ಫ್ಲಾಪ್ ಚಿತ್ರಕ್ಕಾಗಿ ಸೂಪರ್ ಹಿಟ್ ಸಿನಿಮಾ ಕೈ ಬಿಟ್ಟಿದ್ದ ಅಕ್ಷಯ್ ಕುಮಾರ್?

ಕೆಲವೊಮ್ಮೆ ತಾವು ತೆಗೆದುಕೊಂಡು ತಪ್ಪು ನಿರ್ಧಾರಗಳಿಂದ ಬಹುದೊಡ್ಡ ಗೆಲುವನ್ನು ಜೀವನದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಇದು ಸಿನಿಮಾ ವಿಚಾರಕ್ಕೂ ಅನ್ವಯವಾಗುತ್ತದೆ. ಬೇಡ ಎಂದು ಕೈಬಿಟ್ಟ ಚಿತ್ರಗಳು ಕೆಲವು ಸಲ ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿರುವ ಉದಾಹರಣೆಗಳಿವೆ. ಆ ಸಕ್ಸಸ್ ನೋಡಿದ್ಮೇಲೆ ಯಾಕಾದರೂ ಈ ಚಿತ್ರ ಬಿಟ್ಟೆ ಎಂದು ಬೇಸರ ಕಾಡಿರುವುದು ಉಂಟು.

ಹೀಗೆ, ಅಕ್ಷಯ್ ಕುಮಾರ್ ಪಾಲಿಗೆ ಬಂದಿದ್ದ ಅವಕಾಶವೊಂದನ್ನು ಬೇಡ ಎಂದು ದೂರ ತಳ್ಳಿದರು. ಆಮೇಲೆ ಆ ಚಿತ್ರ ಇಂಡಸ್ಟ್ರಿ ಹಿಟ್ ಆಯಿತು. ಈ ಸಿನಿಮಾ ಕೈಬಿಟ್ಟಿದ್ದಾಗಿ ಅಕ್ಷಯ್ ಕುಮಾರ್ ಬಹಳ ನಿರಾಸೆ ಮಾಡಿಕೊಂಡಿದ್ದರು ಮತ್ತು ಬೇಸರವೂ ಮಾಡಿಕೊಂಡಿದ್ದರು. ಸ್ವತಃ ಅಕ್ಷಯ್ ಈ ಕುರಿತು ಹೇಳಿಕೊಂಡಿದ್ದರು. ಅಷ್ಟಕ್ಕೂ, ಅಕ್ಷಯ್ ಕುಮಾರ್ ರಿಜೆಕ್ಟ್ ಮಾಡಿದ ಹಿಟ್ ಆದ ಚಿತ್ರ ಯಾವುದು? ಯಾವ ಚಿತ್ರಕ್ಕಾಗಿ ಅಕ್ಷಯ್ ಈ ಸಿನಿಮಾ ಕೈಬಿಟ್ಟರು? ಮುಂದೆ ಓದಿ...

'ಭಾಗ್ ಮಿಲ್ಕಾ ಭಾಗ್' ಮಾಡಲ್ಲ ಅಂದಿದ್ದ ಅಕ್ಷಯ್

'ಭಾಗ್ ಮಿಲ್ಕಾ ಭಾಗ್' ಮಾಡಲ್ಲ ಅಂದಿದ್ದ ಅಕ್ಷಯ್

2013ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಸಿನಿಮಾ 'ಭಾಗ್ ಮಿಲ್ಕಾ ಭಾಗ್'. ಕಾಮನ್‌ವೆಲ್ತ್ ಗೇಮ್‌ನಲ್ಲಿ ಚಾಂಪಿಯನ್ ಆಗಿದ್ದ ಅಥ್ಲೆಟ್ ಮಿಲ್ಕಾ ಸಿಂಗ್ ಅವರ ಜೀವನ ಆಧರಿತ ಸ್ಕ್ರಿಪ್ಟ್ ಇದಾಗಿದ್ದು, ನಾಯಕನಾಗಿ ಫರಾನ್ ಅಖ್ತರ್ ನಟಿಸಿದ್ದರು. ಮೊದಲು ಈ ಅವಕಾಶ ಅಕ್ಷಯ್ ಕುಮಾರ್‌ಗೆ ಹೋಗಿತ್ತು. ಆದರೆ, ಅಕ್ಷಯ್ ಬೇರೆ ಚಿತ್ರಕ್ಕಾಗಿ ಈ ಸಿನಿಮಾ ಕೈ ಬಿಟ್ಟರು.

ಯಾವುದು ಆ ಚಿತ್ರ?

ಯಾವುದು ಆ ಚಿತ್ರ?

