ಹೃದಯ ಮತ್ತು ಪೌರತ್ವ ಎರಡೂ ಹಿಂದೂಸ್ಥಾನಿ: ಸ್ವಾತಂತ್ರ್ಯ ದಿನದಂದು ಖುಷಿ ವಿಷಯ ಹಂಚಿಕೊಂಡ ಅಕ್ಷಯ್ ಕುಮಾರ್

ಕೆನಡಾ ದೇಶದ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಭಾರತೀಯ ಪೌರತ್ವ ದೊರೆತಿದೆ ಎಂದು ನಟ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಿಳಿಸಿದ್ದಾರೆ. ದೇಶವು 77ನೇ ಸ್ವಾತಂತ್ಯ ದಿನವನ್ನು ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

ಅಕ್ಷಯ್ ಕುಮಾರ್ ಕೆನಡಾದ ಪೌರತ್ವ ಹೊಂದಿದ್ದು, ಭಾರತೀಯ ಪೌರತ್ವ ಪಡೆದಿಲ್ಲ ಎಂಬ ಬಗ್ಗೆ ಸಾಕಷ್ಟು ಬಾರಿ ಟೀಕೆಗೆ ಒಳಗಾಗಿದ್ದಾರೆ. ಈ ವರ್ಷದ ಆರಂಭದಲ್ಲಿ, ಆಜ್‌ತಕ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತ ತನಗೆ ಸರ್ವಸ್ವ ಎಂದು ಹೇಳಿದ್ದರು. ಜೊತೆಗೆ ಇಲ್ಲಿನ ಪೌರತ್ವ ಪಡೆಯಲು ಈಗಾಗಲೇ ಪಾಸ್‌ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ನಟ ಹೇಳಿದ್ದರು.

akshay-kumar-gets-indian-citizenship

1990 ರ ದಶಕದಲ್ಲಿ, ಅಕ್ಷಯ್ ಕುಮಾರ್ ಸತತ 15 ಕ್ಕೂ ಹೆಚ್ಚು ಫ್ಲಾಪ್ ಸಿನಿಮಾಗಳನ್ನು ನೀಡಿದ್ದರು. ಆಗ ಅನಿವಾರ್ಯವಾಗಿ ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಯಿತು ಎಂದು ನಟ ಹೇಳಿಕೊಂಡಿದ್ದಾರೆ. ಈ ನಿರ್ಧಾರ ತಮ್ಮ ಜೀವನದ ಅತ್ಯಂತ ಕಠಿಣ ನಿರ್ಧಾರ ಎಂಬುದನ್ನು ತಿಳಿಸಿದ್ದರು. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರು ಮತ ಚಲಾಯಿಸದ ನಂತರ ಅವರ ಪೌರತ್ವದ ಬಗ್ಗೆ ತೀವ್ರ ಟೀಕೆಗಳು ಕೇಳಿ ಬಂದಿದ್ದವು.

2019 ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ "ರಾಜಕೀಯೇತರ" ಸಂದರ್ಶನವನ್ನು ನಟ ಅಕ್ಷಯ್ ಕುಮಾರ್ ನಡೆಸಿದ್ದರು. ಇದಾದ ನಂತರ ಅವರ ಪೌರತ್ವದ ವಿಷಯವೂ ಭಾರಿ ಚರ್ಚೆಗೆ ಗುರಿಯಾಗಿತ್ತು.

ಸ್ವಾತಂತ್ರ್ಯ ದಿನಾಚರಣೆಯ ಶುಭ ದಿನದಂದು ದೇಶದ ನಾಗರಿಕರಿಗೆ ಶುಭಾಶಯಗಳನ್ನು ತಿಳಿಸುವಾಗ ನಟ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ " ಈಗ ಹೃದಯ ಮತ್ತು ಪೌರತ್ವ, ಎರಡೂ ಹಿಂದೂಸ್ತಾನಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಶೀರ್ಷಿಕೆ ನೀಡಿದ್ದಾರೆ.

ಇನ್ನು, ಕೆಲಸದ ವಿಚಾರಕ್ಕೆ ಬಂದರೆ ಸರರ ಸೋಲುಗಳಿಂದ ಕಂಗೇಟ್ಟಿದ ನಟ ಕೊನೆಗೂ ಓ ಮೈ ಗಾಡ್ ಸೀಕ್ವೆಲ್ ಮೂಲಕ ಹಿಟ್ ಚಿತ್ರವನ್ನು ನೀಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ OMG 2 ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಈ ಚಿತ್ರ ಭಾರತದಲ್ಲಿ ಒಟ್ಟು 55.17 ಕೋಟಿ ರೂಪಾಯಿ ಗಳಿಸಿದೆ. ಸೋಮವಾರ ಬರೋಬ್ಬರಿ 12.06 ಕೋಟಿ ರೂ. ಗಳಿಸಿದೆ. ಆದರೆ, ಸಿನಿಮಾ ಬಿಡುಗಡೆಯಾದ ದಿನದಂದು 10.26 ಕೋಟಿ ಗಳಿಸಿತ್ತು. ಚಿತ್ರವು ತನ್ನ ಐದನೇ ದಿನಕ್ಕೆ ಭಾರತದಲ್ಲಿ 20.00 ಕೋಟಿ ನಿವ್ವಳ ಗಳಿಸುತ್ತದೆ ಎಂದು ಅಂದಾಜಿಸಲಾಗಿದೆ.

ಚಿತ್ರದಲ್ಲಿ, ಅಕ್ಷಯ್ ಕುಮಾರ್ ಶಿವನ ಸಂದೇಶವಾಹಕನ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಶೂ ಮಾಡಲು ಜಟೆಗಳನ್ನು ಧರಿಸಿರುವುದಕ್ಕೆ ಭಾರೀ ಟಿಕೆಗರ ಒಳಗಾಗಿದ್ದಾರೆ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಕಾಂತಿ ಶರಣ್ ಮುದ್ಗಲ್ ಎಂಬ ಭಗವಾನ್ ಶಿವಭಕ್ತನ ಪಾತ್ರವನ್ನು ನಿರ್ವಹಿಸಿದ್ದಾರೆ, ಯಾಮಿ ಗೌತಮ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಅಮಿತ್ ರೈ ಅವರ ನಿರ್ದೇಶನದಲ್ಲಿ "OMG 2" ಅನ್ನು ಕೇಪ್ ಆಫ್ ಗುಡ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಚಿತ್ರವು ಟೀನೆಜರ್ಸ್ ಸಮಸ್ಯೆಗಳು ಮತ್ತು ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಈ ಹಿಂದೆ, ನಿರ್ಮಾಪಕರು ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ಗಳನ್ನು ಬಿಡುಯಗಡೆ ಮಾಡಿದಾಗಿನಿಂದ ಚಿತ್ರವು ವಿವದಾದಲ್ಲಿತ್ತು. ಚಲನಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ 'A' (ವಯಸ್ಕರು ಮಾತ್ರ) ಪ್ರಮಾಣಪತ್ರವನ್ನು ನೀಡಿದೆ.

More from Filmibeat

English summary
Bollywood actor Akshay Kumar gets Indian citizenship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X