ನಿಮ್ಮ ಕಣ್ಣುಗಳಿಗೆ ಸವಾಲ್: ಈ ಫೋಟೊದಲ್ಲಿರೋ ಇಬ್ಬರು ಸೂಪರ್ ಸ್ಟಾರ್ಸ್‌ನ ಕಂಡು ಹಿಡಿತ್ತೀರಾ?

By ಫಿಲ್ಮಿಬೀಟ್ ಡೆಸ್ಕ್

ಬಣ್ಣದ ಲೋಕದಲ್ಲಿ ಯಶಸ್ಸು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಮಾತ್ರ ಯಶಸ್ಸು ಸಿಗುತ್ತೆ. ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟ ಜೊತೆಯಾದರೆ ಚಮತ್ಕಾರಗಳು ನಡೆಯುತ್ತದೆ.

ಒಂದೇ ಒಂದು ಹಿಟ್ ಸಿನಿಮಾದಿಂದ ಸ್ಟಾರ್, ಸೂಪರ್ ಸ್ಟಾರ್ ಆಗುವವರು ಒಂದು ಸೋಲಿನಿಂದ ಪಾತಾಳಕ್ಕೆ ಬಿದ್ದುಬಿಡುತ್ತಾರೆ. ಸೂಪರ್ ಸ್ಟಾರ್‌ಗಳಿಗೂ ಪ್ರತಿ ಸಿನಿಮಾವೂ ಹೊಸ ಸಿನಿಮಾನೇ ಆಗಿರುತ್ತದೆ. ಯಾಕಂದರೆ ಇಲ್ಲಿ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ಎಲ್ಲರೂ ಸಕ್ಸಸ್‌ಗಾಗಿ ಪ್ರಯತ್ನ ಪಡುತ್ತಾರೆ. ಆದರೆ ಗೆಲುವು ಸಿಲ್ವರ್‌ ಸ್ಕ್ರೀನ್‌ ಮೇಲೆ ನಿರ್ಧಾರವಾಗುತ್ತದೆ. ಒಮ್ಮೆ ಸೋಲಿನ ಸುಳಿಗೆ ಸಿಲುಕಿದರೆ ಅದರಿಂದ ಬಿಡಿಸಿಕೊಂಡು ಹೊರಬರುವುದು ತಮಾಷೆಯ ಮಾತಲ್ಲ.

ಸದ್ಯ ಸೋಲಿನ ಸುಳಿಗೆ ಸಿಲುಕಿರುವ ಬಾಲಿವುಡ್‌ಗೆ 'ಪಠಾಣ್' ಸಿನಿಮಾ ಗೆಲುವಿನ ಟಾನಿಕ್ ನೀಡಿದೆ. ಸಿನಿಮಾ ಈಗಾಗಲೇ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ. ಇಂತ ಹೊತ್ತಲ್ಲೇ ಒಂದು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಫೋಟೋದಲ್ಲಿರುವ ಸ್ಟಾರ್ಸ್‌ ಯಾರು?

ಈ ಫೋಟೋದಲ್ಲಿರುವ ಸ್ಟಾರ್ಸ್‌ ಯಾರು?

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಇಬ್ಬರು ಸೂಪರ್ ಸ್ಟಾರ್ಸ್ ಇದ್ದಾರೆ. ಸರಿಯಾಗಿ ಗಮನಿಸಿದರೆ ಅದು ಯಾರು ಎಂದು ಗೊತ್ತಾಗುತ್ತದೆ. ಹೃತಿಕ್ ರೋಷನ್ ಹಾಗೂ ಜಾನ್ ಅಬ್ರಹಾಂ ಬಾಲ್ಯದ ಫೋಟೊ ಇದು. ಇಬ್ಬರು ಒಂದೇ ಶಾಲೆಯಲ್ಲಿ ಓದುತ್ತಿದ್ದಾಗ ಕ್ಲಿಕ್ಕಿಸಿರುವ ಗ್ರೂಪ್ ಫೋಟೊ. 'ಪಠಾಣ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ಈ ಫೋಟೊ ವೈರಲ್ ಆಗಿದೆ.

ಫೋಟೊದಲ್ಲಿ ಹೃತಿಕ್, ಜಾನ್ ಎಲ್ಲಿದ್ದಾರೆ?

ಫೋಟೊದಲ್ಲಿ ಹೃತಿಕ್, ಜಾನ್ ಎಲ್ಲಿದ್ದಾರೆ?

