಯಾಗ್ತಾರಾ..? ಎಂಬ ಪ್ರಶ್ನೆಗೆ ಉತ್ತರ ಕಾಲವೇ ನೀಡಲಿದೆ.
Ananya Panday wearing rumoured bf Walker Blanco's initial 👀
byu/funnymemer68 inBollyBlindsNGossip


Click it and Unblock the Notifications











