ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಬಂದ ನಿಮ್ರತ್ ಕೌರ್ ಯಾರು ? ರವಿ ಶಾಸ್ತ್ರಿ ಜೊತೆ ಈ ಚೆಲುವೆಯ ಸಂಬಂಧವೇನು ?
ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ.. ರೀಲ್‌ನಲ್ಲಿ ಚಿಗುರೊಡೆಯುವ ಪ್ರೀತಿ ಬಹುತೇಕ ರಿಯಲ್ ಆಗಿರುತ್ತೆ. ಇದಕ್ಕೆ.. ಉದಾಹರಣೆ ಎಂಬಂತೆ ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಅನೇಕರು ಈ ಬಣ್ಣದ ಪ್ರಪಂಚದಲ್ಲಿದ್ದಾರೆ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಈ ವರ್ಷ ಅರ್ಧ ಡಜನ್ ತಾರೆಯರು ಮದುವೆಯ ಬಂಧನದಿಂದ ಮುಕ್ತರಾಗಿದ್ದಾರೆ. ಈ ಸಾಲಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅಧಿಕೃತವಾಗಿ ಯಾವತ್ತು ಸೇರಿಕೊಳ್ಳುತ್ತಾರೆ ಎನ್ನುವುದು ಗೊತ್ತಿಲ್ಲವಾದರೂ ಸದ್ಯಕ್ಕೆ ಇವರಿಬ್ಬರ ಸಾಂಸಾರಿಕ ಜೀವನ ಅನೇಕರ ಬಾಯಿಗೆ ಆಹಾರವಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಮುರಿದು ಬೀಳಲು ನಿಮ್ರತ್ ಕೌರ ಕಾರಣವೆನ್ನುವ ಮಾತು ಕೇಳಿ ಬರುತ್ತಿದೆ.

ಹರಿದಾಡುತ್ತಿರುವ ಈ ಸುದ್ದಿಯಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದು ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಗೊತ್ತಾದರೂ ಸದ್ಯಕ್ಕೆ ನಿಮ್ರತ್ ಕೌರ್ ಅವರ ಜಾತಕವನ್ನು ಅನೇಕರು ಕೈಯಲ್ಲಿ ಹಿಡಿದು ಕುಂತಿದ್ದಾರೆ. ಅಭಿಷೇಕ್ ಬಚ್ಚನ್ ಬದುಕಿನಲ್ಲಿ ನಿಮ್ರತ್ ಬರುವ ಮುನ್ನ ಯಾರೆಲ್ಲರ ಜೊತೆ ನಿಮ್ರತ್ ಓಡಾಡಿದ್ದರು ಎನ್ನುವುದನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಹೌದು, ಅದು, 2018ರ ಸಮಯ. ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರೀ ಭಾರತದ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಿದ್ದರು. ಈ ಸಂದರ್ಭದಲ್ಲಿ ನಿಮ್ರತ್ ಕೌರ್ ಹೆಸರು ರವಿ ಶಾಸ್ತ್ರೀ ಜೊತೆ ಥಳುಕು ಹಾಕಿಕೊಂಡಿತ್ತು. ಕಳೆದ ಎರಡು ವರ್ಷದಿಂದ ನಿಮ್ರತ್ ಕೌರ್ ಜೊತೆ ರವಿ ಶಾಸ್ತ್ರೀ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಇದಕ್ಕೆ ಪೂರಕವಾಗಿ ಇಬ್ಬರು ಹಲವು ಸಭೆ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಹರಿದಾಡುತ್ತಿರುವ ಸುದ್ದಿಯನ್ನು ಕೇಳಿ ಆಗ ಕೂಡಲೇ ಎಚ್ಚೆತ್ತುಕೊಂಡ ಇಬ್ಬರು ಈ ವಿಚಾರಕ್ಕೆ ಕೆರಳಿ ಕೆಂಡವಾಗಿದ್ದರು. ಎಲ್ಲವೂ ಕಪೋಲಕಲ್ಪಿತ ಸುದ್ದಿಯೆಂದು ಹೇಳಿದ್ದರು. ಆ ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿಲ್ಲ ಅನ್ನುವುದು ಬೇರೆ ವಿಷಯ.