ಅಂದಹಾಗೆ ಫೋಟೊದಲ್ಲಿ ಹೃತಿಕ್, ಜಾನ್ ಎಲ್ಲಿದ್ದಾರೆ ಎನ್ನುವುದು ಗೊತ್ತಾಯ್ತಾ? ಆರಂಭದಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವರಿಗೆ ಗುರ್ತಿಸುವುದು ಕಷ್ಟ ಆಗುವುದಿಲ್ಲ. ಮುಂದಿನಿಂದ 2ನೇ ಸಾಲಿನಲ್ಲಿ ಎಡಕ್ಕೆ ಮೊದಲು ನಿಂತಿರುವುದು ಜಾನ್ ಅಬ್ರಹಾಂ. ಅದೇ ರೀತಿ 3ನೇ ಸಾಲಿನಲ್ಲಿ ಎಡದಿಂದ 3ನೇಯವನಾಗಿ ನಿಂತಿರುವ ಹುಡುಗ ಅಭಿಮಾನಿಗಳ ನೆಚ್ಚಿನ ಗ್ರೀಕ್‌ಗಾಡ್ ಹೃತಿಕ್ ರೋಷನ್. ಈ ಫೋಟೊ ನೋಡಿ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಕಬೀರ್ - ಜಿಮ್ ಪಾರ್ಟ್ನರ್‌ಶಿಪ್

ಕಬೀರ್ - ಜಿಮ್ ಪಾರ್ಟ್ನರ್‌ಶಿಪ್

ನೆಟ್ಟಿಗರೊಬ್ಬರು ಈ ಫೋಟೊ ಶೇರ್ ಮಾಡಿ "ಹೃತಿಕ್ ಹಾಗೂ ಜಾನ್ ಅಬ್ರಹಾಂ ಮುಂಬೈನ ಸ್ಕಾಟಿಷ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಅಂದರೆ ಕಬೀರ್ ಹಾಗೂ ಜಿಮ್ ಪಾರ್ಟ್ನರ್‌ಶಿಪ್ ಬಹಳ ಹಿಂದಿನದ್ದು" ಎಂದು ಬರೆದುಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಯಶ್ ರಾಜ್‌ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ 'ವಾರ್' ಹಾಗೂ 'ಪಠಾಣ್' ಕಥೆಗಳು ಮೂಡಿ ಬಂದಿದೆ. ಹಾಗಾಗಿ ವಾರ್ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಹಾಗೂ 'ಪಠಾಣ್' ಚಿತ್ರದಲ್ಲಿ ಜಾನ್ ಅಬ್ರಹಾಂ ಮಾಡಿರುವ ಜಿಮ್ ಪಾತ್ರವನ್ನು ಪ್ರಸ್ತಾಪಿಸಿ ಈ ರೀತಿ ಬರೆದಿದ್ದಾರೆ. ಹಾಗಾಗಿ ಈ ಪೋಸ್ಟ್ ವೈರಲ್ ಆಗಿದೆ.

ಬಾಲಿವುಡ್ ಸೂಪರ್ ಸ್ಟಾರ್ಸ್

ಬಾಲಿವುಡ್ ಸೂಪರ್ ಸ್ಟಾರ್ಸ್

ಹೃತಿಕ್ ರೋಷನ್ ಹಾಗೂ ಜಾನ್ ಅಬ್ರಹಾಂ ಇಬ್ಬರು ಬಾಲಿವುಡ್‌ ಸೂಪರ್ ಸ್ಟಾರ್‌ಗಳಾಗಿ ಮೆರೆದವರು. ಇತ್ತೀಚೆಗೆ ಜಾನ್ ಅಬ್ರಹಾಂ ಹೀರೊ ಆಗಿ ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಾಗಿ 'ಪಠಾಣ್' ಚಿತ್ರದಲ್ಲಿ ನೆಗೆಟಿವ್ ರೋಲ್ ಟ್ರೈ ಮಾಡಿದ್ದಾರೆ. ಅವರ ಪ್ರಯತ್ನಕ್ಕೆ ಸಕ್ಸಸ್ ಸಿಕ್ಕಿದೆ. ಹೃತಿಕ್ ಹಾಗೂ ಜಾನ್ ಅಸಂಖ್ಯಾತ ಹೆಣ್ಣು ಮಕ್ಕಳ ನಿದ್ದೆ ಕದ್ದ ಚೋರರು. ಇಬ್ಬರು ಆತ್ಮೀಯ ಸ್ನೇಹಿತರು ಕೂಡ. ಆದರೆ ಇಬ್ಬರು ಒಂದೇ ಶಾಲೆಯಲ್ಲಿ ಓದಿದ್ದರು ಎನ್ನುವ ವಿಚಾರ ಬಹಳ ಜನಕ್ಕೆ ಗೊತ್ತಿರಲಿಲ್ಲ.

More from Filmibeat

English summary
Did you know Hrithik Roshan and John Abraham were classmates in school? Hrithik and John were classmates at Bombay Scottish School. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X