ಅಭಿಷೇಕ್ ಬಚ್ಚನ್‌ಗೆ ಎಸ್‌ಬಿಐ ಬ್ಯಾಂಕ್ ಪ್ರತಿ ತಿಂಗಳು ತಪ್ಪದೇ 18 ಲಕ್ಷ ಹಣ ನೀಡುವುದೇಕೆ..? ಕಾರಣವೇನು..?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳಲು ಬರುವವರಿಗೆ ಬದುಕಲು ತಮ್ಮಲ್ಲಿನ ಕಲೆಯೊಂದೇ ಆಸರೆಯಾಗಿತ್ತು. ಅವರ ಅಭಿನಯ ಸಾಮರ್ಥ್ಯವೇ ಆ ಕಾಲಕ್ಕೆ ಅವರಿಗೆ ಶಕ್ತಿಯಾಗಿತ್ತು. ಇನ್ನೂ.. ಆ ಕಾಲದಲ್ಲಿ ಕಲೆಯನ್ನೇ ನಂಬಿಕೊಂಡವರಿಗೆ ಅವಕಾಶ ಸಿಕ್ಕರೆ ಸಾಕಿತ್ತು, ಹಣದ ಮುಖವನ್ನು ಕೂಡ ಅನೇಕರು ನೋಡುತ್ತಿರಲಿಲ್ಲ. ಚೌಕಾಸಿಯನ್ನೂ ಮಾಡುತ್ತಿರಲಿಲ್ಲ. ಕಲೆಯನ್ನು ಹೊರತು ಪಡಿಸಿ ಬೇರೆ ಮೂಲದಿಂದ ಹಣ ಗಳಿಸುವ ಉದ್ದೇಶ ಕೂಡ ಆ ಕಾಲದಲ್ಲಿ ಬಹುತೇಕರಿಗೆ ಇರುತ್ತಿರಲಿಲ್ಲ.

ಹೀಗಾಗಿಯೇ ಅನೇಕರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಕಣ್ಣೀರಿನಲ್ಲಿ ಇಲ್ಲಿ ಕೈತೊಳೆದಿದ್ದಾರೆ. ಒಂದೊಪ್ಪತ್ತಿನ ಅನ್ನಕ್ಕೂ ಒದ್ದಾಡಿ ಪ್ರಾಣ ತ್ಯಜಿಸಿದವರು ಇದ್ದಾರೆ. ಇನ್ನೂ ಕೆಲವರು ತಮ್ಮ ಪ್ರಭಾವಳಿಯನ್ನು ತಲೆಗೇರಿಸಿಕೊಂಡು, ಯಾವ ಯಾವುದೋ ಶೋಕಿಗೆ ಬಿದ್ದು ದುಡಿದ ಹಣವನ್ನೆಲ್ಲ ಕರಗಿಸಿಕೊಂಡಿದ್ದಾರೆ. ಆ ಕಡೆ ದುಡ್ಡು ಖಾಲಿಯಾದ ನಂತರ ಈ ಕಡೆ ಅವಕಾಶ ಸಿಗದ ಹಿನ್ನೆಲೆ ಒದ್ದಾಡಿದವರು ಇದ್ದಾರೆ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಲೆಯನ್ನು ನಂಬಿದವರು ಅದರ ಜೊತೆ ಪರ್ಯಾಯ ಮಾರ್ಗವನ್ನು ಅನೇಕರು ಕಂಡುಕೊಳ್ಳುತ್ತಿದ್ದಾರೆ. ಚಿತ್ರರಂಗದ ಜೊತೆ ಬೇರೆ ಬೇರೆ ಉದ್ಯಮಕ್ಕಿಳಿದು ವ್ಯಾಪಾರವನ್ನೂ ಮಾಡುತ್ತಿದ್ದಾರೆ. ಮತ್ತೂ ಕೆಲವರು ಊರಿನ ತುಂಬಾ ಆಸ್ತಿ ಮಾಡಿಕೊಂಡು, ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟುತ್ತಿದ್ದಾರೆ. ಅಲ್ಲಿಂದ ಬರುವ ಬಾಡಿಗೆಯಿಂದನೇ ಸುಖವಾದ ಜೀವನ ನಡೆಸುತ್ತಿದ್ದಾರೆ. ಉದಾಹರಣೆಗೆ ಅಭಿಷೇಕ್ ಬಚ್ಚನ್.

Did you know Abhishek Bachchan receives 1 800 000 monthly from the State Bank of India

ಹೌದು, ಅಮಿತಾಬ್ ಬಚ್ಚನ್ ಮಗನಾದರೂ ಸನ್ಮಾನ ಸ್ವೀಕರಿಸಿದಕ್ಕಿಂತ ಹೆಚ್ಚು ಅವಮಾನಗಳನ್ನು ಎದುರಿಸಿದವರು ಅಭಿಷೇಕ್ ಬಚ್ಚನ್. ಇಂಥಾ ಅಭಿಷೇಕ್ ಬಚ್ಚಕ್ ಸದ್ಯ ತಮ್ಮ ಚಿತ್ರಕ್ಕಿಂತ ಹೆಚ್ಚು ವ್ಯೆಯಕ್ತಿಕ ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ಐಶ್ವರ್ಯ ರೈ ಜೊತೆ ತಮ್ಮ ಇವರ ಸಾಂಸಾರಿಕ ಜೀವನದ ಕಥೆಯನ್ನು ದಿನ ನಿತ್ಯ ಕೇಳಿ ಕೇಳಿ ಇವರ ಅಭಿಮಾನಿಗಳು ಹೈರಾಣಾಗಿದ್ದಾರೆ.

