'ಮಲೈಕಾ ಅರೋರಾ'ಗೋಸ್ಕರ ಸಲ್ಮಾನ್ ಖಾನ್ ತಂಗಿ 'ಅರ್ಪಿತಾ'ಗೆ ಕೈ ಕೊಟ್ಟಿದ್ದ ಅರ್ಜುನ್ ಕಪೂರ್..?

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು ಹೃದಯವಂತರ ಪ್ರಶ್ನೆ.

ಸದ್ಯ ಮಲೈಕಾ ಅರೋರಾ ಕೂಡ ಇಂತಹದ್ದೇ ನೋವನ್ನು ಅನುಭವಿಸುತ್ತಿದ್ದಾರೆ. ಅರ್ಜುನ್ ಕಪೂರ್ ಜೊತೆ ಸಂಬಂಧ ಕಡಿದುಕೊಂಡು ಮನದಲ್ಲಿ ನೋವು ಇದ್ದರೂ ನಗುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಮಲೈಕಾ ಅರೋರಾ ಈಗ ಮರಳಿ ಸಲ್ಮಾನ್ ಖಾನ್ ಕುಟುಂಬದ ಕಡೆ ಬಂದಿದ್ದಾರೆ.

ಹೌದು, ಅಸಲಿಗೆ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಹೊಸ ರೆಸ್ಟೋರೆಂಟ್‌ನ ಮುಂಬೈನಲ್ಲಿ ಶುರು ಮಾಡಿದ್ದಾರೆ. ಈ ರೆಸ್ಟೋರೆಂಟ್ ಉದ್ಘಾಟನೆಯ ಪ್ರಯುಕ್ತ ಮಲೈಕಾ ಅರೋರಾ, ಅರ್ಪಿತಾ ಅವರನ್ನು ಭೇಟಿಯಾಗಿದ್ದಾರೆ. ಇದೇ ನೆಪದಲ್ಲಿ ತಮ್ಮ ಮಾಜಿ ಪತಿ ಅರ್ಬಾಜ್ ಖಾನ್ ಮತ್ತು ತಮ್ಮ ಮಗ ಅರ್ಹಾನ್ ಖಾನ್ ಅವರ ಜೊತೆ ಕೆಲ ಕಾಲ ಕಳೆದಿದ್ದಾರೆ.

ಇನ್ನೂ ಕೇವಲ ಮಲೈಕಾ ಮಾತ್ರ ಅಲ್ಲ ಸೊಹೈಲ್ ಖಾನ್ ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್ ಕೂಡ ಅರ್ಪಿತಾ ಖಾನ್ ಅವರ ರೆಸ್ಟೋರೆಂಟ್‌ನ ಉದ್ಘಾಟನೆಗೆ ಬಂದಿದ್ದಾರೆ. ಅರ್ಪಿತಾ ಖಾನ್‌ ಅವರಿಗೆ ಶುಭ ಕೋರಿದ್ದಾರೆ.

Did you know that before Malaika Arora Arjun Kapoor once dated a member of Salman Khan s family

ಅಂದ್ಹಾಗೇ ಮಲೈಕಾ ಅರೋರಾ ಹೃದಯವನ್ನು ನುಚ್ಚು ನೂರು ಮಾಡಿರುವ ಅರ್ಜುನ್ ಕಪೂರ್ ಈ ಹಿಂದೆ ಇದೇ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಜೊತೆ ಲವ್ವು ಡವ್ವು ಎಂದು ತಿರುಗಾಡುತ್ತಿದ್ದರು ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ಹೌದು, ಮಲೈಕಾ ಅರೋರಾ ಅವರ ಬದುಕಿನಲ್ಲಿ ಪ್ರವೇಶಿಸುವ ಮೊದಲು ಬರೋಬ್ಬರಿ ಎರಡು ವರ್ಷ ಅರ್ಪಿತಾ ಖಾನ್ ಅವರನ್ನು ಅರ್ಜುನ್ ಕಪೂರ್ ಪ್ರೀತಿ ಮಾಡಿದ್ದರು. ಜೊತೆಯಲ್ಲಿ ಸುತ್ತಾಡಿದ್ದರು. ಖುದ್ದು ಬಾಂಬೆ ಟೈಮ್ಸ್‌ ಗೆ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಅರ್ಜುನ್ ಕಪೂರ್ ಈ ಮಾತನ್ನು ಹೇಳಿದ್ದರು.

did-you-know-that-before-malaika-arora-arjun-kapoor-once-dated-a-member-of-salman-khans-family

ನನಗಾಗ 18 ವರ್ಷ ನಾನು ಮತ್ತು ಅರ್ಪಿತಾ ಪರಸ್ಪರ ಇಷ್ಟ ಪಡಲು ಶುರು ಮಾಡಿದ್ದೇವು, ಎರಡು ವರ್ಷಗಳ ಕಾಲ ನಮ್ಮ ಸಂಬಂಧ ಮುಂದುವರೆದಿತ್ತು ಎಂದು ತಮ್ಮ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದರು. ನಾನು ಗಂಭೀರವಾಗಿ ಪರಿಗಣಿಸಿದ್ದ ಏಕೈಕ ಸಂಬಂಧ ಅಂದರೆ ಅದು ಅರ್ಪಿತಾ ಜೊತೆಗಿನ ಸಂಬಂಧ ಮಾತ್ರ ಎಂದಿದ್ದರು. ಸಲ್ಮಾನ್ ಭಾಯ್ ಬಗ್ಗೆ ನನಗೆ ಭಯ ಇತ್ತು. ಆದರೂ ಒಮ್ಮೆ ಧೈರ್ಯ ಮಾಡಿ ಹೇಳಿದೆ ಅದಕ್ಕೆ ಅವರು ಹೆಚ್ಚೇನು ಮಾತನಾಡದೇ ನಮ್ಮ ಸಂಬಂಧವನ್ನು ಗೌರವಿಸಿದರು ಎಂದು ಅರ್ಜುನ್ ಕಪೂರ್ ಹೇಳಿದ್ದರು.

ಹೀಗೆ ಅರ್ಪಿತಾ ಖಾನ್ ಅವರನ್ನು ನೋಡಲು ಸಲ್ಮಾನ್ ಮನೆಗೆ ಹೋಗುತ್ತಿದ್ದ ಅರ್ಜುನ್ ಕಪೂರ್ ಅವರನ್ನು ನೋಡಿ ಮಲೈಕಾ ಅರೋರಾ ಪ್ರೀತಿಯಲ್ಲಿ ಬಿದ್ದರಾ ಗೊತ್ತಿಲ್ಲ. ಆದರೆ ಈ ಅನುಮಾನವಂತೂ ಅನೇಕರಲ್ಲಿ ಇದ್ದೇ ಇದೆ. ಇನ್ನುಳಿದಂತೆ ಸದ್ಯ ಮುಂಬೈನಲ್ಲಿ ಹೊಸ ರೆಸ್ಟೋರೆಂಟ್ ಆರಂಭ ಮಾಡಿರುವ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್, ಆಯುಶ್ ಶರ್ಮಾ ಜೊತೆ ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ನೆಮ್ಮದಿಯ ಜೀವನವನ್ನು ಸದ್ಯಕ್ಕೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಅರ್ಜುನ್ ಕಪೂರ್ ಅವರಿಂದ ದೂರವಾದ ಮಲೈಕಾ ಅರೋರಾ ನೆಮ್ಮದಿಯನ್ನು ಹುಡುಕುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X