ಇದೆಲ್ಲದರ ನಡುವೆ ನಿಮ್ರತ್ ಹೆಸರು ಬಾಹುಬಲಿಯ ಬಲ್ಲಾಳ ದೇವ ರಾಣಾ ದಗ್ಗುಬಾಟಿ ಜೊತೆ ಕೇಳಿ ಬಂದಿತ್ತು. ಆದರೆ ಇವರಿಬ್ಬರ ನಡುವೆ ಪ್ರೇಮಾಂಕುರವಾದ ಸಾಕ್ಷಿ ಸಿಗದ ಕಾರಣ ಇಬ್ಬರ ಕುರಿತು ಹೆಚ್ಚು ಯಾರು ತಲೆಕೆಡಿಸಿಕೊಳ್ಳಲಿಲ್ಲ. ರಾಣಾ ದಗ್ಗುಬಾಟಿ ಮತ್ತು ನಿಮ್ರತ್ ಕೌರ್ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಹೋಗಲಿಲ್ಲ.
ಹೀಗೆ ಕಾಲ ಕಾಲಕ್ಕೆ ಚರ್ಚೆಯಾಗುತ್ತಾ ಬಂದ ನಿಮ್ರತ್ ಕೌರ್ ಹೆಸರು ಈಗ ಅಭಿಷೇಕ್ ಬಚ್ಚನ್ ಜೊತೆ ಕೇಳಿ ಬರುತ್ತಿದೆ. ಊರಲ್ಲೆಲ್ಲ ಇವರ ಪ್ರೇಮ ಪ್ರಕರಣ ಚರ್ಚೆಯಲ್ಲಿದೆ. 2021ರಲ್ಲಿ ದಸ್ವಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ಲವ್ ಸ್ಟೋರಿ ಶುರುವಾಯಿತು ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಸಮಯದಲ್ಲಿ ನಿಮ್ರತ್ ಕೌರ್ ಸೌಂದರ್ಯಕ್ಕೆ ಅಭಿಷೇಕ್ ಬಚ್ಚನ್ ಮನ ಸೋತಿದ್ದರು. ಪ್ರೀತಿಯಲ್ಲಿ ಬಿದ್ದಿದ್ದರು. ಇನ್ನೂ ನಿಮ್ರತ್ ಕೌರ್ ಕೂಡ ಅಭಿಷೇಕ್ ಬಚ್ಚನ್ ಅವರಿಂದ ಅಂತರವನ್ನು ಕಾಪಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಅಭಿಷೇಕ್ ಬಚ್ಚನ್ ಜೊತೆ ತೀರಾ ಸಲುಗೆಯನ್ನು ಬೆಳೆಸಿಕೊಂಡಿದ್ದರು. ಅಭಿಷೇಕ್ ಬಚ್ಚನ್ ಅವರನ್ನು ನಿಮ್ರತ್ ಕೌರ್ ಕೂಡ ಪ್ರೀತಿಸಲು ಶುರು ಮಾಡಿದ್ದರು ಎಂಬೆಲ್ಲ ಮಾತು ಅಂತೆ ಕಂತೆಯ ಸಂತೆಯ ಕೇಳಿ ಬರುತ್ತಿದೆ. ಆದರೆ, ಇಷ್ಟೆಲ್ಲ ಮಾತು ಕೇಳಿ ಬರುತ್ತಿದ್ದರು ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಮತ್ತು ನಿಮ್ರತ್ ಕೌರ್ ಮೌನಕ್ಕೆ ಶರಣಾಗಿದ್ದಾರೆ.


Click it and Unblock the Notifications