ಇನ್ನೂ ತಮ್ಮ ದಾಂಪತ್ಯ ಕುರಿತು ಕೇಳಿ ಬರುವ ಅಂತೆ-ಕಂತೆಯ ಸುದ್ದಿಗಳಿಗೆ ಅಭಿಷೇಕ್ ಆಗಲಿ, ಐಶ್ವರ್ಯ ಆಗಲಿ ಇಲ್ಲಿಯವರೆಗೆ ಉತ್ತರವನ್ನು ನೀಡುವುದಕ್ಕೆ ಹೋಗಿಲ್ಲ. ಈ ಕಾರಣಕ್ಕೆ ಇವರ ಖಾಸಗಿ ಬದುಕು ಟ್ರೋಲಿಗರ ಬಾಯಿಗೆ ಆಹಾರವೂ ಆಗಿದೆ. ಆದರೂ.. ಇದ್ಯಾವುದರ ಕಡೆ ಹೆಚ್ಚು ತಲೆಕೆಡಿಸಿಕೊಳ್ಳದ ಅಭಿಷೇಕ್ ಬಚ್ಚನ್ ತಮ್ಮ ಪಾಡಿಗೆ ಕೆಲಸವನ್ನು ಮಾಡುತ್ತಾ ಹೋಗುತ್ತಿದ್ದಾರೆ. ಹೀಗಿರುವಾಗ ಅಭಿಷೇಕ್ ಬಚ್ಚನ್ ಅವರ ಆದಾಯದ ಮೂಲವೊಂದು ಜಗಜ್ಜಾಹೀರಾಗಿದೆ. ದೇಶದ ಅತೀ ದೊಡ್ಡ ಬ್ಯಾಂಕ್‌ನಲ್ಲೊಂದಾದ ಎಸ್‌ಬಿಐ ಪ್ರತಿ ತಿಂಗಳು ಅಭಿಷೇಕ್ ಬಚ್ಚನ್‌ ಅವರಿಗೆ ತಪ್ಪದೇ 18.9 ಲಕ್ಷ ರೂಪಾಯಿ ಹಣವನ್ನು ನೀಡುತ್ತೆ ಎನ್ನುವ ವಿಚಾರ ಬಹಿರಂಗವಾಗಿದೆ.

ಹೌದು, ಅಸಲಿಗೆ ಅಮಿತಾಬ್ ಬಚ್ಚನ್ ಮಗನಾದರೂ ಕೂಡ ಅಭಿಷೇಕ್ ಬಚ್ಚನ್ ತಮ್ಮ ದುಡಿಮೆಯಲ್ಲಿ ಮುಂಬೈನ ನಾನಾ ಭಾಗದಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಆ ಪೈಕಿ ಮುಂಬೈನ ಜುಹುನಲ್ಲಿರುವ ಬಹುಮಹಡಿ ಕಟ್ಟಡ ಕೂಡ ಒಂದು. ವಿಶೇಷ ಅಂದರೆ ಅಮಿತಾಬ್ ಬಚ್ಚನ್ ಅವರ ಜಲ್ಸಾ ನಿವಾಸಕ್ಕೆ ತುಂಬಾ ಹತ್ತಿರ ಇರುವ ಈ ಕಮರ್ಷಿಯಲ್ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ಎಸ್‌ಬಿಐ ಬ್ಯಾಂಕ್ 3150 ಚದರ ಅಡಿ ಸ್ಥಳವನ್ನು ಬಾಡಿಗೆ ಪಡೆದುಕೊಂಡಿದೆ. ಇದಕ್ಕೆ ಪ್ರತಿ ತಿಂಗಳು ಅಭಿಷೇಕ್ ಬಚ್ಚನ್ ಅವರಿಗೆ ಎಸ್‌ಬಿಐ ಬ್ಯಾಂಕ್ 18.09 ಲಕ್ಷ ರೂಪಾಯಿಯನ್ನು ಬಾಡಿಗೆಯ ರೂಪದಲ್ಲಿ ನೀಡುತ್ತಿದೆ.

ಇನ್ನೂ ಈ ಬಾಡಿಗೆ ಕೇವಲ ಐದು ವರ್ಷಕ್ಕೆ ಮಾತ್ರ ಸೀಮಿತ. ಐದು ವರ್ಷದ ನಂತರ ಈ ಬಾಡಿಗೆ ಇನ್ನೂ ದುಬಾರಿಯಾಗಲಿದೆ. ಆರರಿಂದ ಹತ್ತನೇ ವರ್ಷದವರೆಗೆ ಬಾಡಿಗೆಯ ಮೊತ್ತ 23.6 ಲಕ್ಷ ಇದ್ದರೆ ಹನ್ನೊಂದರಿಂದ ಹದಿನೈದು ವರ್ಷದವರೆಗೆ ಈ ಬಾಡಿಗೆ ಮೊತ್ತ 29.5 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ಹೀಗೊಂದು ವರದಿಯನ್ನು ಝ್ಯಾಪ್‌ಕಿ ಡಾಟ್‌ ಕಂ ವರದಿ ಮಾಡಿದೆ.

ಸದ್ಯಕ್ಕೆ ಈ ವರದಿಯನ್ನು ನೋಡಿದ ಅನೇಕರು ಅದೃಷ್ಟ ಅಂದರೆ ಇದು ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಹಣ ಸಂಪಾದನೆ ಮಾಡಲು ಅಭಿಷೇಕ್ ಬಚ್ಚನ್ ಬೆವರು ಸುರಿಸುವ ಅವಶ್ಯಕತೆಯೇ ಇಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಎಂದಿನಂತೆ ಅಭಿಷೇಕ್ ಬಚ್ಚನ್ ಕಾಲೆಳೆಯುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X