ಏಕ್ತಾ ಕಪೂರ್ ನಿರ್ಮಾಣದಲ್ಲಿ ತಯಾರಾಗಿದ್ದ 'ಒನ್ಸ್ ಅಪನ್ ಎ ಟೈಂ ಇನ್ ಮುಂಬೈ ದೊಬಾರ' ಎಂಬ ಚಿತ್ರಕ್ಕಾಗಿ 'ಭಾಗ್ ಮಿಲ್ಕಾ ಭಾಗ್' ಪ್ರಾಜೆಕ್ಟ್ ಕೈ ಬಿಟ್ಟರು. ಆಮೇಲೆ ನೋಡಿದ್ರೆ ಏಕ್ತಾ ಕಪೂರ್ ಜೊತೆಗೆ ಮಾಡಿದ ಚಿತ್ರ ಫ್ಲಾಪ್ ಆಯಿತು. ಹಾಕಿದ ಬಂಡವಾಳವೂ ಬರಲಿಲ್ಲ. ಅಕ್ಷಯ್ ವೃತ್ತಿ ಜೀವನದಲ್ಲಿ ಹೀನಾಯ ಸೋಲು ಕಂಡ ಚಿತ್ರ ಎನಿಸಿಕೊಂಡಿತ್ತು.

ಅಕ್ಷಯ್ ಕುಮಾರ್‌ಗೆ ಬೇಸರ ಇದೆ

ಅಕ್ಷಯ್ ಕುಮಾರ್‌ಗೆ ಬೇಸರ ಇದೆ

'ಭಾಗ್ ಮಿಲ್ಕಾ ಭಾಗ್' ಚಿತ್ರ ಮಾಡದಿರುವ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದ ಅಕ್ಷಯ್ ಕುಮಾರ್, 'ನಾನು ಆ ಚಿತ್ರ ಮಾಡದಿದ್ದಕ್ಕೆ ವಿಷಾದಿಸುತ್ತೇನೆ. ನನಗೆ ಆ ಚಿತ್ರದ ಅವಕಾಶ ನೀಡಲಾಯಿತು ಆದರೆ ನಾನು 'ಒನ್ಸ್ ಅಪನ್ ಎ ಟೈಂ ಇನ್ ಮುಂಬೈ ದೊಬಾರ' ಆಯ್ಕೆ ಮಾಡಿಕೊಂಡೆ. ಅಂದ್ಹಾಗೆ, ಈ ಆ ಮಾಡದಿರುವ ವಿಚಾರದಲ್ಲಿ ನನಗೆ ಅಪರಾಧಿ ಭಾವನೆ ಕಾಡುತ್ತಿದೆ. ಆ ಚಿತ್ರವನ್ನು ಸಹ ನಾನು ನೋಡಿಲ್ಲ'' ಎಂದು ಹೇಳಿಕೊಂಡಿದ್ದರು.

Recommended Video

ನ್ಯೂಸ್ ಚಾನೆಲ್ ಗಳು ಈ ರೀತಿ ಮಾಡುವುದನ್ನು ಮೊದಲು ನಿಲ್ಲಿಸಬೇಕು | Filmibeat Kannada
100 ಕೋಟಿ ಗಳಿಸಿದ ಚಿತ್ರ

100 ಕೋಟಿ ಗಳಿಸಿದ ಚಿತ್ರ

ಅಕ್ಷಯ್ ಕುಮಾರ್ ಮಾಡಲ್ಲ ಎಂದು ಕೈಬಿಟ್ಟಿದ್ದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಿತು. ಸುಮಾರು 200 ಕೋಟಿ ಗಳಿಕೆ ಕಂಡಿದೆ. ಭಾರತದಲ್ಲಿ ಮಾತ್ರ 100 ಕೋಟಿಗೂ ಅಧಿಕ ಹಣ ಗಳಿಸಿತ್ತು. ಆ ಸಮಯದಲ್ಲಿ ಬಾಲಿವುಡ್‌ ಇಂಡಸ್ಟ್ರಿಯಲ್ಲಿ ಹೆಚ್ಚು ಸಕ್ಸಸ್ ಮತ್ತು ಮೆಚ್ಚುಗೆ ಪಡೆದ ಚಿತ್ರ. ಇಂತಹ ಸಿನಿಮಾ ಕಳೆದುಕೊಂಡ ಅಕ್ಷಯ್ ಕುಮಾರ್ ಈಗಲೂ ಅದನ್ನು ಸ್ಮರಿಸಿಕೊಳ್ಳುತ್ತಾರೆ.

More from Filmibeat

English summary
Did you Know Bollywood actor Akshay Kumar rejected superhit 'Bhag Milkha Bhaag' Film?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X